ದುಬಾರಿ ಬೆಲೆಯ ಬಟ್ಟೆಯಲ್ಲಿ ಮಿಂಚಿದ ದಕ್ಷಿಣ ಭಾರತದ ಸ್ಟಾರ್ ನಟಿ

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ಸಖತ್ ಲಕ್ಸುರಿಯಾಗಿಯೇ ಇರುತ್ತೆ. ಕೆಲವು ಸಿನಿಮಾ ಇವೆಂಟ್ಸ್ ಅಥವಾ ಇನ್ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬೇಕಾದಾಗ ಸ್ಟಾರ್ ನಟ ನಟಿಯರು ತಮ್ಮ ಉಡುಗೆ ತೊಡುಗೆಯ ಬಗ್ಗೆ ಭಾರಿ ಕೇರ್ ತೆಗೆದುಕೊಳ್ಳುತ್ತಾರೆ. ಅವರ ತೊಡುವ ಬಟ್ಟೆ ಬರೆಗಳು ಕಾರ್ಯಕ್ರಮದಲ್ಲಿ ನೆರೆದಿರುವವರ ಕಣ್ಣನ್ನ ಕುಕ್ಕುತ್ತವೆ. ಅದರಲ್ಲೂ ಈ ಹಾಟ್ ಬೆಡಗಯರಂತೂ ಅಷ್ಟರ ಮಟ್ಟಿಗೆ ಡ್ರೆಸ್ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಡ್ರೆಸ್ ವಿಚಾರವಾಗಿ ಭಾರಿ ಸದ್ದು ಆಗುತ್ತಿರೋದು ಅಂದ್ರೆ ಅದು ದಕ್ಷಿಣ ಭಾರತದ ಆಪಲ್ ಬ್ಯೂಟಿ ಸಮಂತಾ. ನಟಿ ಸಮಂತಾ ಅವರಿಗೆ ಪುಷ್ಪ ಚಿತ್ರದ ನಂತರ ದೇಶದೆಲ್ಲೆಡೆ ಅಪಾರ ಜನಪ್ರಿಯತೆ ಸಿಕ್ಕಿದೆ. ಅದರ ಜೊತೆಗೆ ಆಕೆಯ ಕಾಲ್ ಶೀಟ್ ಗಾಗಿ ನಿರ್ಮಾಪಕರು, ನಿರ್ದೇಶಕರು ಕಾತುರದಲ್ಲಿ ಕಾಯುತ್ತಿದ್ದಾರೆ.

ಅಷ್ಟರ ಮಟ್ಟಿಗೆ ಕ್ರೇಜ಼್ ಪಡೆದುಕೊಂಡಿರುವ ನಟಿ ಸಮಂತಾ ಅವರು ಸದ್ಯದ ಮಟ್ಟಿಗೆ ಸೌತ್ ಸಿನಿ ದುನಿಯಾದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ವಿಜಯ್ ದೇವರಕೊಂಡ ಅವರೊಟ್ಟಿಗೆ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿರೋ ಸಮಂತಾ ಅವರು ಈಗ ಯಶೋಧಾ ಮತ್ತು ಶಾಕುಂತಲಾ ಸಿನಿಮಾಗಳಲ್ಲಿ ಬಿಝಿ಼ಯಾಗಿದ್ದಾರೆ. ಇದರ ನಡುವೆ ಸಮಂತಾ ಅವರು ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಎಂಬ ಶೋನಲ್ಲಿ ಕಾಣಿಸಿಕೊಂಡಿದ್ರು. ಇದರಲ್ಲಿ ಅಕ್ಷಯ್ ಕುಮಾರ್ ಅವರೊಟ್ಟಿಗೆ ಗುಲಾಬಿ ಮತ್ತು ಕೆಂಪು ಬಣ್ಣದ ಡ್ರೆಸ್ ನಲ್ಲಿ ಸಖತ್ತಾಗಿಯೇ ಮಿಂಚಿದ್ದರು. ಈ ಡ್ರೆಸ್ ನಲ್ಲಿ ಸಮಂತಾ ಅವರು ನೋಡುಗರ ಕಣ್ಮನ ಸೆಳೆದಿದ್ರು. ಈ ಕಾರ್ಯಕ್ರಮದ ಪ್ರೋಮೋನಲ್ಲಿ ಅಕ್ಷಯ್ ಅವ್ರು ಸಮಂತಾ ಅವರನ್ನ ಎತ್ಕೊಂಡಿದ್ದು ಸಖತ್ ವೈರಲ್ ಆಗಿತ್ತು.

ಇನ್ನು ನಟಿ ಸಮಂತಾ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕ್ರಿಸ್ ಮಸ್ ಹಬ್ಬದಂದು ಕಪ್ಪು ಬಣ್ಣದ ಗೌನ್ ವೊಂದನ್ನ ಧರಿಸಿರೋ ಫೋಟೋ ಅಪ್ ಲೋಡ್ ಮಾಡಿದ್ರು. ತೊಡೆಯ ಭಾಗದಲ್ಲಿ ಸೀಳಿದ್ದ ಕ್ಲಾಸಿಕ್ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ಸಖತ್ ಹಾಟ್ ಆಗಿ ಕಾಣಿಸಿತ್ತು. ಈ ಡ್ರೆಸ್ ನಲ್ಲಿ ಸಮಂತಾ ಅವರನ್ನ ಕಂಡು ಪಡ್ಡೆ ಹುಡುಗ್ರು ನಿದ್ದೆ ಬಿಟ್ಟಿದ್ರು. ಅಷ್ಟರ ಮಟ್ಟಿಗೆ ಸಮಂತಾ ತಮ್ಮ ಡ್ರೆಸ್ ಗಳ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಇದೀಗ ನೋರ್ಮಕಮಲಿ ವೆಬ್ ಸೈಟ್ ನಲ್ಲಿ ನಟಿ ಸಮಂತಾ ಅವರು ಧರಿಸಿದ್ದ ಬ್ಲ್ಯಾಕ್ ಗೌನ್ ಡ್ರೆಸ್ ಇದ್ದು, ಡೇಡ್ ನೈಟ್ಗಳು, ಕಾಕ್ ಟೈಲ್ ಪಾರ್ಟಿಗಳು ಇನ್ನಿತರ ಇವೆಂಟ್ ಗಳಿಗೆ ಧರಿಸಬಹುದು ಎಂದು ಜಾಹೀರಾತನ್ನ ಪಡೆದುಕೊಂಡಿದೆ. ಇದರ ಬೆಲೆ ಬರೋಬ್ಬರಿ 11,630 ಎಂದು ನಮೂದಿಸಲಾಗಿದೆ. ಸಮಂತಾ ಧರಿಸಿದ್ದ ಈ ಬ್ಲ್ಯಾಕ್ ಗೌನ್ ಬೆಲೆ ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: