ದೊಡ್ಡ ಮೊತ್ತಕ್ಕೆ ಕಬ್ಜಾ ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿಸಿದ ಉತ್ತರ ಭಾರತದ ಸಂಸ್ಥೆ

ಕನ್ನಡದ ಮತ್ತೊಂದು ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ ಆಗಿ ಮೂಡಿ ಬರುತ್ತಿರೋ ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅದು ಕಬ್ಜ. ಆರ್. ಚಂದ್ರು ಅವರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನ ಹೊತ್ತಿರೋ ಈ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಬಾದ್-ಶಾ ಕಿಚ್ಚ ಸುದೀಪ್, ಬಹುಭಾಷಾ ಖ್ಯಾತ ನಟಿ ಶ್ರೀಯಾ ಶರಣ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಪಂಚ ಭಾಷೆಗಳಲ್ಲಿ ಮೂಡಿ ಬರುತ್ತಿರುವ ಈ ಕಬ್ಜ ಚಿತ್ರದ ಪೋಸ್ಟರ್ ಅಂಡ್ ಟೀಸರ್ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಸನ್ಶೇನಲ್ ಕ್ರಿಯೇಟ್ ಮಾಡಿದೆ. ಇದರ ಜೊತೆಗೆ ಸಂತೋಷದ ವಿಚಾರ ಅಂದರೆ ಕಬ್ಜ ಸಿನಿಮಾದ ಟ್ರೈಲರ್ ಇದುವರೆಗೆ ಬರೋಬ್ಬರಿ ಮೂರು ಕೋಟಿ ಅಷ್ಟು ವೀಕ್ಷಣೆ ಪಡೆದು ದಾಖಲೆ ಮಾಡಿದೆ.

ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ಕಬ್ಜ ಸಿನಿಮಾದ ಹಿಂದಿ ಅವತರಣಿಕೆಯ ವಿತರಣೆ ಹಕ್ಕನ್ನ ಬಾಲಿವುಡ್ ಪ್ರತಿಷ್ಟಿತ ಸಂಸ್ಥೆ ಆಗಿರೋ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಭರ್ಜರಿ ಮೊತ್ತಕ್ಕೆ ಖರೀದಿ ಮಾಡಿದೆಯಂತೆ. ಈ ಬಗ್ಗೆ ಆನಂದ್ ಪಂಡಿತ್ ಅವರು ಪ್ರೇಕ್ಷಕರನ್ನ ರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ. ಕಬ್ಜ ಸಿನಿಮಾ ಪ್ರೇಕ್ಷಕರನ್ನ ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಅದ್ಬುತ ಸಿನಿಮಾಗೆ ನಮ್ಮ ಸಂಸ್ಥೆ ಭಾಗವಾಗಿರೋದಕ್ಕೆ ಸಂತೋಷ ಆಗ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಇಂಡಿಯನ್ ಅಂಡರ್ ವರ್ಲ್ಡ್ ಸ್ಟೋರಿ ಹೊಂದಿರೋ ಕಬ್ಜ ಸಿನಿಮಾದ ಹಿಂದಿ ಅವತರಣಿ ಹಕ್ಕನ್ನ ಆನಂದ್ ಪಂಡಿತ್ ಮೋಹನ್ ಪಿಕ್ಚರ್ಸ್ ಪಡೆದಿರೋದು ಸಂತೋಷಕರವಾಗಿದ್ದು, ಅವರ ಸಹಕಾರ ಹೀಗೆ ಮುಂದುವರಿಯಲಿ ಎಂದು ತಿಳಿಸಿದ್ದಾರೆ.

ಇನ್ನು ಸುದೀಪ್ ಅವರು ಸಹ ಇದಕ್ಕೆ ಪ್ರತಿಕ್ರಿಯಿಸಿ ಕಬ್ಜ ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ತಕ್ಕ ಹಾಗೇ ಇಂದು ಆನಂದ್ ಪಂಡಿತ್ ಮೋಶನ್ ಪಿಕ್ಚರ್ಸ್ ಅವರು ಹಿಂದಿ ವರ್ಶನ್ ರೈಟ್ಸ್ ಪಡೆದಿರೋದು ಸಂತಸವಾಗಿದೆ ಎಂದು ಹೇಳಿದ್ದಾರೆ. ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಅವರು ಕೂಡ ತಮ್ಮ ಕಬ್ಜ ಸಿನಿಮಾವನ್ನ ಆನಂದ್ ಪಂಡಿತ್ ಮೋಶನ್ ಪಿಕ್ಚರ್ಸ್ ಅವರು ಹಿಂದಿ ವರ್ಶನ್ ರೈಟ್ಸ್ ಪಡೆದಿರೋದು ನಮಗೆ ಹೆಮ್ಮೆಯ ವಿಷಯ. ಕಬ್ಜ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಆದಷ್ಟು ಬೇಗ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕಬ್ಜ ಸಿನಿಮಾಗೆ ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಕೆಲಸ ಮಾಡಿರೋದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

Leave a Reply

%d bloggers like this: