ಈ ಅಪರೂಪದ ಸೊಪ್ಪು ಸಿಕ್ಕರೆ ಮಾತ್ರ ಬಿಡಬೇಡಿ, ಇದರಿಂದ ಆಗುವ ಲಾಭಗಳು ಒಂದೆರಡಲ್ಲ

ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತೊಂದಿದೆ. ಅಂದ್ರೆ ನಮ್ಮಲ್ಲಿಯೇ ಅನೇಕ ಔಷಧಿ ಗಿಡ ಮೂಲಿಕೆಗಳು ಇದ್ದರು ಕೂಡ ಅದರ ಬಗ್ಗೆ ಅದರ ಮಹತ್ವ, ಪ್ರಯೋಜನಗಳ ಬಗ್ಗೆ ಅರಿಯದೇ ನಾವು ಕೆಲವು ಗಿಡಗಳನ್ನ ನಿರ್ಲಕ್ಷ್ಯ ಮಾಡಿರ್ತೇವೆ. ಆದ್ರೇ ಅಂತಹ ಗಿಡಗಳು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡ್ತಿರ್ತವೆ. ಅಂತದ್ದೇ ಒಂದು ಗಿಡ ಅಂದ್ರೆ ಅದು ಚಕ್ರಮುನಿ ಸೊಪ್ಪಿನ ಗಿಡ. ಈ ಚಕ್ರಮುನಿ ಸೊಪ್ಪು ನಮ್ಮ ಆರೋಗ್ಯ ವೃದ್ದಿಗೆ ಸಹಾಯಕಾರಿಯಾಗಿದೆ. ಈ ಸೊಪ್ಪನ್ನ ಬಿಪಿ ಸೊಪ್ಪು ಅಂತಲೂ ಕರೆಯುತ್ತಾರಂತೆ. ಈ ಚಕ್ರಮುನಿ ಸೊಪ್ಪು ಹೆಚ್ಚಾಗಿ ಈ ಕೇರಳ, ತಮಿಳು ನಾಡು ಮತ್ತು ನಮ್ಮ ಕರ್ನಾಟಕದ ಕೆಲವು ಭಾಗಗಳಲ್ಲಿ ಕಂಡು ಬರುತ್ತವೆಯಂತೆ.

ಈ ಚಕ್ರಮುನಿ ಸೊಪ್ಪು ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿ ಆರೋಗ್ಯ ವೃದ್ದಿಸುವುದರಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ರಕ್ತ ಕಡಿಮೆ ಇರೋ ವ್ಯಕ್ತಿಗಳು ಈ ಚಕ್ರಮುನಿ ಸೊಪ್ಪನ್ನ ಸೇವನೆ ಮಾಡಿದರೆ ರಕ್ತ ಹೆಚ್ಚು ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಕೆಲವು ಹೆಣ್ಣು ಮಕ್ಕಳಿಗೆ ಪೀರಿಯಡ್ ಸಮಯದಲ್ಲಿ ಅಧಿಕ ರಕ್ತಸ್ತ್ರಾವ ಆಗುತ್ತದೆ. ಇಂತಹ ಹೆಣ್ಣು ಮಕ್ಕಳು ಈ ಚಕ್ರಮುನಿ ಸೊಪ್ಪನ್ನ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತದೆ. ಜೊತೆಗೆ ಕಿಡ್ನಿ ಸಮಸ್ಯೆ ಇರೋರು ಕೂಡ ಈ ಸೊಪ್ಪನ್ನ ಸೇವನೆ ಮಾಡ್ಬೋದು. ಇನ್ನು ಆಗಾಗ ಹವಾಮಾನದ ಬದಲಾವಣೆ ಅಗಿ ಶೀತ, ಕೆಮ್ಮು, ನೆಗಡಿ ನಿವಾರಣೆ ಮತ್ತು ಈ ರಕ್ತ ಶುದ್ದಿ ಆಗೋದಕ್ಕೆ ಈ ಚಕ್ರಮುನಿ ಸೊಪ್ಪು ಅತ್ಯಂತ ಉಪಯುಕ್ತಕಾರಿ ಎಂದು ಹೇಳಲಾಗುತ್ತದೆ.

ಇಷ್ಟೊಂದು ಪ್ರಯೋಜನ ಇರೋ ಈ ಚಕ್ರಮುನಿ ಸೊಪ್ಪಿನಲ್ಲಿ ಯಾವ್ಯಾವ ಪ್ರೊಟೀನ್ ಅಂಶಗಳು ಇರಲಿದೆ ಅನ್ನೋದನ್ನ ನೋಡೋದಾದರೆ ಈ ಸೊಪ್ಪಿನಲ್ಲಿ ವಿಟಮಿನ್ ಎ,ಬಿ,ಸಿ, ಜೊತೆಗೆ ವಿಟಮಿನ್ ಕೆ ಹೇರಳವಾಗಿ ಇರುತ್ತವೆಯಂತೆ. ಇವು ಸ್ನಾಯುಗಳನ್ನ ಗಟ್ಟುಮುಟ್ಟಾಗಿ ಇರೋವಂತೆ ಪ್ರೇರಕವಾಗಿವೆಯಂತೆ. ಜೀವಸತ್ವಗಳು ಅಧಿಕ ಇರೋದ್ರಿಂದ ಈ ಚಕ್ರಮುನಿ ಸೊಪ್ಪು ಮೂತ್ರಪಿಂಡದ ಸಮಸ್ಯೆಗಳಿಗೆ ಉತ್ತಮ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನು ನೀವು ಈ ಚಕ್ರಮುನಿ ಸೊಪ್ಪನ್ನ ಆರಾಮಾದಾಯಕವಾಗಿ ಅಗಿದು ಸೇವಿಸಬಹುದಾಗಿರುತ್ತದೆ. ಇದರಿಂದ ಒಟ್ಟಾರೆಯಾಗಿ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನ ಕಂಡುಕೊಳ್ಳಬಹುದು ಎಂದು ನಾಟಿ ವೈದ್ಯರು ಸಲಹೆ ನೀಡಿದ್ದಾರೆ.

Leave a Reply

%d bloggers like this: