ಎಡವಟ್ಟು ಮಾಡಿಕೊಂಡು ಐಪಿಎಲ್ ನಿಂದ ಕೆ ಎಲ್ ರಾಹುಲ್, ರಶೀದ್ ಖಾನ್ ಬ್ಯಾನ್! ನಡೆದದ್ದು ಏನು ಗೊತ್ತಾ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಿಂದ ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾನ್ ಆಗ್ತಾರಾ..!
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14 ನೇ ಆವೃತ್ತಿಯು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುವ ಮೂಲಕ ಯಶಸ್ವಿಯಾಗಿ ಮುಗಿದಿದೆ. ಇದೀಗ ಐಪಿಎಲ್ 15 ನೇ ಆವೃತ್ತಿಯು ಆರಂಭವಾಗಲು ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿಯಿವೆ. ಅದರಂತೆ ಬಿಸಿಸಿಐ ಕೂಡ ಹರಾಜು ಪ್ರಕ್ರಿಯೆ ಸಿದ್ದತೆಯನ್ನು ಭರ್ಜರಿಯಾಗಿ ಮಾಡುತ್ತಿದೆ. ಐಪಿಎಲ್ ನ ಫ್ರಾಂಚೈಸಿಗಳು ತಮಗೆ ಬೇಕಾದ ಮುಖ್ಯ ಆಟಗಾರರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳಲು ಆಟಗಾರರಿಗೆ ಕೋಟಿ ಕೋಟಿ ರೂ. ನಿಗದಿ ಮಾಡಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಬಿಸಿಸಿಐ ರಿಟೇನ್ ಎಂಬ ನಿಯಮದಡಿಯಲ್ಲಿ ಒಂದಷ್ಟು ಹೊಸ ಬದಲಾವಣೆ ರೂಪಿಸಿದೆ.

ಈ ಹೊಸ ನಿಯಮದಲ್ಲಿ ಯಾವುದೇ ಫ್ರಾಂಚೈಸಿ ತಂಡ ಕನಿಷ್ಠ ಮೂವರು ದೇಶಿಯ ಆಟಗಾರರು ಮತ್ತು ಒಬ್ಬ ವಿದೇಶಿ ಆಟಗಾರ ಒಟ್ಟು ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾದ ನಿಯಮ ತಂದಿದೆ. ಇನ್ನು ಈ ರಿಟೇನ್ ಆದ ಅಟಗಾರರ ಮೇಲೆ ಗರಿಷ್ಠ ಅಂದರೆ ನಲವತ್ತೆರಡು ಕೋಟಿ ಮಾತ್ರ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಅಂತೆಯೇ ಪಂಜಿಬ್ ಕಿಂಗ್ಸ್ ತಂಡ ಕ್ಯಾಪ್ಟನ್ ಆಗಿದ್ದ ಕೆ.ಎಲ್. ರಾಹುಲ್ ಅವರನ್ನ 16 ಕೋಟಿಗೆ ರಿಟೆನ್ ಮಾಡಿಕೊಳ್ಳಲು ನಿರ್ಧಾರ ಮಾಡಿತ್ತು. ಆದರೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪಂಜಾಬ್ ತಂಡದಲ್ಲಿ ಮುಂದುವರಿಯಲು ಇಚ್ಚೆ ಇಲ್ಲದ ಕಾರಣ ಮೆಗಾ ಆಕ್ಷನ್ ನಲ್ಲಿ ಭಾಗವಹಿಸುವುದಾಗಿ ತಿಳಿಸಿ ಹೊಸ ಫ್ರಾಂಚೈಸಿ ಆದ ಲಕ್ನೋ ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡದ ರಶೀದ್ ಖಾನ್ ತಮಗೆ ಮೊದಲ ದರ್ಜೆಯಲ್ಲಿ 16 ಕೋಟಿ ಸಂಭಾವನೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ತಾವೂ ಕೂಡ ಮೆಗಾ ಆಕ್ಷನ್ ನಲ್ಲಿ ಭಾಗವಹಿಸುವುದಾಗಿ ಹೈದರಾಬಾದ್ ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಇಬ್ಬರು ಆಟಗಾರರ ಈ ನಿರ್ಧಾರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನ ನಿಯಮವನ್ನು ಬ್ರೇಕ್ ಮಾಡಿದಂತೆ ಎಂದು ಪಂಜಾಬ್ ಫ್ರಾಂಚೈಸಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ ಕಮಿಟಿಗೆ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಅವರನ್ನ ಒಂದು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ವಿಂದ ನಿಷೇಧ ಮಾಡಬೇಕು ಎಂದು ದೂರು ಸಲ್ಲಿಸಿದ್ದಾವೆ.

ಈ ಐಪಿಎಲ್ ನಿಯಮದ ಪ್ರಕಾರ ಆಟಗಾರರು ತಮ್ಮ ತಂಡದ ಚರ್ಚಿಸಿ ಮೆಗಾ ಆಕ್ಷನ್ ನಲ್ಲಿ ಭಾಗವಹಿಸುವ ಅಥವಾ ಮತ್ತೊಂದು ತಂಡದೊಂದಿಗೆ ಒಪ್ಪದಂದ ಮಾತುಕತೆ ನಡೆಸಬೇಕಾಗಿರುತ್ತದೆ. ಆದರೆ ಈ ಇಬ್ಬರು ತಮ್ಮ ತಂಡದೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸದೇ ಏಕಾಏಕಿ ತಾವೇ ಮತ್ತೊಂದು ಫ್ರಾಂಚೈಸಿ ಜೊತೆಗೆ ಮಾತುಕತೆ ನಡೆಸಿರುವುದು ತಿಳಿದು ಬಂದಿದ್ದು, ಈ ಇಬ್ಬರು ಆಟಗಾರರನ್ನ ಬ್ಯಾನ್ ಮಾಡಿ ಎಂದು ದೂರಿನಲ್ಲಿ ಉಲ್ಲೆಖಿಸಿದ್ದಾರೆ ಎಂಬ ಸುದ್ದಿ ಆದೀಗ ಐಪಿಎಲ್ ಕ್ರಿಕೆಟ್ ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಹಿಂದೆ ರವೀಂದ್ರಾ ಜಡೇಜಾ ಕೂಡ ಇದೇ ರೀತಿಯಾಗಿ ಮತ್ತೊಂದು ತಂಡದಲ್ಲಿ ಹೆಚ್ಚಿನ ಹಣ ನೀಡಿದರೆ ಆಟವಾಡುವುದಾಗಿ ಮಾತುಕತೆ ನಡೆಸಿದ ಕಾರಣ ಅವರನ್ನ ರಾಜಸ್ತಾನ್ ರಾಯಲ್ಸ್ ತಂಡ ಒಂದು ವರ್ಷಗಳ ಕಾಲ ಐಪಿಎಲ್ ಕ್ರಿಕೆಟ್ ನಿಂದ ನಿಷೇಧ ಮಾಡಲಾಗಿತ್ತು. ಹೀಗಾಗಿ ಈಗ ಕನ್ನಡಿಗ ಕೆ.ಎಲ್‌.ರಾಹುಲ್ ಮತ್ತು ರಶೀದ್ ಖಾನ್ ಅವರ ಮೇಲೆ ಐಪಿಎಲ್ ಕ್ರಿಕೆಟ್ ಸಮಿತಿ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: