ದುಬಾರಿ ಬೆಲೆಯ ಹೊಸ ಕಾರು ಖರೀದಿಸಿದ ಕನ್ನಡ ಕಿರುತೆರೆಯ ಖ್ಯಾತ ನಟಿ

ಕನ್ನಡ ಕಿರುತೆರೆಯ ಸುಪ್ರಸಿದ್ದ ನಿರೂಪಕಿ ಇದೀಗ ದುಬಾರಿ ಬೆಲೆಯ ಹೊಸ ಕಾರಿನ ಒಡತಿ ಆಗಿದ್ದಾರೆ. ಹೌದು ಇತ್ತೀಚೆಗೆ ಕಾರ್ ಕ್ರೇಜ಼್ ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳಿಗೆ ಹೆಚ್ಚಾಗಿದೆ ಎನ್ನಬಹುದು. ಮೊದಲೆಲ್ಲಾ ಸ್ಟಾರ್ ನಟರು ಟಾಪ್ ನಟಿಯರು ಕಾರ್ ಖರೀದಿ ಮಾಡಿ ಸುದ್ದಿ ಆಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಿನಿಮಾ ಸ್ಟಾರ್ ನಟ ನಟಿಯರು ಯಾವ ರೀತಿ ಐಷಾರಾಮಿ ದುಬಾರಿ ಬೆಲೆಯ ಕಾರ್ ಖರೀದಿ ಮಾಡುತ್ತಾರೋ ಅದೇ ರೀತಿಯಾಗಿ ಕಿರುತೆರೆ ನಟ ನಟಿಯರು, ನಿರೂಪಕಿಯರು ಕೂಡ ತಾವು ಯಾರಿಗೂ ಕಡಿಮೆ ಇಲ್ಲದಂತೆ ಸಂಭಾವನೆ ಪಡೆದು ಒಳ್ಳೆಯ ಲೈಫ್ ಸ್ಟೈಲ್ ನಡೆಸುತ್ತಿದ್ದಾರೆ. ಅದರಂತೆ ಇದೀಗ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ ಅವರು ಮಹೀಂದ್ರಾ ಥಾರ್ ಕಾರನ್ನ ಖರೀದಿ ಮಾಡಿದ್ದಾರೆ.

ತಮ್ಮ ಹೊಸ ಕಾರಿನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅನುಪಮಾ ಗೌಡ ಅವರು ಖರೀದಿ ಮಾಡಿರುವ ಮಹೀಂದ್ರಾ ಥಾರ್ ಕಾರಿನ ಬೆಲೆ ಬರೋಬ್ಬರಿ 17 ಲಕ್ಷ ಎಂದು ತಿಳಿದು ಬಂದಿದೆ. ಈ ಮಹೀಂದ್ರಾ ಥಾರ್ ಅನುಪಮಾ ಗೌಡ ಅವರು ಖರೀದಿ ಮಾಡಿರುವ ಮೂರನೇ ಕಾರ್ ಆಗಿದೆಯಂತೆ. 2014 ರಲ್ಲಿ ಹುಂಡೈ ಐ10 ಕಾರ್ ಖರೀದಿ ಮಾಡಿದ್ದರಂತೆ. ಶೂಟಿಂಗ್ ಇದ್ದಾಗ ಟೀಮ್ ಅವರು ಬೇಗ ಪಿಕಪ್ ಮಾಡ್ತಾ ಇದ್ರಂತೆ. ಸಂಜೆ ಮನೆಗೆ ತುಂಬಾ ತಡವಾಗಿ ಬರ್ತಿದ್ರಂತೆ. ಹಾಗಾಗಿ ಅವರು ಕಾರ್ ಕೊಳ್ಳುವ ಯೋಚನೆ ಮಾಡಿದ್ರಂತೆ. ಇದೀಗ ಈ ಹುಂಡೈ ಕಾರನ್ನ ತಮ್ಮ ಸ್ನೇಹಿತನಿಗೆ ಕೊಟ್ಟಿದ್ದಾರಂತೆ. ಫಸ್ಟ್ ಎಮೋಶನಲ್ ಕಾರ್ ಆಗಿರೋದ್ರಿಂದ ನೋಡ್ಬೇಕ್ ಅನಿಸಿದಾಗ ಹೋಗ್ ಕಾರ್ ನೋಡ್ಬೋದು ಅನ್ನೋದು ಅನುಪಮಾ ಗೌಡ ಅವರ ಅನಿಸಿಕೆ. ಇದಾದ ನಂತರ ಬಿಗ್ ಬಾಸ್ ಕಾರ್ಯಕ್ರಮ ಮುಗಿಸ್ಕೊಂಡ್ ಬಂದ್ಮೇಲೆ ಕ್ರೇಟಾ ಕಾರ್ ಖರೀದಿ ಮಾಡಿದ್ರಂತೆ.

ಅವರ ತಂದೆ ನಿಧನರಾದ ನಂತರದ ದಿನಗಳಲ್ಲಿ ಈ ಕಾರ್ ತಗೊಂಡಿದ್ರಂತೆ. ಇದೀಗ ಮಹೀಂದ್ರಾ ಥಾರ್ ಕಾರ್ ಖರೀದಿ ಮಾಡಿದ್ದಾರೆ. ಇನ್ನು ಕಾರ್ ಖರೀದಿ ಮಾಡಿರುವ ಖುಷಿಯಲ್ಲಿರುವ ಅನುಪಮಾ ಗೌಡ ಅವರು ಜೀವನದಲ್ಲಿ ನಾನು ಜೀ಼ರೋ ಇಂದ ಲೈಫ್ ಸ್ಟಾರ್ಟ್ ಮಾಡ್ದೇ. ನನಗೆ ಕಾರ್ ತೆಗೆದುಕೊಳ್ಳೋದ್ ಎಷ್ಟು ಕಷ್ಟ ಅಂತ ಗೊತ್ತು. ಅದಾದ್ ನಂತರ ಅದರ ಇಎಂಐ ಕಟ್ಟೋದ್ ಇನ್ನೆಷ್ಟ್ ಕಷ್ಟ ಅನ್ನೋದ್ ಅಂತಾನೂ ಗೊತ್ತು. ಲೈಫಲ್ಲಿ ಎಲ್ರು ಸೇವಿಂಗ್ಸ್ ಮಾಡಿ. ಸಾಯೋಷ್ಟರಲ್ಲಿ ಏನದ್ರೂ ಸಾಧನೆ ಮಾಡ್ಬೇಕು ಅನ್ನೋದು ನನ್ನ ಕನಸು ಎಂದು ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ. ಇನ್ನು ನಟಿ ಅನುಪಮಾ ಗೌಡ ಅವರು ಯಾವುದೇ ಸೀರೀಯಲ್ ಗಳಲ್ಲಿ ನಟಿಸುತ್ತಿಲ್ಲವಾದರು ಕೂಡ ತಮ್ಮದೇಯಾದ ಯೂಟ್ಯೂಬ್ ಚಾನೆಲ್ ವೊಂದನ್ನ ಆರಂಭಿಸಿ ಒಂದಷ್ಟು ತಮ್ಮಸಿನಿ, ಕಿರುತೆರೆ, ಜೀವನ ಅನುಭವಗಳನ್ನ ವೀಡಿಯೋದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.