ಡಿವೋರ್ಸ್ ಪಡೆದ ಮಹಿಳೆಯನ್ನು ಮದುವೆಯಾದರೆ ನಿಮಗೆ ನೀವು ನಿಜಕ್ಕೂ ಅದೃಷ್ಟವಂತರಂತೆ ಏಕೆ ಗೊತ್ತಾ..!

ಡಿವೋರ್ಸ್ ಪಡೆದ ಮಹಿಳೆಯನ್ನು ಮದುವೆಯಾದರೆ ನಿಮಗೆ ನೀವು ನಿಜಕ್ಕೂ ಕೂಡ ಅದೃಷ್ಟವಂತರಂತೆ ಏಕೆ ಗೊತ್ತಾ..! ಪ್ರತಿಯೊಬ್ಬರಿಗೂ ಕೂಡ ತಮ್ಮ ಮದುವೆಯ ಬಗ್ಗೆ ಬಹುದೊಡ್ಡ ಕನಸು ಇರುತ್ತದೆ. ಕೆಲವರು ಸರಳ ಆದರ್ಶ ಸಿದ್ದಾಂತ ಇಟ್ಟುಕೊಂಡು ರಿಜಿಸ್ಟರ್ ಆಫೀಸ್ ಅಥವಾ ದೇವಾಲಯದಲ್ಲಿ ಅತ್ಯಂತ ಸರಳವಾಗಿ ಮದುವೆ ಆಗಿ ಒಂದಷ್ಪು ಮಂದಿಗೆ ಆದರ್ಶರಾಗುತ್ತಾರೆ. ಆದರೆ ಕೆಲವರು ತಮ್ಮ ಮದುವೆಯ ಬಗ್ಗೆ ಅಪಾರ ಕನಸೊತ್ತು ಬಹಳ ಅದ್ದೂರಿಯಾಗಿ ಮದುವೆ ಆಗುತ್ತಾರೆ. ಆದರೆ ಈ ಕನಸಿನ ಅದರಂತೆ ಒಂದಷ್ಟು ದಿನಗಳ ಕಾಲ ಚೆನ್ನಾಗಿಯೇ ಸಂಸಾರ ನಡೆಸುತ್ತಾರೆ. ದಿನ ಕಳೆದಂತೆ ಯುವ ಜೋಡಿಗಳು ದಾಂಪತ್ಯ ಜೀವನದಲ್ಲಿ ಎದುರಾಗುವಂತಹ ಸಣ್ಣ ಪುಟ್ಟ ಮನಸ್ತಾಪಗಳನ್ನ ಸಮಾಧಾನವಾಗಿ ಶಮನವಾಗಿಸಿಕೊಳ್ಳಲಾಗದೆ ತಮ್ಮ ಸ್ವಾಭಿಮಾನದ ದೃಷ್ಟಿಯಿಂದಾಗಿ ಹೊಂದಾಣಿಕೆ ಮಾಡಿಕೊಳ್ಳದೇ ಆತುರ ಆತುರವಾಗಿ ವಿಚ್ಚೇದನ ಮಟ್ಟಕ್ಕೆ ಹೋಗುತ್ತಾರೆ. ಇತ್ತೀಚೆಗಂತೂ ವಿಚ್ಚೇದನದ ಪ್ರಕರಣಗಳು ಹೆಚ್ಚಾಗೇ ನಡೆಯುತ್ತವೆ.

ವಿಚ್ಚೇದನ ಪಡೆಯುವ ಮೊದಲು ವಿಚ್ಚೇದನಕ್ಕೆ ಅರ್ಜಿ ಹಾಕಿರುವ ದಂಪತಿಗಳಿಗೆ ಆಪ್ತ ಸಮಾಲೋಚನೆ ಕೂಡ ಮಾಡಿಸುತ್ತಾರೆ. ಆದರೂ ಕೂಡ ಸಂಧಾನಕ್ಕೆ ಒಪ್ಪದೇ ವಿಚ್ಚೇದನ ಪಡೆಯುತ್ತಾರೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಇಂದಿನ ಹೆಣ್ಣು ಮಕ್ಕಳು ಕೂಡ ಶಿಕ್ಷಣ ಪಡೆದು ಸ್ವತಂತ್ರವಾಗಿ ಉದ್ಯೋಗ ಗಳಿಸಿ ದುಡಿಯುತ್ತಿದ್ದಾರೆ. ಹೀಗಾಗಿ ಗಂಡ ಇಲ್ಲದಿದ್ದರು ಕೂಡ ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಆತ್ಮ ವಿಶ್ವಾಸದಿಂದ ಇರುತ್ತಾರೆ. ಆದರೆ ಬಹುತೇಕ ಮಂದಿ ಹೆಣ್ಣು ಮಕ್ಕಳು ವಿಚ್ಚೇದನ ಪಡೆದು ಮತ್ತೊಂದು ಮದುವೆ ಆಗಿ ಹೊಸ ಬಾಳಿಗೆ ಎಂಟ್ರಿ ಕೊಟ್ಟಾಗ ತನ್ನ ಹೊಸ ಬಾಳ ಸಂಗಾತಿಯನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳಲು ಇಷ್ಟ ಪಡುತ್ತಾರೆ. ತನ್ನ ಸಂಗಾತಿಯ ದಂಪತಿಗಳನ್ನು ಕೂಡ ಹೇಗೆ ಗೌರವದಿಂದ ಉಪಚರಿಸಬೇಕು ಎಂಬುದನ್ನ ಅರಿತಿರುತ್ತಾರೆ.

ಈಗಾಗಲೇ ವಿವಾಹವಾಗಿ ತಾವು ಮಾಡಿದಂತಹ ತಪ್ಪನ್ನ ಮರುಕಳಿಸಿ ಮಾಡಬಾರದು ಎಂದು ತನ್ನ ಎರಡನೇಯ ಪತಿಯನ್ನ ತುಂಬಾ ಪ್ರೀತಿಸುತ್ತಾರೆ. ತನ್ನ ಬದುಕಿಗೆ ಮತ್ತೆ ಬೆಳಕು ನೀಡಿರುವ ಪತಿಯನ್ನ ಅವರ ಪೋಷಕರನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮೇಲಾಗಿ ಇಡೀ ಸಂಸಾರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ತನ್ನ ನೆಚ್ಚಿನ ಗಂಡನಿಗೆ ಸದಾ ಸುಖವನ್ನೇ ಬಯಸುತ್ತಾಳೆ. ಇದರಿಂದಾಗಿ ಆ ಪತಿಯು ಕೂಡ ತಾನು ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದವರನ್ನ ಮದುವೆಯಾದೆ ಎಂಬ ಭಾವನೆ ಇಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಇಂದು ವಿಚ್ಚೇದನ ಪಡೆದು ಮರು ಮದುವೆಯಾಗಿರುವ ಅನೇಕ ಜನರು ತಮ್ಮ ಎರಡನೇ ಸಾಂಸಾರಿಕ ಜೀವನದಲ್ಲಿ ಆದಷ್ಟು ಸಂತೋಷವಾಗಿರುತ್ತಾರೆ.

Leave a Reply

%d bloggers like this: