ದುಬಾರಿ ಬೆಲೆಯ ಲಂಬೋರ್ಘಿನಿ ಕಾರು ಖರೀದಿಸಿದ ದಕ್ಷಿಣ ಭಾರತದ ಖ್ಯಾತ ನಟ

ಇತ್ತೀಚೆಗೆ ನಮ್ಮ ಸೌತ್ ಸಿನಿ ಸ್ಟಾರ್ ನಟರು ತಮ್ಮ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಲೈಫ್ ಸ್ಟೈಲನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಟಾಲಿವುಡ್ ಯೂಥ್ ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಒಂದು ಕೋಟಿಗೂ ಅಧಿಕ ಮೌಲ್ಯ ಇರುವ ರೋಲ್ಸ್ ರಾಯ್ ಕಲಿನನ್ ಎಸ್.ಯು.ವಿ ಕಾರೊಂದನ್ನ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದರು. ಪ್ಯಾನ್ ಇಂಡಿಯಾ ಮೂವಿ ಪುಷ್ಪಾ ಚಿತ್ರದಲ್ಲಿನ ಪುಷ್ಪರಾಜ್ ಪಾತ್ರ ಅಲ್ಲು ಅರ್ಜುನ್ ಅವರಿಗೆ ವರ್ಲ್ಡ್ ವೈಡ್ ಸಖತ್ ಫೇಮ್ ತಂದುಕೊಟ್ಟಿತು. ಪುಷ್ಪಾ ಸಿನಿಮಾ ರಿಲೀಸ್ ಆದ ಎಲ್ಲಾ ಕಡೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತು. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಅವರು ತಮ್ಮ ಸಂಭಾವನೆ ಏರಿಸಿಕೊಂಡು ರೋಲ್ಸ್ ರಾಯ್ ಕಾರನ್ನ ಕೂಡ ಖರೀದಿ ಮಾಡಿದ್ದಾರೆ.

ಇದೀಗ ಮಾಲಿವುಡ್ ಸೂಪರ್ ಸ್ಟಾರ್ ನಟ ಫಹಾದ್ ಫಾಸಿಲ್ ಅವರು ಕೂಡ ನೂತನ ಐಷಾರಾಮಿ ಕಾರೊಂದನ್ನ ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ನಟ ಫಹಾದ್ ಫಾಸಿಲ್ ವೈವಿಧ್ಯಮ ನಟ. ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಸಾಮಾರ್ಥ್ಯ ಏನೆಂಬುದನ್ನ ಈಗಾಗಲೇ ಸಾಬೀತು ಪಡಿಸಿ ಇಡೀ ಭಾರತೀಯ ಚಿತ್ರದಂಗದಲ್ಲಿ ತನ್ನದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪುಷ್ಪಾ ಸಿನಿಮಾದಲ್ಲಿ ಕೂಡ ನಟ ಫಹಾದ್ ಫಾಸಿಲ್ ಅವರು ವಿಶಿಷ್ಟ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟರಾಗಿರುವ ಫಹಾದ್ ಫಾಸಿಲ್ ಅವರು ಇದೀಗ ನೂತನ ಲ್ಯಾಂಬೋರ್ಗಿನಿ ಉರುಸ್ ಕಾರನ್ನ ಖರೀದಿ ಮಾಡಿದ್ದಾರೆ. ಈ ಕಾರು ಗ್ರಿಗಿಯೊ ಕೆರೆಸ್ ಶೇಡ್ ಮಾದರಿಯದ್ದಾಗಿದೆ. ಫಹಾದ್ ಫಾಸಿಲ್ ಅವರು ಖರೀದಿ ಮಾಡಿರುವ ಈ ಲ್ಯಾಂಬೋರ್ಗಿನಿ ಉರುಸ್ ಎಸ್ಯೂವಿ ಕಾರು 2018ರಲ್ಲಿ ಬಿಡುಗಡೆಯಾದ ಕಾರಾಗಿದೆ.

ಇದರಲ್ಲಿನ ವಿಶೇಷತೆಯ ಲಕ್ಷಣಗಳನ್ನ ನೋಡುವುದಾದರೆ 641 ಬಿಎಚ್ಪಿ ಪವರ್ ಮತ್ತು 850 ಎನ್ಎಮ್ ಟಾರ್ಕ್ ಉತ್ಪಾದನೆ ಮಾಡುವಂತ ಇಂಜಿನ್ ಆಯ್ಕೆಯನ್ನ ಹೊಂದಿದೆ. ಈ ಕಾರು ಜಸ್ಟ್ 3.6 ಸೆಕೆಂಡ್ ಗಳಲ್ಲಿ ಬರೋಬ್ಬರಿ 100 ಕಿಮೀ ವೇಗವನ್ನ ಪಡೆಯಲಿದೆಯಂತೆ. ಅಂದ್ರೆ ಟಾಪ್ ಸ್ಪೀಡ್ ನಲ್ಲಿ ಪ್ರತಿ ಗಂಟೆಗೆ 305 ಕಿಮೀ ಚಲಿಸಬಹುದಾಗಿದೆ. ಎಲ್ಇಡಿ ಹೆಡ್ ಲೈಟ್ ಅಂಡ್ ಟೇಲ್ ಲೈಟ್ ಗಳನ್ನ ಹೊಂದಿರುವ ಈ ಲ್ಯಾಂಬೋರ್ಗಿನಿ ಉರುಸ್ ಕಾರು 21ಇಂಚಿನ ಅಲಾಯ್ ವ್ಹೀಲ್ ಗಳನ್ನ ಹೊಂದಿದೆ. ಫಹಾದ್ ಫಾಸಿಲ್ ಅವರು ಖರೀದಿ ಮಾಡಿರುವ ಪೈಥಾನ್ ಗ್ರೀನ್ ಪೋರ್ಷೆ 911 ಕ್ಯಾರೆರಾ ಎಸ್ ಅನ್ನ ಹೊಂದಿದೆಯಂತೆ. ಫಹಾದ್ ಫಾಸಿಲ್ ಅವರು ಖರೀದಿ ಮಾಡಿರುವ ಈ ಲ್ಯಾಂಬೋರ್ಗಿನಿ ಉರುಸ್ ಎಸ್ಯುವಿ ಕಾರು ಬರೋಬ್ಬರಿ ಮೂರು ಕೋಟಿಗೂ ಅಧಿಕ ಎಂದು ತಿಳಿದು ಬಂದಿದ್ದು, ಮಾಲಿವುಡ್ ಸ್ಟಾರ್ ನಟ, ನಿರ್ದೇಶಕ ಪೃಥ್ವಿರಾಜ್ ಅವರ ನಂತರ ಫಹಾದ್ ಫಾಸಿಲ್ ಅವರು ಕೂಡ ಈ ಕಾರ್ ಖರೀದಿಸಿದ್ದಾರೆ.