ಎಚ್ಚರ.. ಎಚ್ಚರ.. ನಿಮ್ಮ ಮೊಬೈಲ್ ಕೂಡ ಬ್ಲಾಸ್ಟ್ ಆಗಬಹುದು. ಎಂದಿಗೂ ಹೀಗೆ ಮಾಡದಿರಿ

ಈ ರೀತಿಯ ಮೊಬೈಲ್ ಫೋನ್ ಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಹೊರ ಹೋಗಬೇಡಿ..! ಇಂದು ಈ ಮೊಬೈಲ್ ಫೋನ್ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿ ಸೇರಿಕೊಂಡಿದೆ. ಒಂದು ಹೊತ್ತು ಊಟ ಬೇಕಾದರು ಬಿಟ್ಟು ಇರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಒಂದು ಅರೆ ಕ್ಷಣ ತಮ್ಮ ಮೊಬೈಲ್ ಫೋನ್ ಬಿಟ್ಟು ಇರಲಾರರು. ಅಷ್ಟರ ಮಟ್ಟಿಗೆ ಮನುಷ್ಯ ತನ್ನ ಜೀವನ ಅಂದು ಭಾಗವಾಗಿ ಮೊಬೈಲ್ ಅನ್ನ ಅಳವಡಿಸಿಕೊಂಡಿದ್ದಾನೆ. ಈ ಎಲೆಕ್ಟ್ರಿಕ್ ಗ್ಯಾಜೆ಼ಟ್ ಗಳ ಮೇಲೆ ಅವಲಂಬನೆ ಆಗಿರುವ ಮನುಷ್ಯ ಇದರಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಅಷ್ಟಾಗಿ ತಿಳಿದುಕೊಂಡಿರುವುದಿಲ್ಲ. ಇಂದು ಬಹುತೇಕರ ಬಳಿ ದುಬಾರಿ ಬೆಲೆಯ ಐಷಾರಾಮಿ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಇದ್ದೇ ಇರುತ್ತದೆ. ಭಾರತದಲ್ಲಿ ಸ್ವದೇಶಿ ಕಂಪನಿಯ ವಸ್ತುಗಳಿಗಿಂತ ಹೆಚ್ಚಾಗಿ ವಿದೇಶಿ ವಸ್ತುಗಳನ್ನು ಬಳಸಲಾಗುತ್ತದೆ. ಅದರಂತೆ ಇಂದು ಟೆಲಿಕಾಂ ಮೊಬೈಲ್ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಮೊಬೈಲ್ ಗಳಿಗೆ ಹೆಚ್ಚು ಬೇಡಿಕೆ ಮತ್ತು ಅದಕ್ಕೆ ತಕ್ಕಂತೆ ಅದರಲ್ಲೂ ಚೀನಾ ದೇಶದ ಅನೇಕ ಮೊಬೈಲ್ ಕಂಪನಿಗಳು ಭಾರತೀಯ ಟೆಲಿಕಾಂ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದೆ ಎಂದರೆ ತಪ್ಪಾಗಲಾರದು.

ಇನ್ನೂ ಇದೀಗ ಮುಖ್ಯ ವಿಷಯ ಏನಪ್ಪಾ ಅಂದರೆ ಈ ಮೊಬೈಲ್ ಗಳಿಂದ ಅದರಲ್ಲೂ ಈ ರೀತಿಯ ಮೊಬೈಲ್ ಗಳು ನಿಮ್ಮ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶ ಎದುರಿಸಬೇಕಾಗಿ ಬರಬಹುದು. ಹೌದು ಸಾಮಾನ್ಯವಾಗಿ ಮೊಬೈಲ್ ಗಳಿಗೆ ಈ ಚಾರ್ಜರ್ ಒಂದು ರೀತಿಯಾಗಿ ಹೃದಯ ಇದ್ದಂತೆ ಎಂದು ಹೇಳುತ್ತಾರೆ. ಬ್ಯಾಟರಿ ಚಾರ್ಜ್ ಮಾಡುವಾಗ ಆದಷ್ಟು ಜಾಗ್ರತೆ ವಹಿಸಲೇಬೇಕು. ಹೌದು ನಿಮ್ಮ ಮೊಬೈಲ್ ಫೋನಿನ ಬ್ಯಾಟರಿ ಜಾರ್ಜ್ ಹಾಕಿದ ಕೆಲವೇ ನಿಮಿಷಗಳಲ್ಲಿ ಬಹುಬೇಗ ಬಿಸಿ ಆಗುತ್ತಿದ್ದರೆ ಅಂತಹ ಬ್ಯಾಟರಿಗಳನ್ನು ತಕ್ಷಣ ಬದಲಾಯಿಸುವುದು ಉತ್ತಮವಾಗಿರುತ್ತದೆ. ಅದರಂತೆ ಆದಷ್ಟು ತಮ್ಮ ಫೋನ್ ಗೆ ನೀಡದ ಚಾರ್ಜರ್ ಅನ್ನೇ ಬಳಸಲು ಪ್ರಯತ್ನಸಿ. ಬೇರೆ ಕಂಪನಿಯ ಮೊಬೈಲ್ ಚಾರ್ಜರ್ ಬಳಸುವುದರಿಂದ ಫೋನ್ ಬಿಸಿ ಆಗಿ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಯಾಯ ಫೋನ್ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಿರುವ ಚಾರ್ಜರ್ ಅನ್ನೇ ಉಪಯೋಗಿಸಿ.

ಇನ್ನು ಹೊರಗಡೆ ಹೋದಾಗ ಕಾರಿನಲ್ಲಿ ಜಾರ್ಜರ್ ಹಾಕುವಾಗ ಇನ್ನಿತರ ಪಿನ್ ಬಳಸಿ ಮೊಬೈಲ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ. ಜೊತೆಗೆ ಕಾರಿನಲ್ಲಿ ಪ್ರಯಾಣಿಸುವ ಬಹುತೇಕರು ಚಾರ್ಜರ್ ಹಾಕಿ ಮೊಬೈಲ್ ಅನ್ನು ಡ್ಯಾಶ್ ಬೋರ್ಡ್ ನಲ್ಲಿ ಕಾರಿನ ಮುಂಭಾಗದ ಗಾಜಿನ ಬಿಸಿಲಿನ ತಾಪ ಬೀಳುವಂತೆ ಇಟ್ಟಿರುತ್ತಾರೆ. ಮೊಬೈಲ್ ಬ್ಯಾಟರಿಗಳಿಗೆ 0-45 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಸಹಿಸುವಷ್ಟು ಮಾತ್ರ ಸಾಮರ್ಥ್ಯ ಹೊಂದಿರುತ್ತದೆ. ಇನ್ನು ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಫೋನ್ ಗಳನ್ನ ನಿಮ್ಮ ಪ್ಯಾಂಟಿನ ಜೇಬಿನಲ್ಲಿ ಇಡುವ ಹವ್ಯಾಸ ರೂಢಿಸಿಕೊಳ್ಳಬೇಡಿ. ಇದರಿಂದ ಅನೇಕ ನಕರಾತ್ಮಕ ಪರಿಣಾಮಗಳೇ ಹೆಚ್ಚಾಗಿರುತ್ತದೆ.

Leave a Reply

%d bloggers like this: