ದುಬಾರಿ ಬೆಲೆಯ ಕಾರು ಖರೀದಿಸಿದ ಕನ್ನಡದ ಖ್ಯಾತ ನಿರೂಪಕಿ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಕಮ್ ನಟಿಯೊಬ್ಬರು ಇತ್ತೀಚೆಗೆ ರೇಂಜ್ ರೋವರ್ ಕಾರ್ ಖರೀದಿ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಕನ್ನಡದ ಬಣ್ಣದ ಲೋಕದಲ್ಲಿ ಇತ್ತೀಚೆಗೆ ಸಿನಿಮಾ ತಾರೆಯರು ಭಾರಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳಿವೆ. ಒಂದೆಡೆ ನಮ್ಮ ನಟಿಯರು ಹೊರ ರಾಜ್ಯಗಳಲ್ಲಿ ಅಂದರೆ ಪರಭಾಷಾ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಅದರಂತೆ ನಮ್ಮ ಕನ್ನಡ ಕಿರುತೆರೆಯ ನಿರೂಪಕಿಯರಲ್ಲಿ ಬಹು ಬೇಡಿಕೆಯ ನಿರೂಪಕಿಯರಲ್ಲಿ ಒಬ್ಬರಾಗಿರೋ ಚೈತ್ರ ವಾಸುದೇವನ್ ಅವರು ಇದೀಗ ಐಷಾರಾಮಿ ದುಬಾರಿ ಬೆಲೆಯ ಕಾರ್ ಖರೀದಿ ಮಾಡುವ ಸುದ್ದಿಯಾಗಿದ್ದಾರೆ. ಯಾವುದೇ ಕಾರ್ಯಕ್ರಮ ನಡೆಯಬೇಕಾದ್ರೆ ಅಲ್ಲಿಗೆ ನಿರೂಪಕ ಅಥವಾ ನಿರೂಪಕಿ ಅಗತ್ಯವಾಗಿ ಇರ್ಲೇಬೇಕು. ಅರಳು ಉರುಳಿದಂತೆ ಮಾತಿನ ಚಾಕಚಕ್ಯತೆ ಜೊತೆಗೆ ಕನ್ನಡ ಭಾಷೆಯಲ್ಲಿ ಹಿಡಿತ ಇದ್ದರೆ ಅಂತಹ ನಿರೂಪಕರಿಗೆ ನಮ್ಮಲ್ಲಿ ಅನೇಕ ಅವಕಾಶಗಳಿವೆ.

ಅಂತಹ ನಿರೂಪಕಿಯರಲ್ಲಿ ಚೈತ್ರಾ ವಾಸುದೇವನ್ ಅವರು ಮೊದಲ ಸಾಲಿನಲ್ಲಿ ಸ್ಥಾನ ಪಡೆಯುತ್ತಾರೆ. ಚೈತ್ರಾ ವಾಸುದೇವನ್ ಅವರು ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ವಿಧ್ಯಾಭ್ಯಾಸದ ಜೊತೆ ಜೊತೆಗೆ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಚೈತ್ರಾ ವಾಸುದೇವನ್ ಅವರು ತದ ನಂತರ ಅನೇಕ ರಿಯಾಲಿಟಿ ಷೋ ಮತ್ತು ಸಿನಿಮಾ ಅವಾರ್ಡ್ ಕಾರ್ಯಕ್ರಮ, ಇನ್ನಿತರ ಸಿನಿಮಾ ಸಂಬಂಧಿತ ಮತ್ತು ಖಾಸಗಿ ಕಂಪನಿಗಳ ಇವೆಂಟ್ ನಲ್ಲಿಯೂ ಸಹ ನಿರೂಪಕಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಇದುವರೆಗೆ ಚೈತ್ರಾ ವಾಸುದೇವನ್ ಅವರು ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. 2018 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮತ್ತು ಫ್ರಾಂಚೈಸ್ ಇಂಡಿಯನ್ ಅವಾರ್ಡ್ ಗಳಂತಹ ಅನೇಕ ಪ್ರಸಿದ್ದ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದಾರೆ. ಅದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ ಸೀಸನ್7 ರಲ್ಲಿಯೂ ಕೂಡ ವೈಡ್ ಕಾರ್ಡ್ ಎಂಟ್ರಿಯಾಗಿ ಒಂದಷ್ಟು ದಿನಗಳ ಕಾಲ ಸ್ಪರ್ಧಿಯಾಗಿ ಕೂಡ ಇದ್ದರು. ಉದ್ಯಮ ಹೊಂದಿರುವ ಚೈತ್ರಾ ವಾಸುದೇವನ್ ಅವರ ಕುಟುಂಬ ಸುಶಿಕ್ಷಿತ ಕುಟುಂಬ ವರ್ಗ.

ಇವರಿಗೆ ಚಂದನಾ ವಾಸುದೇವನ್ ಎಂಬ ಸೋದರಿಯಿದ್ದಾರೆ. ಉದ್ಯಮಿ ಸತ್ಯ ನಾಯ್ಡು ಎಂಬುವರೊಟ್ಟಿಗೆ ಮದುವೆ ಆಗಿರೋ ಚೈತ್ರಾ ವಾಸುದೇವನ್ ಅವರು ಬಿಝೆನೆಸ್ ಜೊತೆಗೆ ಇವೆಂಟ್ ಆಂಕರಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರೋ ಚೈತ್ರಾ ವಾಸುದೇವನ್ ಅವರು ಇತ್ತೀಚೆಗೆ ರೇಂಜ್ ರೋವರ್ ಖರೀದಿ ಮಾಡಿ ಕಾರ್ ಮುಂದೆ ನಿಂತು ಫೋಸ್ ಕೊಟ್ಟಿರೋ ಪೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚೈತ್ರಾ ಖರೀದಿ ಮಾಡಿರೋ ರೇಂಜ್ ರೋವರ್ ಇವೋಕ್ ಎಸ್ಯುವಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಪಡೆದಿವೆ. ಪೆಟ್ರೋಲ್ ಅಂಡ್ ಡೀಸೆಲ್ ಇಂಜಿನ್ ಆಯ್ಕೆ ಹೊಂದಿರೋ ಈ ಕಾರು ಗ್ರಾಹಕರ ಬೇಡಿಕೆಯಂತೆ ಎಲ್ಲಾ ರೀತಿಯ ಫೀಚರ್ ಗಳನ್ನೊಂದಿದೆ. ಈ ರೇಂಜ್ ರೋವರ್ ಇವೋಕ್ ಎಸ್ಯುವಿ ಕಾರಿನಲ್ಲಿ 2.0 ಲೀಟರಿನ ಡೀಸೆಲ್ ಪವರ್ ಟ್ರೈನ್ ಆಯ್ಕೆಗಳಿದ್ದು ಇದರ ಬೆಲೆ ಎಪ್ಪತ್ತು ಪೆಟ್ರೋಲ್ ಮಾದರಿಯ 9ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ 247 ಬಿಎಚ್ಪಿ ಪವರ್ ಮತ್ತು 365 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ.

Leave a Reply

%d bloggers like this: