ದಿಢೀರ್ ಅಂತ ಸಿಹಿಸುದ್ದಿ ಕೊಟ್ಟ ನಟ ಧನ್ವಿರ್ ಹಾಗೂ ಮೇಘ ಶೆಟ್ಟಿ.. ಮಹತ್ವದ ಹೆಜ್ಜೆ .. ನೋಡಿ ಒಮ್ಮೆ

ಕನ್ನಡ ಕಿರುತೆರೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿ ಇದೀಗ ನಟನೆಯ ಜೊತೆಗೆ ಧಾರಾವಾಹಿ ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದಿರುವ ಈ ಯುವ ನಟಿ ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟನೊಟ್ಟಗೆ ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ವರ್ಷಕ್ಕೆ ಹತ್ತಾರು ಹತ್ತಾರು ಧಾರಾವಾಹಿಗಳು ಬರುತ್ತವೆ. ಬಂದ ಧಾರಾವಾಹಿಗಳು ಎಲ್ಲಾವು ಕೂಡ ಯಶಸ್ಸು ಕಾಣುವುದಿಲ್ಲ. ಆದರೆ ಜೀ಼ ಕನ್ನಡದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಜೊತೆ ಜೊತೆಯಲಿ ಸೀರಿಯಲ್ ಮಾತ್ರ ಕನ್ನಡ ಕಿರುತೆರೆಯ ಲೋಕದಲ್ಲಿ ಹೊಸದೊಂದು ಸಂಚಲನ ಮೂಡಿಸಿತು ಎಂದರೆ ತಪ್ಪಾಗಲಾರದು. ಯಾಕಂದ್ರೆ ಅದೇ ಮೊದಲ ಬಾರಿಗೆ ಕನ್ನಡ ಧಾರಾವಾಹಿಯೊಂದು ಅದ್ದೂರಿ ಮೇಕಿಂಗ್ ಮೂಲಕ ಸದ್ದು ಮಾಡಿತು. ಸಾಲು ಸಾಲು ಸಿನಿಮಾಗಳಲ್ಲಿ ಸೋತು ಬಣ್ಣದ ಲೋಕಕ್ಕೆ ಗುಡ್ ಬಾಯ್ ಹೇಳಿದ್ದ ನಟ ಅನಿರುದ್ದ್ ಅವರಿಗೆ ಈ ಜೊತೆ ಜೊತೆಯಲಿ ಧಾರಾವಾಹಿ ಬಣ್ಣದ ಲೋಕದಲ್ಲಿ ಮರು ಜನ್ಮ ನೀಡಿತು ಎಂದು ಹೇಳಬಹುದು.

ಅವರೊಟ್ಟಿಗೆ ಮೇಘಾಶೆಟ್ಟಿ ಎಂಬ ಪ್ರತಿಭೆ ಕೂಡ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿತು. ಆರ್ಯವರ್ಧನ್ ಆಗಿ ನಟ ಅನಿರುದ್ದ್ ಮತ್ತು ಅನು ಸಿರಿ ಮನೆ ಪಾತ್ರದಲ್ಲಿ ಮೇಘಾಶೆಟ್ಟಿ ಇವರಿಬ್ಬರ ಜೋಡಿ ವೀಕ್ಷಕರಿಗೆ ಮೋಡಿ ಮಾಡಿತು. ಇದೀಗ ಈ ಧಾರಾವಾಹಿಯಲ್ಲಿ ಹೊಸ ಪಾತ್ರಗಳು ಎಂಟ್ರಿ ಕೊಟ್ಟು ಹತ್ತು ಹಲವು ತಿರುವುಗಳನ್ನ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿದೆ. ಜತೆಗೆ ನಟಿ ಮೇಘಾಶೆಟ್ಟಿ ಅವರು ಅಪಾರ ಜನಪ್ರಿಯತೆ ಗಳಿಸಿ ಸಿನಿಮಾ ರಂಗಕ್ಕೂ ಹೆಜ್ಜೆ ಇಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಬಜಾ಼ರ್ ಸಿನಿಮಾ ಖ್ಯಾತಿಯ ನಟ ಧನ್ವಿರ್ ಅವರೊಟ್ಟಿಗೆ ಕೈವ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಮೇಘಾ ಶೆಟ್ಟಿ ಅವರ ಅಭಿಮಾನಿಗಳು ಸಂತಸ ಪಡುವಂತಾಗಿದೆ.

ತಾನು ಐ. ಎ. ಎಸ್. ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದ ಮೇಘಾಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅವಕಾಶ ಸಿಕ್ಕ ನಂತರ ತನ್ನ ದಿಕ್ಕನ್ನು ಬಣ್ಣದ ಲೋಕಕ್ಕೆ ತಿರುಗಿಸಿ ಆಗೀಗ ನಟಿಯಾಗಿ ಮಿಂಚುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಪಾತ್ರದ ಮೂಲಕ ನಾಡಿನಾದ್ಯಂತ ಮನೆ ಮನಗಳಲ್ಲಿ ಹೆಸರು ಮಾಡಿದ ಮೇಘಾಶೆಟ್ಟಿಗೆ ಸಿನಿಮಾದಲ್ಲಿ ಕೂಡ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಅವರೇ ತಿಳಿಸಿದಂತೆ ಕೆಂಡ ಸಂಪಿಗೆ ಎಂಬ ಧಾರಾವಾಹಿಯನ್ನ ಅವರೇ ನಿರ್ಮಾಣ ಕೂಡ ಮಾಡುತ್ತಿದ್ದಾರಂತೆ. ಈ ಕೆಂಡ ಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಒಟ್ಟಾರೆಯಾಗಿ ನಟಿ ಮೇಘಾಶೆಟ್ಟಿ ಕಿರುತೆರೆ ಮತ್ತು ಸಿನಿಮಾದಲ್ಲಿ ನಟನೆ ಮಾಡುವುದರ ಜತೆಗೆ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಇದೀಗ ಸಖತ್ ಬಿಝಿ ಆಗಿದ್ದಾರೆ.