ದುಬಾರಿ ಕಾರು ಖರೀದಿ ಮಾಡಿದ ನಮ್ಮಮ್ಮ ಸೂಪರ್ ಸ್ಟಾರ್ ವಾಂಶಿಕ.. ಬೆಲೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗೆದ್ದ ಈ ಅಮ್ಮ ಮಗಳು ಬಂದ ಹಣದಲ್ಲಿ ಏನು ಮಾಡಿದ್ದಾರೆ ಗೊತ್ತಾ..ಹೌದು ಇತ್ತೀಚೆಗೆ ಕಿರುತೆರೆ ವಾಹಿನಿಗಳಲ್ಲಿ ಧಾರಾವಾಹಿಗಳಷ್ಟೆ ಅನೇಕ ರಿಯಾಲಿಟಿ ಶೋಗಳು ನಡೆಯುತ್ತಲೇ ಇವೆ. ಒಂದರ ನಂತರ ಒಂದು ಮನರಂಜನಾ ಕಾರ್ಯಕ್ರಮಗಳು ಕಿರುತೆರೆ ವಾಹಿನಿಗಳಲ್ಲಿ ಸೇರ್ಪಡೆಗೊಳ್ಳುತ್ತಲೇ ಇವೆ. ಅದರಂತೆ ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅಂತ್ಯ ಗೊಂಡಿದೆ. ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅನ್ನ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಅವರು ನಡೆಸಿಕೊಡುತ್ತಿದ್ದರು. ಈ ರಿಯಾಲಿಟಿ ಶೋ ಗೆ ತಮ್ಮ ಮಕ್ಕಳ ಜೊತೆಗೂಡಿ ಕಿರುತೆರೆ ಸೆಲೆಬ್ರಿಟಿಗಳು ಸೇರಿದಂತೆ ಒಂದಷ್ಟು ಇನ್ನಿತರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ತಮ್ಮ ಮಕ್ಕಳ ಜೊತೆ ಕೂಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ಈ ಶೋ ನಲ್ಲಿ ಒಂದಷ್ಟು ಅಮ್ಮ ಮಗಳ ಜೋಡಿ ಸ್ಪರ್ಧಿಸಿ ಅಂತ್ಯದ ವೇಳೆಗೆ ಕಾರ್ಯಕ್ರಮದಿಂದ ಹೊರ ನಡೆದರು. ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನ ಮೊದಲ ಪ್ರೋಮೋದಲ್ಲಿ ಗಮನ ಸೆಳೆದದ್ದು ಕನ್ನಡದ ಖ್ಯಾತ ನಟ ನಿರ್ದೇಶಕ ಕಮ್ ನಿರ್ಮಾಪಕ ಆದಂತಹ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಪುತ್ರಿ ವಂಶಿಕಾಳ ಚಿನಕುರುಳಿ ಮಾತಿನ ಶೈಲಿ. ಈ ಪ್ರೋಮೋದಲ್ಲಿ ವಂಶಿಕಾ ತನ್ನನ್ನ ತಾನು ಪರಿಚಯ ಮಾಡಿಕೊಂಡ ರೀತಿ ವೀಕ್ಷಕರ ಮನ ಗೆದ್ದಿಬಿಟ್ಟಿತು. ನನ್ನ ಮಾಸ್ಟರ್ ಆನಂದ್ ಮಗಳು ಅನ್ನ್ಬೇಡಿ. ನನ್ನನ್ನು ವಂಶಿಕಾ ಅಂಜನಿ ಕಶ್ಯಪ ಎಂದು ಕರೆಯರಿ ಎಂದು ತನ್ನ ಚಿನುಕುರುಳಿ ಮಾತಿನಿ ಮೂಲಕ ಸಖತ್ ಇಷ್ಟ ಆಗಿದ್ರು. ಅದೇ ರೀತಿಯಾಗಿ ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಈ ಪೋರಿಯೇ ಗೆಲ್ಲುತ್ತಾಳೆ ಎಂದು ಹೇಳಲಾಗುತಿತ್ತ್ತು.

ಅದರಂತೆ ತುಂಟತನದ ಮಾತಿನ ಪ್ರತಿಭೆಯ ಮೂಲಕ ಗಮನ ಸೆಳೆದು ವಂಶಿಕಾ ಮತ್ತು ತಾಯಿ ಯಶಸ್ವಿನಿ ಅವರು ಈ ರಿಯಾಲಿಟಿ ಶೋ ಟ್ರೋಫಿ ಪಡೆದು ಈ ರಿಯಾಲಿಟಿ ಶೋ ಅನ್ನ ಗೆದ್ದೇ ಬಿಟ್ಟರು. ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಐದು ಲಕ್ಷ ರೂ ನಗದು ಬಹುಮಾನದ ಜೊತೆಗೆ ಸಂಭಾವನೆಯನ್ನು ಕೂಡ ಪಡೆದಿದ್ದಾರೆ. ಇದೀಗ ಈ ಹಣದ ಮೊತ್ತದಿಂದ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಅವರು ಬರೋಬ್ಬರಿ ಎಂಟು ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ ಇಗ್ನೀಸ್ ಕಾರ್ ಅನ್ನ ಖರೀದಿ ಮಾಡಿ. ಈ ನೂತನ ಕಾರ್ ಖರೀದಿ ಮಾಡಿದ ನಂತರ ಇದರ ಫೋಟೋ ಮತ್ತು ಒಂದಷ್ಟು ವೀಡಿಯೋಗಳನ್ನ ಯಶಸ್ವಿನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗೆ ತೆರೆ ಬಿದ್ದಿದ್ದು, ಈ ಶೋ ಗೆ ಪರ್ಯಾಯವಾಗಿ ಗಿಚ್ಚಿ ಗಿಲಿ ಗಿಲಿ ಎಂಬ ಹಾಸ್ಯ ಕಾರ್ಯಕ್ರಮ ಪ್ರಾರಂಭಗೊಂಡಿದೆ.

Leave a Reply

%d bloggers like this: