ಈ ಬಾರಿ ಐಪಿಎಲ್ ಹರಾಜಿನಲ್ಲಿ ಹೊಸ ನಿಯಮ ಜಾರಿ! ಏನು ಗೊತ್ತಾ ಆ ನಿಯಮ, ನೋಡಿ ಒಮ್ಮೆ

ದೇಶಿಯ ಪ್ರತಿಷ್ಟಿತ ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಗೆ ವಿವಿಧ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿವೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಗೆ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಂಡಿವೆ.ಒಂದು ಲಕ್ನೋ ಫ್ರಾಂಚೈಸಿ ಮತ್ತು ಇನ್ನೊಂದು ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ ವೀರ್ ಸಿಂಗ್ ದಂಪತಿಗಳ ಮಾಲೀಕತ್ವದ ನೂತನ ಫ್ರಾಂಚೈಸಿ. ಇದುವರೆಗೆ ಎಂಟು ಫ್ರಾಂಚೈಸಿ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ ಹತ್ತು ತಂಡಗಳು ಸೆಣಸಾಡಲಿವೆ.ಅಂತೆಯೇ ಹೊಸ ಫ್ರಾಂಚೈಸಿ ತಂಡಗಳು ತಮ್ಮ ತಂಡಕ್ಕೆ ಉತ್ತಮ ಆಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ಪಂಜಾಂಬ್ ಕಿಂಗ್ಸ್ ತಂಡದಿಂದ ಹೊರ ಬರಲು ಇಚ್ಚಿಸಿರುವ ಕನ್ನಡಿಗ ಕೆ.ಎಲ್. ರಾಹುಲ್.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಅವರನ್ನು ತಮ್ಮ ಫ್ರಾಂಚೈಸಿಗೆ ಖರೀದಿ ಮಾಡಲು ಹೊಸ ಫ್ರಾಂಚೈಸಿಯಾದ ಲಕ್ನೋ ತಂಡ ಉತ್ಸುಕವಾಗಿದೆ. ಇನ್ನು ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯಲ್ಲಿ ಬಿಸಿಸಿಐ ಹೊಸದೊಂದು ನಿಯಮವನ್ನು ರೂಪಿಸಿದೆ. ರಿಟೇನ್ ಎಂಬ ಹೊಸ ನಿಯಮದ ಪ್ರಕಾರ ಯಾವುದೇ ಒಂದು ಫ್ರಾಂಚೈಸಿ ತಂಡ ತನ್ನ ತಂಡದಲ್ಲಿ ತಮ್ಮ ತಂಡದಲ್ಲಿ ಆಡಿರುವ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿರುತ್ತದೆ. ಅದೂ ಕೂಡ ಹರಾಜಿನಲ್ಲಿ ಆ ಆಟಗಾರರಿಗೆ ಎಷ್ಟು ಮೊತ್ತ ಬೇಡಿಕೆ ಇರುತ್ತದೋ ಅಷ್ಟು ಮೊತ್ತವನ್ನು ನೀಡಿ ಆಟಗಾರರನ್ನ ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಬೇಕಾಗಿರುತ್ತದೆ.

ಇಲ್ಲಿ ಆಟಗಾರರು ಯಾವ ತಂಡದಲ್ಲಿ ತಾನು ಆಟ ಆಡಬೇಕು ಬೇಕು ಎಂಬುದನ್ನ ಸ್ವತಂತ್ರವಾಗಿ ನಿರ್ಧರಿಸಬಹುದಾಗಿದೆ. ನಾಲ್ಕು ಜನರಲ್ಲಿ ಇಬ್ಬರು ವಿದೇಶಿ ಆಟಗಾರರು ಅಥವಾ ಒಬ್ಬ ವಿದೇಶಿ ಆಟಗಾರರೊಂದಿಗೆ ತಮ್ಮ ತಂಡದಲ್ಲಿ ಆಟಗಾರರನ್ನ ರಿಟೇನ್ ಮಾಡಿಕೊಳ್ಳುವ ಅವಕಾಶ ಇರುತ್ತದೆ ಹೊರತು ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶ ಇರುವುದಿಲ್ಲ. ಇನ್ನು ಬಿಸಿಸಿಐ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಈ ಆಟಗಾರರ ಹರಾಜು ಪ್ರಕ್ರಿಯೆಯು ಇದೇ ಡಿಸೆಂಬರ್ ತಿಂಗಳ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಆರಂಭಿಸುವ ಬಗ್ಗೆ ಬಿಸಿಸಿಐ ಸಿದ್ದತೆ ನಡೆಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.