ಡಿವೋರ್ಸ್ ಬಳಿಕ ಧನುಷ್ ಮದುವೆಯಾಗುತ್ತಿರುವ ಹುಡುಗಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಕಾಲಿವುಡ್ ಸೂಪರ್ ಸ್ಟಾರ್ ಈ ನಟ ವಿಚ್ಚೇದನ ನೀಡಿ ಕೆಲವೇ ತಿಂಗಳಲ್ಲಿ ಬೇರೋಬ್ಬ ಯುವತಿ ಜೊತೆ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಸೆಲೆಬ್ರಿಟಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ವಿಚ್ಚೇದನದ ದಾರಿ ಹಿಡಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಅಂತಹ ಘಟನೆಗೆ ಇದೀಗ ತಮಿಳು ಚಿತ್ರರಂಗದ ಸುಪ್ರಸಿದ್ದ ನಟ,ಗಾಯಕ,ನಿರ್ದೇಶಕ, ನಿರ್ಮಾಪಕ ಧನುಷ್ ಕೂಡ ಸೇರ್ಪಡೆಯಾಗಿದ್ದಾರೆ.ಹೌದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರನ್ನು ಮದುವೆ ಆಗಿದ್ದ ನಟ ಧನುಷ್ ಆವರು ಇದೀಗ ತಮ್ಮ ಹದಿನೆಂಟು ವರ್ಷಗಳ ಸುಧೀರ್ಘ ದಾಂಪತ್ಯ ಜೀವನಕ್ಕೆ ಇದೀಗ ಫುಲ್ ಸ್ಟಾಪ್ ಹಾಕಿದ್ದಾರೆ. ಇದು ನಟ ಧನುಷ್ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ. ಜೊತೆಗೆ ಅವರ ಮಾವ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೂ ಕೂಡ ಬಿಗ್ ಶಾಕ್ ಅಂತಾನೇ ಹೇಳಬಹುದು. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದರು.

ತದ ನಂತರ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದ ನಟ ರಜಿನಿಕಾಂತ್ ಅವರಿಗೆ ಇದೀಗ ತಮ್ಮ ಮಗಳ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನಿಂದಾಗಿ ಮತ್ತಷ್ಟು ನೋವು ಅನುಭವಿಸುತ್ತಿದ್ದಾರೆ. ನಟ ಧನುಷ್ ಮತ್ತು ಐಶ್ವರ್ಯ ಇಬ್ಬರು ಕೂಡ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದವರು. ಆವರಿಬ್ಬರ ಸುಂದರ ಸಾಂಸಾರಿಕ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು ಇವರಿಗೆ ಇದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಕಿರಿಯ ಪುತ್ರ ಅಗಿರುವ ನಟ ಧನುಷ್ ತಮ್ಮ ತಂದೆ ಮತ್ತು ಅಣ್ಣನಂತೆಯೇ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದು ದಕ್ಷಿಣ ಭಾರತದ ಬೇಡಿಕೆಯ ನಟರಾಗಿ ಮಿಂಚುತ್ತಿದ್ದಾರೆ. ಇದೀಗ ಈ ಸ್ಟಾರ್ ನಟ ತನ್ನ ವೈಯಕ್ತಿಕ ಬದುಕಿನಲ್ಲಿ ಕೆಲವು ಕಾರಣಾಂತರಗಳಿಂದ ತನ್ನ ಪತ್ನಿ ಐಶ್ವರ್ಯ ಅವರಿಗೆ ವಿಚ್ಚೇದನ ನೀಡುವ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ.

ಇದು ಒಂದು ಕಡೆ ಸುದ್ದಿಯಾದರೆ ಮತ್ತೊಂದು ಕಡೆ ನಟ ಧನುಷ್ ಇದರ ಬೆನ್ನಲ್ಲೇ ಮತ್ತೊಂದು ಹುಡುಗಿಯ ಜೊತೆ ಸುತ್ತಾಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹೌದು ನಟ ಧನುಷ್ ಅವರು ಹೈದರಾಬಾದ್ ನಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಊಟದ ಸಮಯದಲ್ಲಿ ಒಂದು ಹುಡುಗಿಯ ಜೊತೆ ಹೋಟೆಲ್ ವೊಂದಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಅನ್ಯೂನ್ಯವಾಗಿ ಊಟ ಮಾಡುತ್ತಿರುವ ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಬಹುಶಃ ನಟ ಧನುಷ್ ಅವರು ಈ ಹುಡುಗಿಯನ್ನ ಎರಡನೇ ಮದುವೆ ಆಗಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ನಟ ಧನುಷ್ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

Leave a Reply

%d bloggers like this: