ದುಬಾರಿ ಬೆಲೆಯ ಬಿ.ಎಮ್.ಡಬ್ಲು ಕಾರು ಖರೀದಿಸಿದ ಕನ್ನಡ ನಟ ಅವಿನಾಶ್ ಅವರು

ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ ಇದೀಗ ನೂತನ ಐಷಾರಾಮಿ ದುಬಾರಿ ಬೆಲೆಯ ಕಾರೊಂದನ್ನ ಖರೀದಿ ಮಾಡಿ ಸಿನಿರಂಗದಲ್ಲಿ ಸಖತ್ ಸುದ್ದಿ ಆಗಿದ್ದಾರೆ. ನಟ ಬಿ.ಎಸ್ ಅವಿನಾಶ್ ಅಂದಾಕ್ಷಣ ಬಹುತೇಕ ಮಂದಿಗೆ ಗೊಂದಲ ಆಗ್ಬೋದು. ನಮಗೆ ಖ್ಯಾತ ಹಿರಿಯ ನಟ ಅವಿನಾಶ್ ಗೊತ್ತು. ಯಾರ್ ಸ್ವಾಮಿ ಈ ಬಿಎಸ್. ಅವಿನಾಶ್ ಅಂಥ. ನೀವು ರಾಕಿಂಗ್ ಸ್ಟಾರ್ ಯಶ್ ಅವರ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ನೋಡಿದ್ರೆ ಆಂಡ್ರೂಸ್ ಅನ್ನೋ ಪಾತ್ರ ಗೊತ್ತೇ ಇರುತ್ತೆ. ಈ ಆಂಡ್ರೂಸ್ ಪಾತ್ರ ಮಾಡಿರೋದು ಬೇರಾರು ಅಲ್ಲ. ಅವರೇ ಬಿಎಸ್.ಅವಿನಾಶ್. ಆಂಡ್ರೂಸ್ ಪಾತ್ರ ಅವಿನಾಶ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟು ಭಾರತೀಯ ಚಿತ್ರರಂಗದಲ್ಲಿ ತಮ್ಮದೇಯಾದ ಒಂದು ಛಾಪನ್ನು ಮೂಡುವಂತೆ ಮಾಡಿತು.

ಬಿಎಸ್ ಅವಿನಾಶ್ ಅವರು ಬಣ್ಣದ ಲೋಕಕ್ಕೆ ಬಂದದ್ದು ಕಾಕತಾಳೀಯ ಅಂತಾನೇ ಹೇಳ್ಬೋದು. ದಿ.ನಟ ಚಿರಂಜೀವಿ ಸರ್ಜಾ ಅವರು ಹೋಗ್ತಿದ್ದ ಜಿಮ್ ನಲ್ಲಿ ಅವಿನಾಶ್ ಅವರು ಪರಿಚಯ ಆಗ್ತಾರೆ. ನೋಡೋಕೆ ಫಿಟ್ ಅಂಡ್ ಫೈನ್ ಆಗಿದ್ದ ಅವಿನಾಶ್ ಅವರನ್ನ ಕಂಡ ಚಿರಂಜೀವಿ ಸರ್ಜಾ ಅವರು ತಮ್ಮ ಆಪ್ತ ಗೆಳೆಯ ನಿರ್ದೇಶಕ ಪನ್ನಾಗಭರಣ ಅವರನ್ನ ಪರಿಚಯ ಮಾಡಿಸಿ ನಟನೆಗೆ ಅವಕಾಶ ಕೊಡಿಸ್ತಾರೆ. ಪನ್ನಾಗಭರಣ ಅವರ ಟೀಮ್ ಸೇರಿದ ಅವಿನಾಶ್ ಅವರು ನಟನೆಯ ಎಲ್ಲಾ ರೀತಿಯ ಕಸರತ್ತು ತರಬೇತಿ ನಡೆಸಿಕೊಂಡರು. ತದ ನಂತರ ಪನ್ನಾಗಭರಣ ಅವರ ತಂದೆ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿಬಂದ ಡಾಲಿ ಧನಂಜಯ್ ಅವರ ನಟನೆಯ ಅಲ್ಲಮ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದಕ್ಕೆ ಆಯ್ಕೆ ಆಗ್ತಾರೆ.

ಬಳಿಕ ಅವಿನಾಶ್ ಅವರು ಪ್ರಶಾಂತ್ ನೀಲ್ ಅವರ ಕಣ್ಣಿಗೆ ಬಿದ್ದು ಕೆಜಿಎಫ್ ಚಿತ್ರದ ಆಂಡ್ಯೂಸ್ ಪಾತ್ರಕ್ಕೆ ಆಯ್ಕೆ ಆಗಿ ಇಂದು ಕನ್ನಡ ಚಿತ್ರರಂಗ ಮಾತ್ರ ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಉದ್ಯಮಿ ಆಗಿರೋ ಅವಿನಾಶ್ ಅವರು ಆರ್ಥಿಕವಾಗಿ ಸಬಲರೇ ಆಗಿದ್ದಾರೆ. ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆಯಷ್ಟೆ ಅವರ ಬೆನ್ಜ್ ಕಾರು ಆಕ್ಸಿಡೆಂಟ್ ಆಗಿತ್ತು. ಇದರಿಂದ ಅವರಿಗೆ ಯಾವುದೇ ರೀತಿ ಪ್ರಾಣಹಾನಿ ಆಗದೇ ಬಚಾವ್ ಆಗಿದ್ದರು. ಈ ಆಘಾತದಿಂದ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡ ಅವಿನಾಶ್ ಅವರು ಇದೀಗ ಬರೋಬ್ಬರಿ ಕೋಟಿ ಬೆಲೆಯ ಬಿಎಂಡಬ್ಲ್ಯೂ ಎಕ್ಸ್ ಫೈವ್ ಮಾಡೆಲ್ ಐಷಾರಾಮಿ ಕಾರನ್ನ ಖರೀದಿ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಆಂಡ್ರೂಸ್ ಅಲಿಯಾಸ್ ಬಿ.ಎಸ್.ಅವಿನಾಶ್ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ಬಿಎಸ್ ಅವಿನಾಶ್ ಅವರು ಡಾಲಿ ಧನಂಜಯ್ ಅವರ ನಟನೆಯ ಹೊಯ್ಸಳ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

Leave a Reply

%d bloggers like this: