ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರು ಖರೀದಿಸಿದ ಮೊಹಮ್ಮದ್ ಶಮಿ, ಬೆಲೆ ಎಷ್ಟು ಗೊತ್ತೇ

ಸಾಮಾನ್ಯವಾಗಿ ಈ ಸಿನಿಮಾ ಸೆಲೆಬ್ರಿಟಿಗಳು ಮತ್ತು ನಮ್ಮ ಭಾರತ ತಂಡದ ಕ್ರಿಕೆಟಿಗರ ಲೈಫ್ ಸ್ಟೈಲ್ ಸಖತ್ ಬಿಂದಾಸ್ ಆಗಿಯೇ ಇರುತ್ತದೆ. ಅವರು ತೊಡುವ ಉಡುಗೆ ತೊಡುಗೆಗಳು, ಹೋಗುವ ಪ್ರವಾಸ ತಾಣಗಳು, ಐಷಾರಾಮಿ ದುಬಾರಿ ಬೆಲೆಯ ಕಾರುಗಳು ಹೀಗೆ ಅವರ ಜೀವನ ಶೈಲಿ ಸಂಪೂರ್ಣವಾಗಿ ವಿಲಾಸಿಯಾಗಿರುತ್ತದೆ. ಅದರಂತೆ ಇದೀಗ ವಿಲಾಸಿ ಬದುಕಿನ ವಿಚಾರದಲ್ಲಿ ಸುದ್ದಿಯಾಗಿರುವುದು ಭಾರತ ತಂಡದ ಕ್ರಿಕೆಟಿಗ ವೇಗಿ ಮೊಹಮ್ಮದ್ ಶಮಿ. ಹೌದು ಮೊಹಮ್ಮದ್ ಶಮಿ ಅವರು ಇದೀಗ ಜಾಗ್ವಾರ್ F-TYPE 8ಸ್ಪೀಡ್ ಕಾರೊಂದನ್ನ ಖರೀದಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಬಂಗಾಳದ ಪ್ರಾದೇಶಿಕ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಗುಜರಾತ್ ತಂಡದ ಪರವಾಗಿ ಆಡುವ ವೇಗದ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್ ಕ್ಷೇತ್ರಕ್ಕೆ ತಮ್ಮದೇಯಾದ ಅಪಾರ ಸೇವೆ ಸಲ್ಲಿಸಿದ್ದಾರೆ.

ಕಳೆದ ತಿಂಗಳು ಮೊಹಮ್ಮದ್ ಶಮಿ ಅವರು ಬರೋಬ್ಬರಿ 3.32 ಲಕ್ಷ ರೂ ಮೌಲ್ಯದ ನೂತನ ರಾಯಲ್ ಎನ್ ಫೀಲ್ಡ್ ಜಿಟಿ 650 ಬೈಕ್ ಅನ್ನು ಖರೀದಿ ಮಾಡಿದ್ದರು. ಇದೀಗ ಮೊಹಮ್ಮದ್ ಶಮಿ ಅವರು ಜಾಗ್ವಾರ್ ಕಾರ್ ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಹಾಗಾದರೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ಖರೀದಿ ಮಾಡಿರುವ ಈ ಜಾಗ್ವಾರ್ ಕಾರಿನ ವಿಶೇಷತೆಗಳು ಏನು. ಅದರ ಬೆಲೆ ಎಷ್ಟು ಎಂಬುದನ್ನ ತಿಳಿದುಕೊಳ್ಳೋಣ. ಈ ಜಾಗ್ವಾರ್ 8ಸ್ಪೀಡ್ ಕಾರು ಜೆ಼ಡ್ ಎಫ್ ಟ್ರಾನ್ಸ್ ಮಿಷನ್ ನೊಂದಿಗೆ ರೂಪುಗೊಂಡಿದೆ. ಇದರಲ್ಲಿ ಎಫ್-ಟೈಪ್ 2.0 ಲೀಟರಿನ ಟರ್ಬೋ ಎಂಜಿನ್ ಹೊಂದಿದ್ದು, 295 ಬಿಎಚ್ಪಿ ಪವರ್ ಹೊಂದಿದೆ.

400 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇದು ಇತರೆ ಕಾರುಗಳಿಗಿಂತ 5ಲೀಟರಿನ ವಿ8 ಎಂಜಿನ್ ಒಳಗೊಂಡಿದೆ. ಇನ್ನು ಈ ಜಾಗ್ವಾರ್ ಕಾರು ಗರಿಷ್ಟ 445 ಬಿ.ಎಚ್.ಪಿ. ಪವರ್ ಮತ್ತು 580 ಎನ್.ಎಮ್ ಗರಿಷ್ಟ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಈ ಸ್ಪೋರ್ಟ್ಸ್ ಕಾರು ಜಸ್ಟ್ 3.7 ಸೆಕೆಂಡುಗಳಲ್ಲಿ 100 ವೇಗವನ್ನು ಪಡೆದುಕೊಳ್ಳಲಿದೆ. 8ಸ್ಪೀಡ್ ಅಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಈ ಜಾಗ್ವಾರ್ ಸ್ಪೋರ್ಟ್ಸ್ ಕಾರಿನ ಬೆಲೆ ಬರೋಬ್ಬರಿ 98.13 ಲಕ್ಷ ಎಂದು ತಿಳಿದು ಬಂದಿದೆ.ಮೊಹಮ್ಮದ್ ಶಮಿ ಅವರ ಬಳಿ ಈಗಾಗಲೇ ಬಿಎಂಡಬ್ಲ್ಯು, ಫೈವ್ ಸಿರೀಸ್, ಟೊಯೊಟಾ ಫಾರ್ಚ್ಯುನರ್ ಮತ್ತು ಆಡಿ ಕಾರುಗಳು ಜೊತೆಗೆ ಕಳೆದ ತಿಂಗಳು ಖರೀದಿ ಮಾಡಿದ ರಾಯಲ್ ಎನ್ ಫೀಲ್ಡ್ ಬೈಕ್ ಕೂಡ ಇದೆ. ಇದೀಖ ಶಮಿ ಕಾರ್ ಗ್ಯಾರೇಜ್ ಗೆ ಈ ಜಾಗ್ವಾರ್ ಕಾರ್ ಕೂಡ ಸೇರ್ಪಡೆಗೊಂಡಿದೆ.

Leave a Reply

%d bloggers like this: