ಈ ಮಾರುಕಟ್ಟೆಯಲ್ಲಿ ಹಣ್ಣುಗಳಂತೆ ಮದುವೆಗೆ ಹೆಣ್ಣುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ, ಒಂದು ಹುಡುಗಿಯ ಬೆಲೆ ಎಷ್ಟು ಗೊತ್ತಾ

Indian brides take a selfie at a mass wedding in Surat, India, Saturday, Dec. 21, 2019. More than a hundred couples tied the knot at the mass wedding. Weddings in India are expensive affairs with the bride's family traditionally expected to pay the groom a large dowry of cash and gifts. (AP Photo/Ajit Solanki)
ಇಲ್ಲಿ ಹಣ್ಣುಗಳಂತೆ ಮದುವೆಗೆ ಹೆಣ್ಣುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ…! ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಹಣ್ಣು-ತರಕಾರಿಗಳನ್ನು,ಇತರೆ ಜಾಗಗಳಲ್ಲಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.ಅಗತ್ಯವಿರುವವರು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಹೋಗುತ್ತಾರೆ.ಆದರೆ ಬಲ್ಗೇರಿಯಾ ದೇಶದ ಒಂದು ಸಮುದಾಯದ ಜನಾಂಗದವರು ಮದುವೆ ವಯಸ್ಸಿಗೆ ಬಂದಿರುವ ಹೆಣ್ಣುಮಕ್ಕಳನ್ನೇ ಮಾರಾಟಕ್ಕೆ ಇಡುತ್ತಾರೆ.ಈ ಸಮುದಾಯದಲ್ಲಿ ವರ ದಕ್ಷಿಣೆ ಪದ್ದತಿ ಬದಲು ವಧು ದಕ್ಷಿಣೆ ಪದ್ದತಿ ರೂಢಿಯಲ್ಲಿದೆ.ಈ ಸಮುದಾಯದ ಜನರ ಆಚರಣೆ,ಪದ್ದತಿ ಇತರೆ ಜನರ ಸಂಪ್ರದಾಯಗಿಂತ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.ಆದರೆ ಈ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಅವರು ವಸ್ತುಗಳಲ್ಲ.ಅವರು ಮನುಷ್ಯರು.ಮನುಷ್ಯ ಮನುಷ್ಯರನ್ನೇ ಹೇಗೆ ಮಾರಾಟ ಮಾಡುತ್ತಾನೆ.ಇದಕ್ಕೆ ಬಲ್ಗೇರಿಯಾ ದೇಶದಲ್ಲಿ ಯಾವುದೇ ರೀತಿಯ ಕಾನೂನು ಕಟ್ಟಳೆಗಳು ಇಲ್ಲವಾ ಎಂಬಂತಹ ಪ್ರಶ್ನೆಗಳು ಮೂಡುತ್ತವೆ.

ವೇಗವಾಗಿ ಬೆಳೆಯುತ್ತಿರುವ ಈ ಜಾಗತಿಕ ಪ್ರಪಂಚದಲ್ಲಿ ಇಂತಹ ಸಂಪ್ರದಾಯ ಆಚರಣೆಗಳು ಇನ್ನೂ ಕೂಡ ಜೀವಂತವಾಗಿವೆಯೇ, ಈ ಆಚರಣೆಗಳ ಉದ್ದೇಶವಾದರೂ ಏನು ಎಂಬುದನ್ನ ತಿಳಿಯುವುದಾದರೆ ಈ ಮದುವೆ ವಯಸ್ಸಿನ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವಂತಹ ಪದ್ದತಿ ಇರುವುದು ಬಲ್ಗೇರಿಯಾ ದೇಶದ ಸ್ಟಾರಾ ಜಾಗೋರ್ ಎಂಬ ಜಾಗದಲ್ಲಿ.ಇಲ್ಲಿ ಕಾಲಾಯಿದಝಿ ಎಂಬ ಸಮುದಾಯದ ಜನರು ತಮ್ಮ ಸಮುದಾಯದ ಬಡ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸಬಲವಾಗಿರುವ ಅದೇ ಸಮುದಾಯದ ಜನರು ತಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳುವ ಅವಕಾಶ ಆಗಿರುತ್ತದೆ.ಇಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕಾಲಾಯಿದಿಝಿ ಜನಾಂಗದ ಹೆಣ್ಣು ಮಕ್ಕಳ ಪೋಷಕರು ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಈ ಸ್ಟಾರಾ ಜಾಗೋರ್ ಎಂಬ ಸ್ಥಳಕ್ಕೆ ತಮ್ಮ ಹೆಣ್ಣು ಮಕ್ಕಳನ್ನು ಮಧುಮಗಳಂತೆ ಸಿಂಗರಿಸಿ ಇಲ್ಲಿಗೆ ಕರೆ ತರುತ್ತಾರೆ.

ಇಲ್ಲಿಗೆ ಕರೆ ತರುವ ಹೆಣ್ಣುಗಳನ್ನು ಆರ್ಥಿಕವಾಗಿ ಸಬಲರಾಗಿರುವ ಇದೇ ಸಮುದಾಯದ ಮದುವೆ ವಯಸ್ಸಿನ ಹುಡುಗರು ತಮಗೆ ಇಷ್ಟ ಬಂದ ಹುಡುಗಿಯರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.ತದ ನಂತರ ಇಬ್ಬರು ಪರಸ್ಪರ ಒಪ್ಪಿ ಎರಡೂ ಕುಟುಂಬಗಳಿಗೆ ಸಮಾಧಾನವಾದ ಬಳಿಕ ಹುಡುಗಿ-ಹುಡುಗ ಪರಸ್ಪರ ಮುಕ್ತವಾಗಿ ಮಾತನಾಡಲು ಅವಕಾಶ ನೀಡುತ್ತಾರೆ.ಇದಾದ ಬಳಿಕ ಹೆಣ್ಣಿನ ಪೋಷಕರಿಗೆ ಇಂತಿಷ್ಟು ಹಣವನ್ನು ನೀಡಿ ತಾವು ಮೆಚ್ಚಿದ ಹುಡುಗಿಯನ್ನ ಮದುವೆಯಾಗಿ ಕರೆದುಕೊಂಡು ಹೋಗುತ್ತಾರೆ.ಈ ಬಲ್ಗೇರಿಯಾ ದೇಶದ ಸ್ಟಾರಾ ಜಾಗೋರ್ ಪ್ರದೇಶದಲ್ಲಿ ಇಂದಿಗೂ ಈ ಸಮುದಾಯದ ಜನರು ಈ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.ಇಲ್ಲಿ ಈ ಸಮುದಾಯದ ಆಚರಣೆಗೆ ಯಾವುದೇ ರೀತಿಯ ಕಾನೂನಿನ ತೊಂದರೆ ಆಗುವುದಿಲ್ಲ.