ಎಡಗೈಯೇ ಅಪಘಾತಕ್ಕೆ ಕಾರಣ, ಈಗ ನಿಧಿ ಅವರ ಆಗಮನ

ದಶಕಗಳ ನಂತರ ಮತ್ತೆ ಒಂದಾದ ಪಂಚರಂಗಿ ಜೋಡಿ. ಸ್ಯಾಂಡಲ್ ವುಡ್ ಡಿಂಪಲ್ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ದಿಗಂತ್ ಅಂತಾನೇ ಹೇಳ್ಭೋದು. ಗುಳಿಕೆನ್ನೆ ಚೆಲುವ, ಚಾಕ್ಲೇಟ್ ಹೀರೋ ಆಗಿರೋ ದಿಗಂತ್ ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಗಾಳಿಪಟ2 ಸಿನಿಮಾ ದಿಗಂತ್ ಅವರಿಗೆ ಬ್ರೇಕ್ ನೀಡಿದೆ. ಗಾಳಿಪಟ2 ಸಿನಿಮಾದಲ್ಲಿ ದಿಗಂತ್ ಅವರ ನಟನೆಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಇದೀಗ ದಿಗಂತ್ ಎಡಗೈ ಅಪಘಾತಕ್ಕೆ ಕಾರಣ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದಿಗಂತ್ ಅವರಿಗೆ ನಾಯಕಿಯಾಗಿ ಧನು ಹರ್ಷ ಕಾಣಿಸಿಕೊಳ್ತಿದ್ದಾರೆ. ಅವರ ಜೊತೆಗೆ ನಟಿ ನಿಧಿ ಸುಬ್ಬಯ್ಯ ಕೂಡ ದಿಗಂತ್ ಅವರೊಟ್ಟಿಗೆ ನಟಿಸುತ್ತಿದ್ದಾರೆ.

ದಿಗಂತ್ ಮತ್ತು ನಿಧಿ ಸುಬ್ಬಯ್ಯ ದಶಕಗಳ ಹಿಂದೆ ತೆರೆಕಂಡ ಪಂಚರಂಗಿ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಇವರ ಕಾಂಬಿನೇಶನ್ ನಲ್ಲಿ ಪಂಚರಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇವರಿಬ್ಬರಿಗೂ ಕೂಡ ಪಂಚರಂಗಿ ಸಿನಿಮಾ ಭಾರಿ ಜನಪ್ರಿಯತೆ ತಂದುಕೊಟ್ಟು ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯನ್ನ ಕೂಡ ಕ್ರಿಯೆಟ್ ಮಾಡಿತ್ತು. ಆದರೆ ಮತ್ತೆ ಈ ಜೋಡಿ ಇದುವರೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಎಡಗೈ ಅಪಘಾತಕ್ಕೆ ಕಾರಣ ಎಂಬ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಮತ್ತು ದಿಗಂತ್ ಒಟ್ಟಿಗೆ ತೆರೆ ಹಂಚಿಕೊಳ್ತಿದ್ದಾರೆ. ಇತ್ತೀಚೆಗಷ್ಟೇ ಸರಳವಾಗಿ ಮುಹೂರ್ತ ನೆರವೇರಿಸಿದ್ದ ಎಡಗೈ ಅಪಘಾತಕ್ಕೆ ಕಾರಣ ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದ್ದು.

ಇದೀಗ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಬಳಗಕ್ಕೆ ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ ಕೂಡ ಪ್ರವೇಶ ಮಾಡಿದ್ದಾರೆ. ನಿರ್ದೇಶಕ ಸಮರ್ಥ್ ಕಡ್ಕೋಳ್ ಎಡಗೈ ಅಪಘಾತಕ್ಕೆ ಕಾರಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್‌ ಗಾಣಿಗ ಅವರು ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ನಿರ್ದೇಶಕ ಸಮರ್ಥ್ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯಕ್ಕೆ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಶೂಟಿಂಗ್ ಯಲಹಂಕ ಬಳಿಯ ಲಕ್ಷುರಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಳೆದ ಶುಕ್ರವಾರದಿಂದ ನಡೆಯುತ್ತಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ ಮಾಡುತ್ತಿದ್ದು, ರಾಹುಲ್ ವಿ.ಪಾರ್ತವಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಬರೆಯುತ್ತಿದ್ದಾರೆ.

Leave a Reply

%d bloggers like this: