ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಬೇಸರ, ಅಂದುಕೊಂಡ ದಿನ ಬರುತ್ತಿಲ್ಲ ಧ್ರುವ ಅವರ ಹೊಸ ಚಿತ್ರ

ಈಗಾಗಲೇ ಪೋಸ್ಟರ್ ಮೂಲಕವೇ ಸಾಕಷ್ಟು ಸೌಂಡ್ ಮಾಡುತ್ತಿರುವ ಮಾರ್ಟಿನ್ ಸಿನಿಮಾ ದೃವಸರ್ಜಾ ಅಭಿಮಾನಿಗಳಿಗೆ ಸಖತ್ ಕ್ರೇಜ಼್ ಉಂಟು ಮಾಡಿದೆ. ಫುಲ್ ರಗಡ್ ಲುಕ್ ನಲ್ಲಿ ರಿಲೀಸ್ ಆದ ಧೃವಸರ್ಜಾ ಪೋಸ್ಟರ್ ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದು ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಮಾರ್ಟಿನ್ ಸಿನಿಮಾವನ್ನು ನಿರ್ದೇಶಕ ಎಪಿ ಅರ್ಜುನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎಪಿ ಅರ್ಜುನ್ ಅವರೇ ನಟ ಧೃವಸರ್ಜಾ ಅವರನ್ನ ಚಂದನವನಕ್ಕೆ ಪರಿಚಯ ಮಾಡಿದ್ದರು. ಅದ್ಧೂರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟ ಧೃವಸರ್ಜಾ ತನ್ನ ಚೊಚ್ಚಲ ಚಿತ್ರದಲ್ಲೇ ಅದ್ಭುತವಾಗಿ ನಟನೆ, ಡ್ಯಾನ್ಸ್, ಫೈಟ್ಸ್ ಮಾಡುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಪ್ಯೂರ್ ಲವ್ ಸ್ಟೋರಿ ಹೊಂದಿದ್ದ ಅದ್ದೂರಿ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದೀಗ ಎಪಿ ಅರ್ಜುನ್ ಮತ್ತು ಧೃವಸರ್ಜಾ ಖಡಕ್ ಮಾಸ್ ಆಗಿ ಕಾಣ್ತಿರೋ ಮಾರ್ಟಿನ್ ಎಂಬ ಚಿತ್ರದ ಮೂಲಕ ಒಂದಾಗಿದ್ದು, ಈ ಇಬ್ಬರ ಯಶಸ್ವಿ ಜೋಡಿಗಳು ಮತ್ತೆ ಒಟ್ಟಾಗಿರುವುದು ಸಿನಿ ಪ್ರೇಕ್ಷಕರಿಗೆ ಮಾರ್ಟಿನ್ ಯಾವ ರೀತಿ ಇರಲಿದೆ ಎಂದು ಭಾರಿ ಕುತೂಹಲ ಮೂಡಿಸಿದೆ. ಇನ್ನು ಮಾರ್ಟಿನ್ ಸಿನಿಮಾದ ಬಹುತೇಕ ಭಾಗ ಚಿತ್ರೀಕರಣವಾಗಿದ್ದು, ಸಾಹಸ ದೃಶ್ಯ ಸನ್ನಿವೇಶಗಳು ಮಾತ್ರ ಬಾಕಿ ಉಳಿದಿವೆ. ಇನ್ನು ಕೆಲವು ದಿನಗಳಲ್ಲಿ ಬಹುಶಃ ಆಗಸ್ಟ್ 5ರಿಂದ ಮತ್ತೊಂದು ಹಂತದ ಚಿತ್ರೀಕರಣ ಆರಂಭವಾಗಿ ಈ ಸಾಹಸ ಸನ್ನಿವೇಶಗಳ ಚಿತ್ರೀಕರಣ ಕೂಡ ಆರಂಭವಾಗಲಿದೆ. ಮಾರ್ಟಿನ್ ಸಿನಿಮಾದಲ್ಲಿ ಸಾಹಸ ನಿರ್ದೇಶಕರಾಗಿ ರವಿವರ್ಮ ಅವರು ಕೆಲಸ ಮಾಡುತ್ತಿದ್ದು, ಅವರ ಜೊತೆಗೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ ಗಳಾದ ರಾಮ ಲಕ್ಷಣ ಅವರು ಕೂಡ ಧೃವಸರ್ಜಾ ಅವರಿಗೆ ಫೈಟ್ ಕಂಪೋಸ್ ಮಾಡಲಿದ್ದಾರೆ.

ಇನ್ನು ಮಾರ್ಟಿನ್ ಚಿತ್ರ ಇದೇ ಸೆಪ್ಟೆಂಬರ್ 30ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಚಿತ್ರೀಕರಣ ಇನ್ನೂ ಬಾಕಿ ಉಳಿದಿರುವುದರಿಂದ ಸೆಪ್ಟೆಂಬರ್ ನಲ್ಲಿ ಮಾರ್ಟಿನ್ ಸಿನಿಮಾ ರಿಲೀಸ್ ಆಗುವುದು ಡೌಟ್ ಎನ್ನಲಾಗುತ್ತಿದೆ. ಇನ್ನು ಮಾರ್ಟಿನ್ ಸಿನಿಮಾದಲ್ಲಿ ಧೃವಸರ್ಜಾ ಅವರಿಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸುತ್ತಿದ್ದು, ಇನ್ನಿತರ ಮುಖ್ಯ ಭೂಮಿಕೆಯಲ್ಲಿ ಸಾಧುಕೋಕಿಲ, ಅಚ್ಯುತ್ ಕುಮಾರ್, ಹಿಂದಿಯ ನಿಕಿತ್, ಅನ್ವೇಶಿ ಜೈನ್ ಕಾಣಿಸಿಕೊಂಡಿದ್ದಾರೆ. ಮಾರ್ಟಿನ್ ಸಿನಿಮಾಗೆ ಉದಯ್ ಕೆ.ಮೆಹ್ತಾ ಅವರ ಬಂಡವಾಳ ಹೂಡಿದ್ದು, ಸತ್ಯ ಹೆಗಡೆ ಕ್ಯಾಮೆರಾ ಕೆಲ್ಸ ಮಾಡಿದ್ದಾರೆ. ಮಣಿಶರ್ಮ ಅವರು ಮಾರ್ಟಿನ್ ಸಿನಿಮಾಗೆ ರಾಗ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆಯಾಗಿ ಧೃವಸರ್ಜಾ ಮಾರ್ಟಿನ್ ಚಿತ್ರದಲ್ಲಿ ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ದಸರಾ ಹಬ್ಬಕ್ಕೆ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

%d bloggers like this: