ದುಬಾರಿ ಬೆಲೆಯ ಬೆಂಜ್ ಕಾರನ್ನು ತನ್ನದಾಗಿಸಿಕೊಂಡ 27 ವಯಸ್ಸಿನ ದಕ್ಷಿಣ ಭಾರತದ ನಟಿ

ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸೂರರೈ ಪೋಟ್ರು ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಪರ್ಣ ಬಾಲಮುರುಳಿ ಅವರು ಇದೀಗ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಕನ್ನಡದ ಕ್ಯಾಪ್ಟನ್ ಗೋಪಿನಾಥ್ ಅವರ ಸ್ಫೂರ್ತಿದಾಯಕ ಕಥೆಯಾಗಿದ್ದ ಸೂರರೈ ಪೋಟ್ರು ಸಿನಿಮಾ ಇಡೀ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಗಳಿಸಿತ್ತು. ನಟ ಸೂರ್ಯ ಅವರ ನಟನೆ ಮತ್ತು ನಟಿ ಅಪರ್ಣಾ ಅವರ ಅಭಿನಯಕ್ಕೆ ಎಲ್ಲೆಡೆ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅದರಲ್ಲಿಯೂ ನಟಿ ಅಪರ್ಣ ಬಾಲಮುರುಳಿ ಅವರ ಪಾತ್ರ ಬಹುತೇಕರಿಗೆ ಸ್ಪೂರ್ತಿ ಆದರ್ಶವಾಗಿ ಕಂಡಿತು.

ಈ ಸೂರರೈ ಪೋಟ್ರು ಸಿನಿಮಾ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಕಥೆ ಸಿಂಪ್ಲಿ ಫ್ಲೈ ಎಂಬ ಪುಸ್ತಕವನ್ನ ಆಧರಿಸಿತ್ತು. ಇನ್ನು ಇದೀಗ ಈ ಚಿತ್ರದಲ್ಲಿ ನಟಿಸಿದ್ದ ನಟಿ ಅಪರ್ಣ ಬಾಲಮುರುಳಿ ಅವರು ಬರೋಬ್ಬರಿ 65 ಲಕ್ಷ ರೂ.ಮೌಲ್ಯದ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ ಎ35 ಕಾರನ್ನ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಈ ಮರ್ಸಿಡಿಸ್ ಬೆಂಝ್ ಕಾರು ಸಣ್ಣ ಎಸ್.ಯು.ವಿ ಜಿಎಲ್ಎ ಪರ್ಫಾಮೆನ್ಸ್ ಆವೃತ್ತಿಯದ್ದಾಗಿದೆ. ಅತ್ಯಾಧುನಿಕ ಫೀಚರ್ಸ್ ಒಳಗೊಂಡಿದ್ದು, 30 ಎಂಎಂ ಹೆಚ್ಚುವರಿ ಉದ್ದ ಅಗಲದ ಜೊತೆಗೆ 104 ಎಂಎಂ ಕಡಿಮೆ ಎತ್ತರವನ್ನೊಳಗೊಂಡಿದೆ. ಬೃಹತ್ ಗಾತ್ರದ 19 ಇಂಚಿನ ಅಲಾಯ್ ವೀಲ್ಹ್ ,ಟ್ವಿನ್ ಎಕ್ಸಾಸ್ಟ್ ಎಎಂಜಿ ಬ್ಯಾಡ್ಜ್ ಹೊಂದಿದೆ. 1.3 ಲೀಟರ್ ಟರ್ಬೋ ಪೆಟ್ರೋಲ್ ಅಂಡ್ 2.0 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆಯನ್ನ ಹೊಂದಿದೆ.

ಅದರ ಜೊತೆಗೆ 1.3 ಲೀಟರ್ ಪೆಟ್ರೋಲ್ ಎಂಜಿನ್ 161 ಬಿಎಚ್ಪಿ ಪವರ್ ಮತ್ತು 250 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುವ ಸಾಮರ್ಥ್ಯವನ್ನೊಳಗೊಂಡಿರುತ್ತದೆ. ಇದರಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಇದ್ದು, ಜಸ್ಟ್ 8.7 ಸೆಕೆಂಡ್ ಗಳಲ್ಲಿ 0-100 ಕಿಮೀ ವೇಗ ಪಡೆದುಕೊಳ್ಳಲಿದೆಯಂತೆ. ಹೀಗೆ ಒಂದಷ್ಟು ಆಧುನಿಕ ತಂತ್ರ ಜ್ಞಾನಗಳನ್ನ ಅಳವಡಿಸಿದ್ದು, ಆಕರ್ಷಕ ವಿನ್ಯಾಸ ಮತ್ತು ಅಡ್ವಾನ್ಸ್ಡ್ ಫೀಚರ್ಸ್ ಗಳನ್ನ ಹೊಂದಿದೆ. ಈ ಕಾರನ್ನ ನಟಿ ಅಪರ್ಣ ಬಾಲಮುರುಳಿ ಅವರು ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ನಟಿ ಅಪರ್ಣ ಅವರು ಸೂರರೈ ಪೋಟ್ರು ಸಿನಿಮಾದಲ್ಲಿ ಅಮೋಘ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಉತ್ತರಮ್, ಆಕಾಶಂ, ಪದ್ಮಿನಿ, ಕಾಪ ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋ ಅರ್ಪಣ ಅವರು ಸದ್ಯಕ್ಕೆ ತಮಿಳು ಮತ್ತು ಮಲೆಯಾಳಂ ಸಿನಿಮಾರಂಗದಲ್ಲಿ ಸಖತ್ ಬ್ಯೂಸಿಯೆಸ್ಟ್ ನಟಿಯಾಗಿದ್ದು, ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Leave a Reply

%d bloggers like this: