ದುಬಾರಿ ಬೆಲೆಯ ಬುಲೆಟ್ ಪ್ರೂಫ್ ಕಾರು ಖರೀದಿಸಿದ ನಟ ಸಲ್ಮಾನ್ ಖಾನ್, ದೊಡ್ಡ ಕಾರಣ ಇಲ್ಲಿದೆ

ಈ ಸಿನಿಮಾ ಸೆಲೆಬ್ರಿಟಿಗಳು ಐಷಾರಾಮಿ ದುಬಾರಿ ಬೆಲೆವುಳ್ಳ ಕಾರುಗಳನ್ನು ಖರೀದಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬುಲೆಟ್ ಫ್ರೂಫ್ ಕಾರುಗಳನ್ನು ಖರೀದಿ ಮಾಡಿರುವ ಸುದ್ದಿಯನ್ನ ಕೇಳಿರಲಿಲ್ಲ,ನೋಡಿರಲಿಲ್ಲ. ಒಂದೊಮ್ಮೆ ನೋಡಿದರು ಕೂಡ ದೇಶದ ಉನ್ನತ ಸ್ಥಾನ ಮಾನ ಹೊಂದಿರುವ ಗಣ್ಯ ವ್ಯಕ್ತಿಗಳು ಈ ವಿಶೇಷ ಸೌಲಭ್ಯ ಇರುವ ಕಾರುಗಳನ್ನ ಬಳಕೆ ಮಾಡುತ್ತಾರೆ. ಆದರೆ ಒಬ್ಬ ಸಿನಿಮಾ ಸ್ಟಾರ್ ನಟ ಬುಲೆಟ್ ಪ್ರೂಫ್ ಕಾರು ಖರೀದಿ ಮಾಡಿರುವುದು ವಿರಳಾತಿ ವಿರಳ ಅಂತ ಹೇಳ್ಬೋದು. ಇದೀಗ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಬುಲೆಟ್ ಪ್ರೂಫ್ ಕಾರನ್ನ ಖರೀದಿ ಮಾಡಿದ್ದಾರೆ.

ಅದರ ಜೊತೆಗೆ ತನ್ನ ಅಂಗ ರಕ್ಷಕರ ಸಂಖ್ಯೆಯನ್ನ ಕೂಡ ದ್ವಿಗುಣಗೊಳಿಸಿಕೊಂಡಿದ್ದಾರಂತೆ. ಸಲ್ಮಾನ್ ಖಾನ್ ಅವರಿಗೆ ಜೀವ ಭಯ ಇದ್ದು ಈಗಾಗಲೇ ಅವರಿಗೆ ಸಲ್ಮಾನ್ ಖಾನ್ ಮತ್ತು ಅವರ ತಂದೆಯನ್ನ ಕೊಲ್ಲುತ್ತೀವಿ ಎಂದು ಬೆದರಿಕೆ ಪತ್ರ ಬಂದಿದೆಯಂತೆ‌. ಇದರ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮುಂಜಾಗೃತವಾಗಿ ಮುಂಬೈ ಪೊಲೀಸ್ ಆಯುಕ್ತರಾದ ವಿವೇಕ್ ಫನ್ಸಾಲ್ಕರ್ ಅವರನ್ನ ಭೇಟಿಯಾಗಿ ವಿಶೇಷ ರಿವಾಲ್ವರ್ ಇಟ್ಟುಕೊಳ್ಳಲು ತಮಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇತ್ತೀಚೆಗೆ ಕೆಲವು ದಿನಗಳಿಂದ ಟೈಗರ್3 ಸಿನಿಮಾದ ಶೂಟಿಂಗ್ ಆರಂಭ ಆಗಿರುವುದರಿಂದ ಸಲ್ಮಾನ್ ಖಾನ್ ತಮ್ಮ ಅಂಗ ರಕ್ಷಕರೊಟ್ಟಿಗೆ ಬುಲೆಟ್ ಪ್ರೂಫ್ ಕಾರನ್ನೇ ತೆಗೆದುಕೊಂಡು ಚಿತ್ರೀಕರಣಕ್ಕೆ ಹೋಗುತ್ತಿದ್ದಾರಂತೆ.

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಆದ ನಂತರ ಒಂದಷ್ಟು ಸೆಲೆಬ್ರಿಟಿಗಳಿಗೆ ಜೀವಭಯವಿದೆ‌. ಈಗಾಗಲೇ ಗಾಯಕ ಸಿಧು ಅವರನ್ನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಂಜಾಬಿನ ಅಮೃತಸರ ಜಿಲ್ಲೆಯ ಬೀಚಾ ಭಕ್ನಾ ಗ್ರಾಮದಲ್ಲಿ ಎನ್ ಕೌಂಟರ್ ಮಾಡಲಾಗಿತ್ತು. ಒಟ್ಟಾರೆಯಾಗಿ ಇದೀಗ ಕೆಲವು ಕಿಡಿಗೇಡಿಗಳ ಬೆದರಿಕೆ ಪತ್ರದಿಂದಾಗಿ ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳು ಮುಂಜಾಗೃತವಾಗಿ ತಮ್ಮ ತಮ್ಮ ಆತ್ಮ ರಕ್ಷಣೆಯತ್ತ ಗಮನ ಹರಿಸುತ್ತಿದ್ದಾರೆ. ಅದರಂತೆ ನಟ ಸಲ್ಮಾನ್ ಖಾನ್ ಕೂಡ ತಮ್ಮ ವೇಳಾಪಟ್ಟಿಯ ಮೇಲೆ ನಿಗಾ ಇಟ್ಟಿದ್ದು, ಶೂಟಿಂಗ್ ಹೊರತುಪಡಿಸಿ ಅನಗತ್ಯ ಯಾವುದೇ ಕಾರ್ಯಕ್ರಮಗಳಿಗೆ ಹೋಗದೆ ಆದಷ್ಟು ಜಾಗೃತರಾಗಿದ್ದಾರೆ.

Leave a Reply

%d bloggers like this: