ದಿಗಂತ್ ಅವರ ಹೊಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಟಿಯ ಆಗಮನ

ಇದೇನಪ್ಪಾ ದಿಗಂತ್ ಅವರ ಎಡಗೈಗೆ ಏನಾಯಿತು ಅಂತ ನಿಮಗೆ ಗೊಂದಲ ಆಗಿರಬಹುದು. ಆದರೆ ಅಸಲಿಗೆ ದಿಗಂತ್ ಅವರಿಗೆ ಯಾವುದೇ ರೀತಿ ಅಪಘಾತವಾಗಿಲ್ಲ. ಈ ಎಡಗೈಯ್ಯೇ ಅಪಘಾತಕ್ಕೆ ಕಾರಣ ಎಂಬುದು ದಿಗಂತ್ ಅವರ ಹೊಸ ಸಿನಮಾದ ಹೆಸರು. ನಟ ದಿಗಂತ್ ಅವರು ಇತ್ತೀಚೆಗೆ ಡೈ ಹೊಡ್ಯೋಕ್ ಹೋಗಿ ಕತ್ತಿಗೆ ನೋವು ಮಾಡಿಕೊಂಡಿದ್ದರು. ಈ ಮೂಲಕ ಭಾರಿ ಸುದ್ದಿಯಾಗಿದ್ದರು. ತದ ನಂತರ ದಿಗಂತ್ ಅವರು ಯಾವುದೇ ಪ್ರಾಣಾಪಾಯ ಇಲ್ಲದೆ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ ಗಾಳಿಪಟ2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಈ ಸಿನಿಮಾದಲ್ಲಿ ದಿಗಂತ್ ಅವರ ನಟನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗ್ತಿದ್ದಾರೆ ನಟ ದಿಗಂತ್. ಗಾಳಿಪಟ2 ಚಿತ್ರದ ಮೂಲಕ ಮತ್ತೇ ಗೆಲುವಿನ ನಗೆ ಬೀರಿರುವ ದಿಗಂತ್ ಅವರು ಇದೀಗ ಎಡಗೈಯೇ ಅಪಘಾತಕ್ಕೆ ಕಾರಣ ಎಂಬ ಹೊಸ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ.

ಈ ಚಿತ್ರದ ನಾಯಕಿಯ ಪರಿಚಯ ಮಾಡಲು ಚಿತ್ರತಂಡ ಟೀಸರ್ ವೊಂದನ್ನ ಬಿಡುಗಡೆ ಮಾಡಿದೆ. ಟೀಸರ್ ನಲ್ಲಿ ಈ ಚಿತ್ರದ ಹೀರೋಯಿನ್ ಯಾರೆಂದು ರಿವೀಲ್ ಆಗಿದೆ. ಈ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ನಾಯಕಿಯಾಗಿ ಧನು ಹರ್ಷ ಎಂಬ ಯುವ ಪ್ರತಿಭೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧನು ಹರ್ಷ ಅವರದ್ದು ರಾಧಿಕಾ ಎಂಬ ಪಾತ್ರ ಎಂದು ತಿಳಿದು ಬಂದಿದೆ. ಸಮರ್ಥ್ ಬಿ ಕಡ್ಕೋಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಎಡಗೈ ಆಧಾರಿತ ಕಲ್ಪನಾಧಾರಿತ ಸಿನಿಮಾವಾಗಿದೆಯಂತೆ. ಈ ಚಿತ್ರದ ಶೂಟಿಂಗ್ ಈ ಆಗಸ್ಟ್ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆಯಂತೆ. ಈ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರಕ್ಕೆ ಗುರುದತ್ತ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಕಡ್ಕೋಳ್ ಅವರು ಜೋಡಿಯಾಗಿ ಬಂಡವಾಳ ಹೂಡಿದ್ದಾರೆ. ಇನ್ನು ಅಭಿಮನ್ಯೂ ಸದಾನಂದ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿರಲಿದ್ದು, ಬಿ.ಅಜನೀಶ್ ಲೋಕನಾಥ್ ಅವರ ರಾಗ ಸಂಯೋಜನೆ ಇರಲಿದೆ. ಒಟ್ಟಾರೆಯಾಗಿ ಇದೀಗ ಈ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಟೀಸರ್ ಕುತೂಹಲ ಮೂಡಿಸಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟು ಹಾಕಿದೆ.

Leave a Reply

%d bloggers like this: