ಡಾ.ರಾಜ್ ಕುಮಾರ್ 100 ಸಿನೆಮಾ ನಟಿಸಿದ್ದರೂ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ? ಅಣ್ಣಾವ್ರ ನೈಜ ಕಥೆ

ಸಿನಿಮಾ ತಾರೆಯರು ಅಂದಾಕ್ಷಣ ಅವರ ಬದುಕು ಆಡಂಬರದ ಐಷಾರಾಮಿ ಜೀವನ ಎಂದು ತಿಳಿದಿರುತ್ತೇವೆ.ಇದು ನಿಜವು ಕೂಡ ಹೌದು.ಆದರೆ ಎಲ್ಲಾ ಕಲಾವಿದರು ಕೂಡ ಕೋಟಿ ಕೋಟಿ ಸಂಭಾವನೆ ಪಡೆಯುವುದಿಲ್ಲ.ಇಂದು ಯಾವುದೇ ಚಿತ್ರರಂಗದ ಹೊಸ ನಟ ತಮ್ಮ ಮೊದಲ ಚಿತ್ರ ಸೂಪರ್ ಹಿಟ್ ಆದ ತಕ್ಷಣ ಸಾವಿರವಿದ್ದ ಸಂಭಾವನೆಯನ್ನ ಕೋಟಿಗೆ ಏರಿಸಿಕೊಳ್ಳುತ್ತಾನೆ. ಆದರೆ ಕನ್ನಡ ಚಿತ್ರರಂಗದ ಈ ಸುಪ್ರಸಿದ್ದ ನಟರೊಬ್ಬರು ತಮ್ಮ ನೂರನೇ ಚಿತ್ರ ಮಾಡುವಾಗ ಕೂಡ ಕೇವಲ 50 ಸಾವಿರ ಸಂಭಾವನೆಯನ್ನು ಕೂಡ ಪಡೆದಿರಲಿಲ್ಲ.ಹೌದು ಕನ್ನಡ ನಾಡು-ನುಡಿ ಸಂಸ್ಕೃತಿ-ಆಚರಣೆಗಳ ಪ್ರತೀಕವಾಗಿದಂತೆ ಇದ್ದ ನಟ ಸಾರ್ವಭೌಮ,ಕನ್ನಡ ಕಂಠೀರವ, ಗಾನಗಂಧರ್ವ ಡಾ. ರಾಜಕುಮಾರ್ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಸಾಮಾಜಿಕ,ಕೌಟುಂಬಿಕ ಐತಿಹಾಸಿಕ,ಪೌರಾಣಿಕ ಹೀಗೆ ಎಲ್ಲಾ ಪಾತ್ರಗಳಿಗೂ ಕೂಡ ಪರಕಾಯ ಪ್ರವೇಶಮಾಡಿ ನಟಿಸುತ್ತಿದ್ದರು. ಡಾ. ರಾಜಕುಮಾರ ಅವರು ಬೇಡರ ಕಣ್ಣಪ್ಪ ಚಿತ್ರದಿಂದ ಹಿಡಿದು ಶಬ್ದವೇದಿ ಚಿತ್ರಗಳ ವರೆಗೆ ತಾವು ಮಾಡಿರುವ ಎಲ್ಲಾ ಪಾತ್ರಗಳಲ್ಲಿಯೂ ಅದ್ಭುತವಾಗಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರನ್ನ ರಂಜಿಸಿ ಅವರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿದ್ದಾರೆ.ಅಪಾರ ಜನಪ್ರಿಯತೆ ಹೊಂದಿದ್ದಂತಹ ನಟ ಡಾ.ರಾಜ್ ಕುಮಾರ್ ಅವರು ತಮ್ಮ 100 ಚಿತ್ರಗಳು ಪೂರೈಸಿದ ನಂತರವು ಕೂಡ ಇವರ ಸಂಭಾವನೆ ಕೇವಲ ಇಪ್ಪತ್ತೈದು ಸಾವಿರ ರೂ.ಗಳಷ್ಟು ಎಂಬುದು ನಿಜಕ್ಕೂ ಕೂಡ ಆಶ್ಚರ್ಯಕರ ಸಂಗತಿ.

ಡಾ.ರಾಜ್ ಕುಮಾರ್ ಅವರಿಗೆ ಹಣ ಮಾಡಬೇಕು ಎಂಬುದಕ್ಕಿಂತ ಹೆಚ್ಚಾಗಿ ಹೊಸ ಹೊಸ ಪಾತ್ರಗಳಲ್ಲಿ ನಟಿಸಬೇಕು.ಬಣ್ಣ ಹಚ್ಚಬೇಕು ಎಂಬ ಕನಸನ್ನು ಹೊತ್ತವರು.ತಮ್ಮ ಮೇಕಪ್ ಅನ್ನು ತಾವೇ ಮಾಡಿಕೊಳ್ಳುತ್ತಿದ್ದಂತಹ ರಾಜ್ ಕುಮಾರ್ ಅವರು ಸಿನಿಮಾಗಳ ನಡುವೆ ನಾಟಕದಲ್ಲಿಯೂ ಕೂಡ ಅಭಿನಯಿಸುತ್ತಿದ್ದರು.ಇದು ರಾಜ್ ಕುಮಾರ್ ಅವರಿಗೆ ಕಲೆಯ ಮೇಲೆ ಇದ್ದಂತಹ ಗೌರವ ಅಪಾರ ಪ್ರೀತಿ,ಶ್ರದ್ದೆಯನ್ನ ತೋರುತಿತ್ತು.ಅದಕ್ಕಾಗಿಯೇ ಇಂದಿಗೂ ಕೂಡ ಡಾ.ರಾಜ್ ಕುಮಾರ್ ಅವರು ಜನರ ಮನದಲ್ಲಿ ರಾರಾಜಿಸುತ್ತಾ ಮನದಲ್ಲಿ ಮೆರೆಯುತ್ತಿದ್ದಾರೆ.ಕನ್ನಡಕೊಬ್ಬರೇ ರಾಜ್ ಕುಮಾರ್ ಎಂಬ ವಾಕ್ಯ ಸದಾ ನಾಡಿನಲ್ಲಿ ಅಜರಾಮರವಾಗಿರುತ್ತದೆ.

Leave a Reply

%d bloggers like this: