ದುಬಾರಿ ಬೆಲೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಖರೀದಿಸಿದ ಎ.ಆರ್ ರೆಹಮಾನ್ ಕುಟುಂಬ

ಭಾರತೀಯ ಸಿನಿಮಾರಂಗದ ಸುಪ್ರಸಿದ್ದ ಸಂಗೀತ ನಿರ್ದೇಶಕನ ಪುತ್ರಿ ಈಗ ಐಷಾರಾಮಿ ದುಬಾರಿ ಬೆಲೆಯ ಎಲೆಕ್ಟ್ರಿಕ್ ಕಾರಿನ ಒಡತಿ. ಇತ್ತೀಚೆಗೆ ಕೆಲವು ದಿನಗಳಿಂದ ಅನೇಕರು ಅದು ಉದ್ಯಮಿ, ಸಿನಿಮಾ, ಕ್ರಿಕೆಟ್ ತಾರೆಗಳು ಸೇರಿದಂತೆ ಒಂದಷ್ಟು ಮಂದಿ ತಮ್ಮ ಲೈಫ್ ಸ್ಟೈಲ್ ಮೂಲಕ ಆಗಾಗ ಸುದ್ದಿ ಆಗ್ತಾನೇ ಇದ್ದಾರೆ. ಅದರಲ್ಲಿಯೂ ತುಂಬಾ ಜನ ದುಬಾರಿ ಮೌಲ್ಯದ ಐಷಾರಾಮಿ ಕಾರ್ ಖರೀದಿ ಮಾಡುವ ಮೂಲಕ ಭಾರಿ ಸುದ್ದಿ ಆಗಿದ್ದಾರೆ. ಅದರಂತೆ ಇದೀಗ ಭಾರತೀಯ ಚಿತ್ರರಂಗದ ಸುಪ್ರಸಿದ್ದ ಸಂಗೀತ ನಿರ್ದೇಶಕ ಗಾಯಕ ಎ.ಆರ್.ರೆಹಮಾನ್ ಅವರ ಪುತ್ರಿಯರು ಕೂಡಾ ನಾವು ಕೂಡಾ ಯಾರಿಗೂ ಕಡಿಮೆ ಇಲ್ಲ ಅನ್ನುವಂತೆ ಪೋರ್ಷೇ ಎಲೆಕ್ಟ್ರಿಕ್ ಕಾರನ್ನ ಕೊಂಡುಕೊಂಡಿದ್ದಾರೆ.

ಭಾರತದಲ್ಲಿ ಫಸ್ಟ್ ಟೈಮ್ ಮೊಟ್ಟ ಮೊದಲ ಬಾರಿಗೆ ಕಂಪ್ಲೀಟ್ ಎಲೆಕ್ಟ್ರಿಕ್ ಕಾರ್ ಅಂತ ಪರಿಚಯಿಸಿದ್ದು ಇದೇ ಪೋರ್ಷೇ ಕಂಪನಿಯ ಕಾರು. ಈ ಕಂಪನಿಯ ಎಲೆಕ್ಟ್ರಿಕ್ ಕಾರನ್ನ ಇದೀಗ ಎ.ಆರ್.ರೆಹಮಾನ್ ಅವರ ಪುತ್ರಿಯರಾದ ಖತೀಜಾ ರೆಹಮಾನ್ ಮತ್ತು ರಹೀಮಾ ರೆಹಮಾನ್ ಖರೀದಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ಇವರು ಇದೀಗ ಈ ಹೊಸ ಪೋರ್ಷೇ ಎಲೆಕ್ಟ್ರಿಕ್ ಕಾರ್ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದು, ಅದರ ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ವತಃ ಎ.ಆರ್.ರೆಹಮಾನ್ ಅವರು ಹಂಚಿಕೊಂಡಿದ್ದಾರೆ. ಇದೀಗ ಈ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಇನ್ನು ತಂದೆಯಂತೆಯೇ ರೆಹಮಾನ್ ಪುತ್ರಿಯರು ಕೂಡಾ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಖತೀಜಾ ರೆಹಮಾನ್ ಅವರು ತಮ್ಮ ಎ.ಆರ್.ರೆಹಮಾನ್ ಫೌಂಡೇಶನ್ ನಲ್ಲಿ ನಿರ್ದೇಶಕಿಯಾಗಿದ್ದು, ಸಂಗೀತಗಾರ್ತಿಯಾಗಿಯೂ ಸಹ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಖತೀಜಾ ರೆಹಮಾನ್ ಖರೀದಿ ಮಾಡಿರೋದು ಡೀಪ್ ಬ್ಲೂ ಶೇಡ್ ಹೊಂದಿರೋ ಸ್ಪೋರ್ಟ್ಸ್ ಕಾರ್ ಲುಕ್ ಹೊಂದಿರೋ ಪೋರ್ಷೇ ಎಲೆಕ್ಟ್ರಿಕ್ ಕಾರು. ಈ ಎಲೆಕ್ಟ್ರಿಕ್ ಕಾರಿನ ಬೆಲೆ ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕವಾಗಿದೆ ಎಂದು ಆಟೋಮೊಬೈಲ್ ಕ್ಷೇತ್ರದಲ್ಲಿ ತಿಳಿದು ಬಂದಿದೆ. ಈ ಪೋರ್ಷೇ ಎಲೆಕ್ಟ್ರಿಕ್ ಕಾರಿನ ಫೀಚರ್ಸ್ ತಿಳಿಯೋದಾದ್ರೆ ಎಲ್ ಇಡಿ, ಡಿ.ಆರ್.ಎಲ್ ನೊಟ್ಟಿಗೆ ಎಲ್ ವಿನ್ಯಾಸದ ಹೆಡ್ ಲ್ಯಾಂಪ್ ಗಳನ್ನ ಹೊಂದಿದ್ದು, ಮುಂಭಾಗದಲ್ಲಿ ಬ್ಲ್ಯಾಕ್ ಔಟ್ ಬಿ ಪಿಲ್ಲರ್ ಹಿಂಭಾಗದಲ್ಲಿ ಎಲ್.ಇ.ಡಿ ಲೈಟ್ ಬಾರ್ ಇದೆ. ಎರಡು ಟೋನ್ ಡ್ಯಾಶ್ ಬೋರ್ಡ್ ಸೇಂಟ್ರಲ್ 10.9 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಜೊತೆಗೆ ಅಡ್ವಾನ್ಸ್ಡ್ ಫೀಚರ್ಸ್ ಗಳನ್ನ ಹೊಂದಿದೆ.

Leave a Reply

%d bloggers like this: