ಡಿಬಾಸ್ ಮನೆಗೆ ಬಂತು ಮತ್ತೊಂದು ದುಬಾರಿ ಬೆಲೆಯ ಐಷಾರಾಮಿ ಕಾರು! ಬೆಲೆ ಎಷ್ಟು ಗೊತ್ತಾ?

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಇದೀಗ ಭಾರಿ ಸುದ್ದಿಯಾಗುತ್ತಿದ್ದಾರೆ. ಹಾಗಂತ ದರ್ಶನ್ ಅಭಿನಯದ ಸಿನಿಮಾ ಬಿಡುಗಡೆ ಆಗುತ್ತಿಲ್ಲ ಅಥವಾ ಕ್ರಾಂತಿ ಚಿತ್ರದ ನಂತರ ಹೊಸ ಸಿನಿಮಾ ಕೂಡ ಸಟ್ಟೇರುತ್ತಿಲ್ಲ. ಹಾಗಾದರೆ ದರ್ಶನ್ ಅವರು ಇದೀಗ ಸುದ್ದಿಯಾಗುತ್ತಿರುವುದಕ್ಕೆ ಕಾರಣ ಏನು ಅಂತ ತಿಳಿಯಬೇಕಾದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ. ಹೌದು ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟ, ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟ ಅಂದರೆ ಅದು ಚಾರೇಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರ ಸಿನಿಮಾಗಳು ಅಂದರೆ ಅದು ಅವರ ಅಭಿಮಾನಿಗಳಿಗೆ ಅಂದು ಹಬ್ಬವೇ ಸರಿ. ತಮ್ಮ ಅಚ್ಚು ಮೆಚ್ಚಿನ ನಟನ ಸಿನಿಮಾ ನಾಳೆ ರಿಲೀಸ್ ಆಗುತ್ತದೆ ಅಂದರೆ ಹಿಂದಿನ ದಿನವೇ ಥಿಯೇಟರ್ ತುಂಬೆಲ್ಲಾ ದಾಸನ ಕಟೌಟ್ ಗಳು ರಾರಾಜಿಸುತ್ತಿರುತ್ತವೆ.

ದರ್ಶನ್ ಅವರನ್ನ ಕಂಡರೆ ಅವರ ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಾರೋ ಅದಕ್ಕಿಂತ ನೂರು ಪಟ್ಟು ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಇಷ್ಟ ಪಡುತ್ತಾರೆ. ಅವರನ್ನು ತಮ್ಮ ವಿಐಪಿಗಳು ಎಂದೇ ಕರೆಯುತ್ತಾರೆ.ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆ ಇರುವ ಎಲ್ಲರನ್ನ ಕೂಡ ಬೆಳೆಸುವ ಕೆಲಸ ಮಾಡುತ್ತಾರೆ ದರ್ಶನ್. ಇನ್ನು ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳು ಅಂದರೆ ಪಂಚ ಪ್ರಾಣ. ಅದಕ್ಕಾಗಿಯೇ ಅವರ ತೋಟದಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಣೆ ಮಾಡುತ್ತಿದ್ದಾರೆ.ದೇಶ ವಿದೇಶಗಳ ವಿಭಿನ್ನ ಜಾತಿಯ ಪ್ರಾಣಿ ಪಕ್ಷಿಗಳನ್ನ ಸಾಕುತ್ತಿದ್ದಾರೆ. ಅಂತೆಯೇ ಅವರಿಗೆ ಇಂಪೋರ್ಟ್ ಕಾರ್ ಕ್ರೇಜ಼್ ಕೂಡ ಸಖತ್ತಾಗೇ ಇದೆ. ದರ್ಶನ್ ಅವರ ಬಳಿ ಈಗಾಗಲೇ ಲ್ಯಾಂಬೋರ್ಗಿನಿ ಉರುಸ್, ಆಡಿ ಕ್ಯೂ 7, ಜಾಗ್ವಾರ್ ,ರೇಂಜ್ ರೋವರ್ ಸೇರಿದಂತೆ ಸಾಕಷ್ಟು ಇಂಪೋರ್ಟ್ ಕಾರ್, ಬೈಕ್ ಗಳಿವೆ. ಅವುಗಳ ಜೊತೆಗೆ ಇದೀಗ ಹೊಸದೊಂದು ಐಷಾರಾಮಿ ಕಾರ್ ಸೇರ್ಪಡೆಗೊಂಡಿದೆ.

ಹೌದು ದರ್ಶನ್ ಅವರು ಇತ್ತೀಚೆಗೆ ಬರೋಬ್ಬರಿ ಒಂದು ಕೋಟಿ ಇಪ್ಪತ್ತು ಲಕ್ಷ ಮೌಲ್ಯದ ಬಿಳಿ ಬಣ್ಣದ ಟಯೋಟ ವೆಲ್ ಫೈರ್ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ.ಇನ್ನು ಈ ಟಯೋಟ ವೆಲ್ ಫೈರ್ ಹೈ ಬ್ರೀಡ್ ಕಾರಿನ ಫೀಚರ್ ಗಳನ್ನು ನೋಡುವುದಾದರೆ ಇದರಲ್ಲಿ ಏಳು ಏರ್ ಬ್ಯಾಗ್ ವ್ಯವಸ್ಥೆ ಇದ್ದು, 16.35 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದು, ನಾಲ್ಕು ಸಿಲಿಂಡರ್ ಗಳನ್ನು ಹೊಂದಿದ್ದು, 32 ಬಿ ಎಚ್ ಪಿ 4700 ಆರ್ ಪಿ ಎಮ್ ವ್ಯವಸ್ಥೆಯನ್ನು ಹೊಂದಿದೆ. 58 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಸದ್ಯಕ್ಕೆ ದರ್ಶನ್ ಈ ದುಬಾರಿ ಬೆಲೆರ ಕಾರ್ ಕೊಳ್ಳುವ ಭಾರಿ ಸುದ್ದಿಯಾಗಿದ್ದಾರೆ. ದರ್ಶನ್ ಅವರ ಈ ನೂತನ ಕಾರ್ ಫೋಟೋ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

%d bloggers like this: