ದಿಟ್ಟ ಪತ್ರಕರ್ತ ಅಜಿತ್ ಅನುಮಕ್ಕವರ್ ಹೆಂಡತಿ ಇವರೇ ನೋಡಿ, ಎಷ್ಟು ಸುಂದರವಾಗಿದ್ದಾಳೆ, ಮೊದಲ ಬಾರಿ ನೋಡಿ

ಅವಳಿ ಜವಳಿ ಮಕ್ಕಳಿಗೆ ತಂದೆಯಾದ ಕನ್ನಡ ಜನಪ್ರಿಯ ಸುದ್ದಿ ವಾಹಿನಿಯ ನಿರೂಪಕ. ಕನ್ನಡ ಸುದ್ದಿ ವಾಹಿನಿಗಳಲ್ಲಿ ಅನೇಕ ನಿರೂಪಕರು ತಮ್ಮದೇಯಾದ ವಿಶಿಷ್ಟ ಶೈಲಿಯಲ್ಲಿ ಸುದ್ದಿಗಳನ್ನು ನಿರೂಪಣೆ ಮಾಡುವ ಮೂಲಕ ನಾಡಿನಾದ್ಯಂತ ತಮ್ಮದೇಯಾದಂತಹ ಒಂದು ಛಾಯೆಯನ್ನು ಬಿಂಬಿಸಿಕೊಂಡಿದ್ದಾರೆ.ಕೆಲವು ಸುದ್ದಿ ನಿರೂಪಕರು ತಮ್ಮ ದಿಟ್ಟತನ, ಪ್ರಾಮಾಣಿಕತೆ,ನೇರ ನುಡಿ ವ್ಯಕ್ತಿತ್ವ ಅಳವಡಿಸಿಕೊಂಡು ತಮ್ಮ ಎದುರು ಯಾರೇ ಪ್ರಭಾವಿ ವ್ಯಕ್ತಿಗಳು ಸಂವಾದದಲ್ಲಿ ಕೂತಾಗ ಸಮರ್ಪಕವಾಗಿ ಅವರಿಗೆ ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ. ಅಂತಹ ಪತ್ರಕರ್ತರಲ್ಲಿ ಖ್ಯಾತ ಸುದ್ದಿ ವಾಹಿನಿಯ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಜಿತ್ ಹನುಮಕ್ಕನವರ್ ಸಹ ಪ್ರಮುಖರಾಗಿದ್ದಾರೆ.ಇವರ ಮೇಲೆ ಅನೇಕರು ಅಜಿತ್ ಒಬ್ಬರು ಕೇವಲ ಬಿಜೆಪಿ ಪಕ್ಷ ಪ್ರಚಾರಕ ಎಂದು ಆರೋಪಿಸುವುದುಂಟು.ಆದರೆ ಅವರು ಅದನ್ನು ಹೊರತು ಪಡಿಸಿ ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳಿಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿರುವುದನ್ನ ಕೂಡ ಗಮನಿಸಬಹುದು.

ಹೀಗೆ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಅನೇಕ ವಿಚಾರಗಳಿಗೆ ವಿರೋಧ ಎದುರಿಸುವುದರ ನಡುವೆಯೇ ಉತ್ತಮ ರಾಜಕೀಯ ಕ್ಷೇತ್ರದ ನಿರೂಪಕ ಎಂಬ ಹತ್ತು ಹಲವು ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.ಇನ್ನು ಅಜಿತ್ ಹನುಮಕ್ಕನವರ್ ನಡೆದು ಬಂದ ಹಾದಿ ಮತ್ತು ಅವರ ಕೌಟುಂಬಿಕ ಜೀವನವನ್ನು ತಿಳಿಯುವುದಾದರೆ. ಹುಬ್ಬಳಿಯಲ್ಲಿ 1976 ರಲ್ಲಿ ಜನಿಸಿದ ಅಜಿತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರಾವಾಡದಲ್ಲಿ ಪೂರೈಸಿಕೊಳ್ಳುತ್ತಾರೆ.ಬಿ.ಎ ಪದವಿಯಲ್ಲಿ ಸೈಕಾಲಾಜಿ ವಿಷಯ ಅಧ್ಯಾಯನ ಮಾಡಿದ ಅಜಿತ್ ತದ ನಂತರ ಸುವರ್ಣವಾಹಿನಿಯಲ್ಲಿ ತಮ್ಮ ಜರ್ನಲಿಸಂ ವೃತ್ತಿಯನ್ನು ಆರಂಭಿಸುತ್ತಾರೆ.ಪತ್ರಕರ್ತ ಅಜಿತ್ ಹನುಮಕ್ಕನವರ್ ಲೈಮ್ ಲೈಟ್ ಬಂದಿದ್ದು ಬಿಡದಿ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಬಯಲಿಗೆಳೆಯುವ ಮೂಲಕ.

ಈ ಪ್ರಕರಣದಲ್ಲಿ ಅಜಿತ್ ಅವರು ತಮ್ಮ ದಿಟ್ಟತನವನ್ನು ಪ್ರದರ್ಶಿಸುವ ಮೂಲಕ ರಾಜ್ಯಾದ್ಯಂತ ಗಮನ ಸೆಳೆದರು. ಈ ನಿತ್ಯಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಿತ್ ಅವರು ಮಾಡಿದ ಕೆಲಸ ಮೆಚ್ಚಿ ಸುವರ್ಣ ವಾಹಿನಿ ಇವರಿಗೆ ಉನ್ನತ ಸ್ದಾನ ಮಾನ ನೀಡುತ್ತದೆ. ಇನ್ನು ಅಜಿತ್ ಅವರು ತಮ್ಮ ಸಹೋದ್ಯೋಗಿ ಸಹನಾ ಎಂಬುವರೊಟ್ಟಿಗೆ 2012 ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.ಆದರೆ ಮದುವೆಯಾದ ಹತ್ತು ವರ್ಷಗಳವರೆಗೆ ಇವರಿಗೆ ಮಕ್ಕಳಾಗಿರುವುದಿಲ್ಲ.ಇತ್ತೀಚೆಗಷ್ಟೇ ಕೆಲವು ತಿಂಗಳ ಹಿಂದೆ ಅವಳಿ-ಜವಳಿ ಮಕ್ಕಳಿಗೆ ತಂದೆಯಾಗಿದ್ದಾರೆ.ಈ ವಿಚಾರವನ್ನು ಅಜಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ಅವಳಿ ಮಕ್ಕಳಿಗೆ ತಂದೆಯಾಗಿದ್ದೇನೆ ಎಂದು ತಿಳಿಸಿದ್ದರು.