ದುಬೈ ಉದ್ಯಮಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ನಟಿ

ಸ್ಯಾಂಡಲ್ ವುಡ್ ರ್ಯಾಪ್ ಸ್ಟಾರ್ ನಟ ರಾಕೇಶ್ ಅಡಿಗ ಅವರ ನಾಯಕತ್ವದ ಜೋಶ್ ಸಿನಿಮಾದಲ್ಲಿ ನಟಿಸಿದ್ದ ನಟಿ ಶಮ್ನಾ ಕಾಸಿಂ ಉರುಫ್ ಪೂರ್ಣ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಹುಡುಗ ಯಾರ್ ಅಂತ ಗೊತ್ತಾದ್ರೆ ನೀವ್ ನಿಜಕ್ಕೂ ಕೂಡ ಅಚ್ಚರಿ ಪಡ್ತೀರಿ. ಸಿನಿಮಾ ಸೆಲೆಬ್ರಿಟಿಗಳು ತಮ್ಮ ವೃತ್ತಿ ಜೀವನ ಸಿನಿಮಾಗಳ ಮೂಲಕ ಎಷ್ಟರ ಮಟ್ಟಿಗೆ ಸುದ್ದಿ ಆಗುತ್ತಾರೋ ಅದೇ ರೀತಿಯಾಗಿ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಕೂಡ ಸುದ್ದಿ ಆಗುತ್ತಾರೆ. ಅದೇ ರೀತಿಯಾಗಿ ಈಗ ಸುದ್ದಿ ಆಗಿರೋದು ಅಂದರೆ ದಕ್ಷಿಣ ಭಾರತದ ಖ್ಯಾತ ನಟಿ ಪೂರ್ಣ. ನಟಿ ಪೂರ್ಣ ಅವರ ಮೂಲ ಹೆಸರು ಶಮ್ನಾ ಕಾಸಿಂ.

ಸಿನಿಮಾರಂಗಕ್ಕೆ ಬಂದ ನಂತರ ಅವರ ಹೆಸರನ್ನ ಪೂರ್ಣ ಎಂದು ಬದಲಾಯಿಸಿಕೊಂಡಿದ್ದಾರೆ. ಪೂರ್ಣ ಕೇವಲ ನಟಿ ಮಾತ್ರ ಅಲ್ಲ, ಒಬ್ಬ ಪ್ರತಿಭಾವಂತ ನೃತ್ಯಗಾರ್ತಿ. ಅದರ ಜೊತೆಗೆ ಮಾಡೆಲ್ ಕೂಡಾ ಹೌದು. ಕೇರಳದ ಕಣ್ಣೂರಿನಲ್ಲಿ ಜನಿಸಿದ ನಟಿ ಪೂರ್ಣ ಅವರು ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಭಾಷೆಯ ಸಿನಿಮಾಗಳಲ್ಲಿಯೂ ಕೂಡ ನಟಿ ಪೂರ್ಣ ನಟಿಸಿದ್ದಾರೆ. ಪೂರ್ಣ ಅವರು 2004 ರಲ್ಲಿ ಮಲೆಯಾಳಂ ನ ಮಂಜು ಪೋಲೋರು ಪೆಂಕುಟ್ಟಿ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಗಮನ ಸೆಳೆದ ನಟಿ ಪೂರ್ಣ ನಂತರ ತಿರುಗಿ ನೋಡಿದ್ದೇ ಇಲ್ಲ. ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲಿಯೂ ಕೂಡ ನಟಿಸಿದ್ದಾರೆ.

ಪೂರ್ಣ ಅವರು ಕನ್ನಡದಲ್ಲಿ ಜೋಶ್ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನ ಖ್ಯಾತ ನಿರ್ದೇಶಕ ಶಿವಮಣಿ ಅವರು ನಿರ್ದೇಶನ ಮಾಡಿದ್ದಾರೆ. ಜೋಶ್ ಸಿನಿಮಾದಲ್ಲಿ ಪೂರ್ಣ ಅವರು ನಟ ರಾಕೇಶ್ ಅಡಿಗ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ನಟಿ ಪೂರ್ಣ ಅವರು ಇದೀಗ ಅವರ ಸಿನಿಮಾಗಳಿಂದ ಸುದ್ದಿ ಆಗಿಲ್ಲ. ಆದರೆ ಪೂರ್ಣ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ನಟಿ ಪೂರ್ಣ ಅವರು ದುಬೈ ಉದ್ಯಮಿಯವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಇವರಿಬ್ಬರ ಮದುವೆ ಕೇವಲ ಅವರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿದೆ.

Leave a Reply

%d bloggers like this: