ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ದಕ್ಷಿಣ ಭಾರತದ ಸ್ಟಾರ್ ನಟಿ, ಕಾರಿನ ಬೆಲೆ ಎಷ್ಟು

ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಇತ್ತೀಚೆಗೆ ವಿಜಯ ದಶಮಿ ದಸರಾ ಹಬ್ಬದ ಪ್ರಯುಕ್ತ ಮನೆಗೆ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಬರ ಮಾಡಿಕೊಂಡಿದ್ದಾರೆ‌. ಸದ್ಯಕ್ಕೆ ಸೌತ್ ಸಿನಿರಂಗದಲ್ಲಿ ಈ ನಟಿಯದ್ದೇ ಸಖತ್ ಟಾಕ್ ಆಗಿದೆ. ಆ ನಟಿ ಯಾರ್ ಅಂತ ನಿಮ್ಗೇ ಗೊತ್ತಾದ್ರೆ ನೀವ್ ನಿಜಕ್ಕೂ ಕೂಡ ಎಕ್ಸೈಟ್ ಆಗ್ತಿರಿ. ಹೌದು ಮಹಾನಟಿ ಅಂತಹ ಸೂಪರ್ ಹಿಟ್ ಸಿನಿಮಾ ಮಾಡಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡ ನಟಿ ಕೀರ್ತಿ ಸುರೇಶ್ ಅವರೇ ಈಗ ದುಬಾರಿ ಕಾರ್ ಖರೀದಿ ಮಾಡಿ ಸುದ್ದಿ ಆಗಿದ್ದಾರೆ. ಅಷ್ಟಕ್ಕೂ ನಟಿ ಕೀರ್ತಿ ಸುರೇಶ್ ಅವರು ಖರೀದಿಸಿರೋ ಆ ಕಾರ್ ಯಾವುದು ಗೊತ್ತಾ. ಅದರ ಬೆಲೆ ಮತ್ತು ಅದರ ವಿಶೇಷತೆಗಳನ್ನ ನೀವು ತಿಳಿಯಲೇಬೇಕು. ಅಷ್ಟರ ಮಟ್ಟಿಗೆ ಕೀರ್ತಿ ಸುರೇಶ್ ಅವರು ಬಹಳ ಇಷ್ಟ ಪಟ್ಟು ಈ ಕಾರ್ ಖರೀದಿ ಮಾಡಿದ್ದಾರೆ.

ನಟಿ ಕೀರ್ತಿ ಸುರೇಶ್ ತಮಿಳು, ತೆಲುಗು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರ ಪೈಕಿ ಈ ಕೀರ್ತಿ ಸುರೇಶ್ ಕೂಡ ಒಬ್ಬರು. ಕೀರ್ತಿ ಸುರೇಶ್ ಅವರಿಗೆ ಲಕ್ಷಾಂತರ ಅಭಿಮಾನಿಗಳು ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ರೀಯವಾಗಿರುವ ಕೀರ್ತಿ ಸುರೇಶ್ ಅವರು ತಮ್ಮ ಸಿನಿಮಾ ಮತ್ತು ವೈಯಕ್ತಿಕ ಜೀವನದ ಒಂದಷ್ಟು ಲೇಟೆಸ್ಟ್ ಅಪ್ ಡೇಟ್ಸ್ ಗಳನ್ನ ನೀಡ್ತಾನೇ ಇರ್ತಾರೆ. ಅದ್ರಂತೆ ಇದೀಗ ಕೀರ್ತಿ ಸುರೇಶ್ ಅವರು ತಾವು ಖರೀದಿ ಮಾಡಿದ ಬಿಎಂಡಬ್ಲ್ಯೂ ಎಕ್ಸ್7 ಕಾರಿನ್ನ ಪೋಸ್ಟ್ ಮಾಡಿ ತಾವು ಕಾರ್ ಖರೀದಿಸಿದ ಸುದ್ದಿಯನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೀಲಿ ಬಣ್ಣದ ಬಿಎಂಡಬ್ಲ್ಯೂ ಎಕ್ಸ್7 ನೂತನ ಕಾರನ್ನ ಪೂಜೆ ಮಾಡುತ್ತಿರೋ ಫೋಟೋವನ್ನ ಶೇರ್ ಮಾಡಿದ್ದಾರೆ.

ಈ ಬಿಎಂಡಬ್ಲ್ಯೂ ಎಕ್ಸ್7 ಕಾರು ಸೆವೆನ್ ಸೀಟರ್ ಹೊಂದಿದ್ದು, ಈ ಕಾರು ಡಿಸೈನ್ ಫ್ಯೂರ್ ಎಕ್ಸ್ ಲೆನ್ಸ್ ಟೆಕ್ನಾಲಜಿಯಡಿಯಲ್ಲಿ ನಿರ್ಮಾಣವಾಗಿದೆ. ಇಂಟೇರಿಯರ್ ನಲ್ಲಿ ಬಿಲ್ಟ್ ಇನ್ ಹೆಡ್ಸ್ ಅಪ್ ಡಿಸ್ಪ್ಲೈಯ ಜೊತೆಗೆ 12.3 ಇಂಚಿನ ಟೂಲ್ ಪ್ಯಾನಲ್ ಒಳಗೊಂಡಿದೆ. 12.3 ಟಚ್ ಇನ್ಫೋಟೈನ್ ಮೆಂಟ್, ಹರ್ಮನ್ ಆಡಿಯೋ ಸಿಸ್ಟಮ್ ಹೊಂದಿದೆ. ಇದ್ರಲ್ಲಿ ನೀವ್ ಮ್ಯೂಸಿಕ್ ಹೆಚ್ಚು ಕಡಿಮೆ ಮಾಡೋದಕ್ಕೆ ಗೆಸ್ಚರ್ ಮಾಡ್ಬೋದಾಗಿದೆ. ವೈರ್ ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್, ಲೇನ್ ಮಾನಿಟರಿಂಗ್, ಆಟೋ ಲೆವೆಲಿಂಗ್ ಅಡಾಪ್ಟಿವ್ ಸಸ್ಪೆನ್ಸ್ ಫೀಚರ್ಸ್ ಗಳನ್ನೊಂದಿದೆ. ಈ ಬಿಎಂಡಬ್ಲ್ಯೂ ಎಕ್ಸ್ ಸೆವೆನ್ ಪೆಟ್ರೋಲ್ ಮಾದರಿಯ ಕಾರು ಮೂರು ಲೀಟರಿನ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿದೆ. ಇನ್ನು ಈ ಕಾರು 335 ಬಿಎಚ್ಪಿ ಪವರ್ ಅಂಡ್ 450 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ.

ಇನ್ನು ನಟಿ ಕೀರ್ತಿ ಸುರೇಶ್ ಅವರು ಖರೀದಿ ಮಾಡಿರುವ ಈ ಬಿಎಂಡಬ್ಲ್ಯೂ ಎಕ್ಸ್7 ಕಾರಿನ ಆರಂಭಿಕ ಬೆಲೆ ಬರೋಬ್ಬರಿ 1.18 ಕೋಟಿ ಯಿಂದ ಟಾಪ್ ಎಂಡ್ ಮಾದರಿ 1.78 ಕೋಟಿಯಷ್ಟಿದೆ. ಇನ್ನು ಸಿನಿಮಾ ವಿಚಾರವಾಗಿ ಬರೋದಾದ್ರೆ ನಟಿ ಕೀರ್ತಿ ಸುರೇಶ್ ಅವರಿಗೆ ಮಹಾನಟಿ ಸಿನಿಮಾದಲ್ಲಿನ ಅಮೋಘ ನಟನೆಗೆ ನ್ಯಾಷನಲ್ ಅವಾರ್ಡ್ ಕೂಡ ಪಡೆದಿದ್ದಾರೆ. ಸದ್ಯಕ್ಕೆ ಜ್ಯೂನಿಯರ್ ಎನ್ಟಿಆರ್ ಅವರ ಹೊಸ ಚಿತ್ರದಲ್ಲಿ ನಾಯಕಿ ಆಗಿ ನಟಿಸಲಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಈ ಸಿನಿಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಲಿದ್ದಾರಂತೆ. ಇನ್ನೂ ಇತ್ತೀಚೆಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ಸರ್ಕಾರುವಾರಿ ಪಾಟ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಇದೀಗ ನಟಿ ಕೀರ್ತಿ ಸುರೇಶ್ ಅವರು ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡುವ ಮೂಲಕ ಸೌತ್ ಸಿನಿರಂಗದಲ್ಲಿ ಸುದ್ದಿಯಲ್ಲಿದ್ದಾರೆ.

Leave a Reply

%d bloggers like this: