ದೋಸೆ, ಇಡ್ಲಿ ಮಾರಿ ತಿಂಗಳಿಗೆ 2 ಸಾವಿರ ಕೋಟಿ ಸಂಪಾದಿಸುತ್ತಿರುವ ಹುಡುಗ, ಅದೆಷ್ಟೋ ಜನರಿಗೆ ಆದರ್ಶ ಈ ಹುಡುಗ

ಎಂಬಿಎ ಪದವೀಧರ ಉನ್ನತ ಉದ್ಯೋಗ ತ್ಯಜಿಸಿ ಸ್ವಂತ ಉದ್ಯಮ ಮಾಡಲು ಆರಂಭ. ಸಾವಿರಗಳ ಸಂಬಳ ಪಡೆಯುತ್ತಿದ್ದವ ಇಂದು ಸಾವಿರ ಕೋಟಿಯ ಒಡೆಯ.ಹೌದು ಸಾಮಾನ್ಯವಾಗಿ ತಮ್ಮ ಮಕ್ಕಳು ಉತ್ತಮವಾಗಿ ಓದಿಲ್ಲವಾದರೆ ಅಥವಾ ವಿಧ್ಯಾಭ್ಯಾಸದಲ್ಲಿ ಹಿಂದುಳಿದು ಅನುತ್ತೀರ್ಣರಾದರೆ ನೀನು ಹೋಟೆಲ್ ಅಲ್ಲಿ ತಟ್ಟೆ ಲೋಟ ತೊಳೆಯೋಕೇ ಲಾಯಕ್ಕು ಎಂದು ಅವರನ್ನ ವ್ಯಂಗ್ಯಮಾಡಿ ಅಣಕಿಸುವುದೇ ಹೆಚ್ಚು.ಈ ಮಾತುಗಳಿಗೆ ಸೂಕ್ಷ್ಮ ಮಕ್ಕಳು ಪ್ರಾಣವನ್ನು ಕೂಡ ಕಳೆದುಕೊಳ್ಳುತ್ತವೆ‌.ಆದರೆ ತನ್ನ ಪ್ರಾಥಾಮಿಕ ಮತ್ತು ಪ್ರೌಢಶಾಲೆಯಲ್ಲಿ ಉತ್ತಮವಾಗಿ ಓದದೇ ಎಲ್ಲರೂ ತನ್ನನ್ನ ಕಡೆಗಣಿಸಿ ಅವಮಾನಿಸಿದಾಗ ಅದನ್ನೇ ಚಾಲೇಂಜ್ ಆಗಿ ತೆಗೆದುಕೊಂಡ ಹುಡುಗನೊಬ್ಬ ಇಂಜಿನಿಯರಿಂಗ್ ಅಲ್ಲಿ ರ್ಯಾಂಕ್ ಪಡೆಯುವ ಮಟ್ಟಿಗೆ ಬೆಳೆಯುತ್ತಾನೆ.

ರ್ಯಾಂಕ್ ಪಡೆದು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದ ಉದ್ಯೋಗ ಕೂಡ ಪಡೆಯುತ್ತಾನೆ.ಆದರೆ ಅದನ್ನೆಲ್ಲ ತೊರೆದು ತಾನೇ ಸ್ವಂತ ಉದ್ಯಮ ಮಾಡಬೇಕು ಎಂಬ ಉದ್ದೇಶದಿಂದ ಪುಟ್ಟದಾಗಿ ಐಡಿ ಎಂಬ ಇಡ್ಲಿ ದೋಸೆ ಕ್ಯಾಂಟೀನ್ ಶುರು ಮಾಡಿ ಮುಂದೆ ಅದು ಬರೋಬ್ಬರಿ ಎರಡು ಸಾವಿರ ಕೋಟಿ ಒಡೆಯನಾಗುವಂತಹ ಮಟ್ಟಕ್ಕೆ ಉದ್ಯಮ ಬೆಳೆಯುತ್ತದೆ.ಈ ಯಶಸ್ವಿ ಸಾಧಕ ಯಾರೆಂದರೆ ಕೇರಳದ ಪಿ.ಸಿ ಮುಸ್ತಾಫಾ.ಮುಸ್ತಫಾ ಒಂದು ಬಡ ಕುಟುಂಬದಿಂದ ಬಂದವರು.ಮೂವರು ಮಕ್ಕಳಲ್ಲಿ ಇವರೇ ದೊಡ್ಡವರು.ಹಾಗಾಗಿ ಮನೆಯ ಜವಾಬ್ದಾರಿ ಕೂಡ ಇವರ ಮೇಲೆಯೇ ಇತ್ತು.ಇವರ ತಂದೆ ಕೂಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು.

ಮನೆಯಲ್ಲಿ ಮುಸ್ತಫಾ ಅವರಿಗೆ ಒಂದೊತ್ತಿನ ಊಟಕ್ಕೂ ಕೂಡ ಕಷ್ಟ ಆಗುತ್ತಿತ್ತು.ಹಾಗಾಗಿ ಸ್ಕೂಲಿಗೆ ಚಾಚೂ ತಪ್ಪದೇ ಹೋಗುತ್ತಿದ್ದರು ಒಂದೊತ್ತಿನ ಊಟ ಸಿಗುತ್ತದೆ ಎಂಬ ಉದ್ದೇಶದಿಂದ.ಅದೂ ಕೂಡ ಐದಾರು ಕಿ.ಲೋ.ಮೀಟರ್ ದೂರ ನಡೆದು.ಮುಸ್ತಫಾ ಅವರಿಗೆ ಆರಂಭದ ಶೈಕ್ಷಣಿಕ ದಿನಗಳಲ್ಲಿ ಅಷ್ಟಾಗಿ ಓದು ಹತ್ತಿರಲಿಲ್ಲ.ಫೇಲ್ ಕೂಡ ಆಗಿದ್ದರು. ಜೀವನ ಕಷ್ಟವಾಗಿತ್ತು. ಅವರು ಶಾಲೆಗೆ ಮುಸ್ತಫಾ ಅವರು ಮನೆಯಲ್ಲಿ ಒಂದು ಅವರಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಆರನೇ ಕ್ಲಾಸ್ ನಲ್ಲಿ ಫೇಲ್ ಆಗುತ್ತಾರೆ.ಆಗ ಅವರ ತಂದೆ ಮಾಡುತ್ತಿದ್ದ ಜಮೀನಿನ ಕೂಲಿ ಕೆಲಸಕ್ಕೆ ಇವರು ಕೂಡ ಹೋಗುತ್ತಾರೆ.

ಮುಸ್ತಫಾ ಕೂಲಿ ಕೆಲಸ ಮಾಡುವುದನ್ನ ಗಮನಿಸಿ ಅವರ ಶಿಕ್ಷಕರು ಒಬ್ಬರು ಕರೆದು ನೀನು ಒಮ್ಮೆ ಫೇಲಾದರೆ ಏನಂತೆ ಮತ್ತೊಮ್ಮೆ ಪ್ರಯತ್ನಿಸು ಎಂದು ಮಾರ್ಗದರ್ಶನ ಮಾಡಿ ಅವನಿಗೆ ಸಂಪೂರ್ಣವಾಗಿ ಆರ್ಥಿಕ ಸಹಾಯ ಮಾಡುತ್ತಾರೆ.ಬಳಿಕ ಮುಸ್ತಫಾ ಎಸ್.ಎಸ್.ಎಲ್.ಸಿ.,ಪಿಯುಸಿ,ಇಂಜಿನಿಯರಿಂಗ್ ಎಂಟ್ರಾನ್ಸ್ ಎಕ್ಸಾಮ್ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮವಾಗಿ ಅಂಕಪಡೆದು ಐನ್ ಐ ಟಿ ಯಲ್ಲಿ ಸೀಟು ಪಡೆದು ಬಿ.ಟೆಕ್ ಪದವಿಯನ್ನು ಕೂಡ ಪೂರೈಸುತ್ತಾರೆ.ಪದವಿಯ ನಂತರ ಬೆಂಗಳೂರಿಗೆ ಬಂದು ಒಂದು ಸ್ಟಾರ್ಟಪ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಾರೆ.ಸಿಟಿ ಬ್ಯಾಂಕ್ ಜೊತೆಗೆ ಹಲವಾರು ಐಟಿ ಬಿಟಿ ಸೆಕ್ಟರ್ ಗಳಲ್ಲಿ ಉದ್ಯೋಗ ಕೂಡ ಮಾಡುತ್ತಾರೆ.ಆದರೆ ಮುಸ್ತಫಾ ಅವರಿಗೆ ಇನ್ನೊಬ್ಬರ ನೆರಳಿನಲ್ಲಿ ಕೆಲಸ ಮಾಡಲು ಇಷ್ಟವಾಗದ ಕಾರಣ ಸ್ವಂತ ಉದ್ಯಮ ಮಾಡಲು ಆಲೋಚನೆ ಮಾಡುತ್ತಾರೆ.

PC Musthafa, iD Fresh Food

ಹೀಗೆ ಹಿಂದೆ ತಾವು ಕೆಲಸ ಮಾಡುವಾಗ ಸಂಬಂಧಿಕರ ಮನೆಗೆ ಭೇಟಿ ಆಗಿದ್ದಾಗ ಇಡ್ಲಿ ದೋಸೆ ವ್ಯಾಪಾರದಲ್ಲಿ ಉತ್ತಮ ಆದಾಯ ಇದೆ ಎಂದು ಅವರ ರಿಲೇಶನ್ ಒಬ್ಬರ ಹೋಟೆಲ್ ಬಗ್ಗೆ ಕೇಳಿರುತ್ತಾರೆ.ಇದನ್ನೆ ಗಮನದಲ್ಲಿಟ್ಟು ಕೊಂಡು ಆರಂಭದಲ್ಲಿ ಇಡ್ಲಿ ದೋಸೆ ಇಟ್ಟನ್ನು ಹೋಟೆಲ್ ಗಳಿಗೆ ಸರಬರಾಜು ಮಾಡಲು ಮುಂದಾಗುತ್ತಾರೆ.ಹೀಗೆ ಸಾಗುತ್ತಾ ಮುಂದೊಂದು ದಿನ ಐಡ ಎಂಬ ಹೆಸರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುತ್ತದೆ. ಬೆಂಗಳೂರು, ಚೆನ್ನೈ,ಪುಣೆ ಸೇರಿದಂತೆ ಹಲವೆಡೆ ಇವರ ಮಾರುಕಟ್ಟೆ ಬೆಳೆದಿದ್ದು ಮುಸ್ತಫಾ ಇಂದು ಬರೋಬ್ಬರಿ ಎರಡು ಸಾವಿರ ಕೋಟಿಯ ಆಸ್ತಿಯನ್ನು ಹೊಂದಿದ್ದಾರೆ.

Leave a Reply

%d bloggers like this: