ಡಿಕೆಶಿ ಮಗಳಿಗಾಗಿ ಕಟ್ಟಿಸಿರುವ ಮಾಲ್ ಹೇಗಿದೆ ನೋಡಿ! ಖರ್ಚಾಗಿದ್ದ ಹಣ ಎಷ್ಟು ಗೊತ್ತಾ

ಒಂದೆಡೆ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಜನರು ವ್ಯಥೆ ಪಡುತ್ತಿದ್ದರೆ ಮತ್ತೊಂದು ಕಡೆ ಕೆಲವು ಐಷಾರಾಮಿ ಸೌಲಭ್ಯಗಳ್ಳುಳ್ಳ ದುಬಾರಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಅದರಲ್ಲಿ ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲುಲು ಹೈಪರ್ ಮಾರ್ಕೆಟ್ ಕೂಡ ಒಂದು. ಈ ಶಾಪಿಂಗ್ ಮಾಲ್ ಅನ್ನು ನಿರ್ಮಾಣ ಮಾಡಲು ಬಹುಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಐಷಾರಾಮಿ ಕಟ್ಟಡಗಳು ಇವೆ. ಅವುಗಳ ಜೊತೆಗೆ ಮತ್ತೊಂದು ಸೇರ್ಪಡೆ ಹೈಪರ್ ಮಾರ್ಕೆಟ್.ಅತ್ಯಂತ ಐಷಾರಾಮಿ ಶಾಪಿಂಗ್ಮಾ ಲ್ ಗಳಲ್ಲಿ ಇದೂ ಒಂದಾಗಿದೆ. ಇತ್ತೀಚೆಗೆ ಹೈಪರ್ ಮಾರುಕಟ್ಟೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ರಾಜ್ಯ ಕಾಂಗ್ರೆಸ್ ನಾಯಕ ಡಿ. ಕೆ. ಶಿ ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ ಎಂದು ನೋಡಿ.

ಹೈಪರ್ ಮಾರುಕಟ್ಟೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹಿರಿಯ ರಾಜಕಾರಣಿ ಡಿ. ಕೆ. ಶಿ ತಮ್ಮ ಪತ್ನಿ ಸಮೇತ ಪೂಜೆ ಹೋಮ ಹವನಗಳಲ್ಲಿ ಭಾಗವಹಿಸಿದ್ದರು. ಪೂಜೆಯನ್ನು ಶಾಸ್ತ್ರೋಕ್ತವಾಗಿ ಹಾಗೂ ಸಂಪ್ರದಾಯಗಳ ಪ್ರಕಾರವೇ ಮಾಡಲಾಯಿತು.ಈ ಶುಭ ಸಮಯದಲ್ಲಿ ಡಿ. ಕೆ. ಶಿ ಅವರ ಇಡೀ ಕುಟುಂಬವೇ ಪಾಲ್ಗೊಂಡಿತ್ತು. ಇತ್ತೀಚೆಗೆ ಮದುವೆಯಾದ ಡಿ. ಕೆ. ಶಿವಕುಮಾರ್ ಅವರ ಮಗಳು ಐಶ್ವರ್ಯ ಮತ್ತು ಅವರ ಪತಿ ಅಮರ್ಥ್ಯ ಹೆಗ್ಡೆ ಸಹ ಹೈಪರ್ ಮಾರ್ಕೆಟ್ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಿ.ಕೆ. ಶಿವಕುಮಾರ್ ಅವರು ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ
ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ ಎಂದು ನೀವು ನೋಡಿ.
ಡಿ. ಕೆ. ಶಿವಕುಮಾರ್ ಅವರ ಕುಟುಂಬ ಹಾಗೂ ಕುಟುಂಬದ ಕೆಲವೇ ಆಪ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಹೈಪರ್ ಮಾರ್ಕೆಟ್ ಗೃಹಪ್ರವೇಶದ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವೈರಲ್ ಆಗಿದೆ.ಡಿ. ಕೆ. ಶಿವಕುಮಾರ್ ಅವರ ಮನೆಯಲ್ಲಿ ಮಗಳ ಮದುವೆ ಸಮಾರಂಭ ಬಹಳ ಅದ್ಧೂರಿಯಾಗಿ ಜರುಗಿತ್ತು. ರಾಜ್ಯದ ದೊಡ್ಡ ಉದ್ಯಮಿ ಎನಿಸಿಕೊಂಡಿದ್ದ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯ ಹೆಗ್ಡೆ ಡಿಕೆಶಿ ಅವರ ಮಗಳು ಐಶ್ವರ್ಯಾ ಅವರ ವಿವಾಹ
ಸಮಾರಂಭ ಜರುಗಿತ್ತು. ಸಿದ್ಧಾರ್ಥ ಅವರು ಕೂಡ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ. ಅಲ್ಲದೇ, ಇವರು ಕೆಫೆ ಕಾಫಿ ಡೇಯ ಸಂಸ್ಥಾಪಕರು ಆಗಿದ್ದಾರೆ. ಇವರ ವಿವಾಹ ಇದೇ ವರ್ಷ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ನೆರವೇರಿತ್ತು.

2021ರ ಫೆಬ್ರವರಿ 14ರಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಾಟನ್ ಗ್ರಾಂಡ್ ಖಾಸಗಿ ಹೋಟೆಲ್ ನಲ್ಲಿ ಐಶ್ವರ್ಯ ಮತ್ತು ಅಮರ್ಥ್ಯ ಮದುವೆ ನಡೆಯಿತು. ಡಿಕೆಶಿ ಮತ್ತು ಎಸ್. ಎಂ. ಕೃಷ್ಣ ಅವರ ಕುಟುಂಬದ ಸದಸ್ಯರು, ರಾಜಕೀಯ ರಂಗದ ಗಣ್ಯವ್ಯಕ್ತಿಗಳು. ಹಾಗಾಗಿ ಅವರು ಕೆಲವು ಆಪ್ತರಿಗೆ ಮಾತ್ರವೇ ಮದುವೆ ಸಮಾರಂಭಕ್ಕೆ ಆಮಂತ್ರಣ ನೀಡಿದ್ದರು. ಆಮಂತ್ರಣ ನೀಡಿದ ಪ್ರತಿಯೊಬ್ಬರು ಮದುವೆಗೆ ಹಾಜರಾಗಿ ದಂಪತಿಗಳಿಗೆ ಶುಭ ಹಾರೈಸಿದ್ದರು.ಮದುವೆ ನಂತರ ಫೆಬ್ರವರಿ 17ರಂದು ನಡೆದ ರಿಸೆಪ್ಶನ್ಸ ಮಾರಂಭಕ್ಕೆ ರಾಜಕೀಯ ಮತ್ತು ಸಿನಿಮಾರಂಗದ ಹಲವಾರು ಗಣ್ಯವ್ಯಕ್ತಿಗಳು ಬಂದು ವಧು ವರರಿಗೆ ಆಶೀರ್ವಾದ ಮಾಡಿದ್ದರು.
ಮೂಲಗಳ ಪ್ರಕಾರ ಹೈಪರ್ ಮಾರುಕಟ್ಟೆ ಬೆಂಗಳೂರಿನ ಅತ್ಯಂತ ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಿ ಒಂದಾಗುತ್ತದೆ. ಈಗಾಗಲೇ ಸಾಕಷ್ಟು ಅಂಗಡಿಗಳು ಈ ಸೂಪರ್ ಮಾರ್ಕೆಟ್ ಮಾಲ್ ಗೆ ಬಂದಿದ್ದು, ಜೂಲೈ ತಿಂಗಳಿಂದ ಈ ಸೂಪರ್ ಮಾರ್ಕೆಟ್ ತೆರೆಯುವುದಾಗಿ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ದೊಡ್ಡ ಸೂಪರ್ ಮಾರ್ಕೆಟ್ ನ ಹೆಸರು ಲುಲು ಸೂಪರ್ ಮಾರ್ಕೆಟ್. ಸೂಪರ್ ಮಾರ್ಕೆಟ್ ಗೆ ಖರ್ಚಾಗಿದ್ದು ಸುಮಾರು ಕೋಟಿಗಳು ಖರ್ಚಾಗಿದ್ದಾವೆ.