ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಜೊತೆ ನಟಿಸುತ್ತಿದ್ದಾರೆ ಮೇಘನಾ ರಾಜ್! ಸಿನೆಮಾ ಯಾವುದು ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್ ನಟಿಯಾದ ಮೇಘನಾರಾಜ್ ಈಗಾಗಲೇ ಮತ್ತೆ ಬಣ್ಣದ ಲೋಕಕ್ಕೆ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಲಿದ್ದಾರೆ ಎಂಬುದು ತಿಳಿದಿದೆ. ಈ ನಡುವೆ ನಟಿ ಮೇಘನಾರಾಜ್ ಕೇವಲ ತಾವೊಬ್ಬರೆ ಮಾತ್ರ ಅಲ್ಲದೆ ತಮ್ಮ ವಾರ್ಗಿತ್ತಿಯನ್ನು ಕೂಡ ಬಣ್ಣದ ಲೋಕಕ್ಕೆ ಕರೆತರುತ್ತಿದ್ದಾರೆ ಎಂಬುದು ಇದೀಗ ಗಾಂಧಿ ನಗರದಲ್ಲಿ ಭಾರಿ ಸುದ್ದಿ ಮಾಡಿದೆ.ಹೌದು ನಟಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.ಮದುವೆಯಾದ ನಂತರ ಚಂದನವನದ ಸುಂದರ ಆದರ್ಶ ದಂಪತಿಗಳಾಗಿ ಇದ್ದ ಈ ಜೋಡಿಗಳ ಮೇಲೆ ಕೆಟ್ಟ ದೃಷ್ಟಿ ಬಿದ್ದಂತೆ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ತುತ್ತಾದರು.ಈ ಒಂದು ದುರ್ಘಟನೆ ಗರ್ಭಿಣಿಯಾಗಿದ್ದ ನಟಿ ಮೇಘನಾ ರಾಜ್ ಅವರಿಗೆ ಆಘಾತವುಂಟು ಮಾಡಿ ಮಾನಸಿಕವಾಗಿ ಕುಗ್ಗಿಹೋದರು. ಇದಾದ ಕೆಲವು ತಿಂಗಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾರಾಜ್ ಅವರು ಚಿರು ಅವರೇ ಮತ್ತೆ ಜನಿಸಿದರು ಎಂಬ ಭಾವದಿಂದಾಗಿ ಸಹಜವಾಗಿ ಸಂತೋಷದಿಂದ ಇರಲು ಪ್ರಾರಂಭ ಮಾಡಿದ್ದಾರೆ.

ತಮ್ಮ ಮುದ್ದಾದ ಮಗುವಿನೊಂದಿಗೆ ಸಂಭ್ರಮದಂದ ಬದುಕು ಸಾಗಿಸುತ್ತಿರುವ ನಟಿ ಮೇಘನಾ ರಾಜ್ ಬಣ್ಣದ ಲೋಕಕ್ಕೆಮತ್ತೆ ಮರಳಿದ್ದಾರೆ.ಚಿರು ನಿಧನದ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಟಿ ಮೇಘನಾ ರಾಜ್ ಚಿರು ಆಪ್ತ ಗೆಳೆಯ ಪನ್ನಾಗಭರಣ ಮೊಟ್ಟ ಮೊದಲ ಬಾರಿಗೆ ತಮ್ಮ ಪಿಎನ್ ಬಿ ಸ್ಟೂಡಿಯೋ ನಿರ್ಮಾಣ ಸಂಸ್ದೆ ಮೂಲಕ ನಿರ್ಮಿಸಿ,ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ.ಇದೀಗ ಸರ್ಜಾ ಕುಟುಂಬದಿಂದ ಮತ್ತೊಬ್ಬರು ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಹೌದು ಆಕ್ಷನ್ ಪ್ರಿನ್ಸ್ ನಟ ಧೃವಸರ್ಜಾ ಅವರ ಪತ್ನಿ ಪ್ರೇರಣಾ ಕೂಡ ಬಣ್ಣ ಹಚ್ಚಲಿದ್ದಾರೆ.ಅದೂ ಕೂಡ ಮೇಘನಾರಾಜ್ ಅವರೊಟ್ಟಿಗೆ ಎಂಬುದು ವಿಶೇಷ.ಪ್ರೇರಣಾ ಧೃವಸರ್ಜಾ ಅವರು ನಟನೆಯ ಹಿನ್ನೆಲೆಯಿಂದ ಬಂದವರಲ್ಲ.ಧೃವಸರ್ಜಾ ಅವರನ್ನ ಮದುವೆಯಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಕೊಂಚ ಪರಿಚಿತರಾದರು.

ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಧೃವ ಅವರೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಪ್ರೇರಣಾ ತಮ್ಮ ಭಾವ ನಟ ದಿವಂಗತ ಚಿರಂಜೀವಿ ಸರ್ಜಾ ಅವರೊಟ್ಟಿಗೆ ಹಾಡೊಂದಕ್ಕೆ ಸ್ಟೆಪ್ ಹಾಕಿರುವ ವೀಡಿಯೋ ಮೂಲಕ ಗಮನ ಸೆಳೆದಿದ್ದರು. ಈ ವೀಡಿಯೊ ಚಿರು ಸಾವಿನ ಬಳಿಕ ಸಾಕಷ್ಟು ವೈರಲ್ ಆಗಿತ್ತು.ಇದೀಗ ಧೃವಸರ್ಜಾ ಅವರ ಪತ್ನಿ ಪ್ರೇರಣಾ ಜಾಹೀರಾತುವೊಂದರಲ್ಲಿ ನಟಿಸಲಿದ್ದಾರೆ ಎಂದು ಕೇಳಿ ಬಂದಿದೆ.ಈ ಜಾಹೀರಾತಿನಲ್ಲಿ ನಟಿ ಮೇಘನಾ ರಾಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಒಟ್ಟಾರೆಯಾಗಿ ನಟಿ ಮೇಘನಾರಾಜ್ ಅವರು ತಮ್ಮ ಜೊತೆಗೆ ಪ್ರೇರಣಾ ಅವರನ್ನು ಕೂಡ ಬಣ್ಣದ ಕ್ಷೇತ್ರದತ್ತ ಕರೆದುಕೊಂಡು ಬರುತ್ತಿರುವುದು ವಿಶೇಷವಾಗಿದ್ದು,ಈ ಮೂಲಕ ಸರ್ಜಾ ಫ್ಯಾಮಿಲಿಯಿಂದ ಮತ್ತೊಬ್ಬರು ನಟನಾ ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಿದ್ದಾರೆ.

Leave a Reply

%d bloggers like this: