ಧೋನಿ, ಕೊಹ್ಲಿ ಅಲ್ಲ, ಈಗ ಭಾರತದ ನಂಬರ್ 1 ಶ್ರೀಮಂತ ಕ್ರಿಕೆಟಿಗ ಇವರೇ ನೋಡಿ

ಜಗತ್ತಿನಲ್ಲಿರುವ ಹಲವು ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರ ಕೂಡ ದೇಶಕ್ಕೆ ಅದರದೇ ಆದ ತನ್ನ ಅಮೂಲ್ಯವಾದ ಕೊಡುಗೆ ನೀಡುತ್ತಿದೆ.ಇನ್ನು ಕ್ರೀಡಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಕ್ರೀಡೆ ಅಂದರೆ ಅದು ಕ್ರಿಕೆಟ್.ಈ ಕ್ರಿಕೆಟ್ ಅಂದಾಕ್ಷಣ ಯುವ ಸಮೂಹ ಕಣ್ಣರಳಸಿ ನೋಡುತ್ತವೆ.ಅಷ್ಟರ ಮಟ್ಟಿಗೆ ಈ ಕ್ರಿಕೆಟ್ ಯುವಕರ ಅಚ್ಚುಮೆಚ್ಚಾಗಿದೆ. ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಮಹಿಳೆಯರು ಕೂಡ ಈ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಪುರುಷರ ಕ್ರಿಕೆಟ್ ಪಂದ್ಯಗಳಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಗಳು ಕೂಡ ನಡೆಯುತ್ತವೆ.ಇನ್ನು ಕ್ರೀಡಾ ಕ್ಷೇತ್ರದಲ್ಲಿ ಕೂಡ ಅಪಾರ ಜನಪ್ರಿಯತೆಯ ಜೊತೆಗೆ ಆದಾಯ ಕೂಡ ಅಷ್ಟೇ ದುಬಾರಿ ಆಗಿರುತ್ತದೆ.ಕ್ರೀಡಾಪಟುಗಳು ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿಯನ್ನ ರೂಪಿಸಿಕೊಂಡಿರುತ್ತಾರೆ. ಕೇವಲ ಕ್ರೀಡೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಅನೇಕ ಕಂಪನಿಗಳ ರಾಯಭಾರಿ ಆಗಿರುತ್ತಾರೆ.

ಜೊತೆಗೆ ಒಂದಷ್ಟು ಪ್ರಾಡಕ್ಟ್ ಗಳ ಪ್ರಚಾರ ಮಾಡುವ ಕೆಲಸವನ್ನು ಕೂಡ ಮಾಡುತ್ತಾರೆ. ಜಾಹೀರಾತು, ರಾಯಭಾರಿ, ಕ್ರೀಡಾ,ಇವೆಂಟ್ ಸೇರಿದಂತೆ ಇತರೆ ವಿವಿಧ ರೀತಿಯಲ್ಲಿ ಆದಾಯ ಗಳಿಸುತ್ತಾರೆ.ಇನ್ನು ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಹಣವಂತ ಆಟಗಾರರನ್ನು ತಿಳಿಯುವುದಾದರೆ ಮೊದಲ ಸ್ಥಾನದಲ್ಲಿ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇದ್ದಾರೆ.ಜಗತ್ತಿನ ಶ್ರೇಷ್ಠ ಬ್ಯಾಟ್ಸಮನ್ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ ಸಚಿನ್ ಅವರು ಬರೋಬ್ಬರಿ 1,110 ಕೋಟಿ.ರೂ.ಗಳ ಆಸ್ತಿ ಹೊಂದಿದ್ದಾರೆ.ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಬರೋಬ್ಬರಿ 1040 ಕೋಟಿ.ರೂ.ಆಸ್ತಿಯನ್ನು ಹೊಂದಿದ್ದಾರೆ.ಕೊಹ್ಲಿ ಕ್ರಿಕೆಟ್ ಜೊತೆಗೆ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.ಜೊತೆಗೆ ಒಂದಷ್ಟು ಕಂಪನಿಗಳಿಗೆ ರಾಯಭಾರಿ ಕೂಡ ಆಗಿದ್ದಾರೆ.

ಎ ಗ್ರೇಡ್ ಪ್ಲಸ್ ದರ್ಜೆ ಆಟಗಾರರಾಗಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ಕಡೆಯಿಂದ ವಾರ್ಷಿಕವಾಗಿ ಏಳು ಕೋಟಿ ವರಮಾನ ಕೂಡ ಬರುತ್ತದೆ.ಇನ್ನು ಶ್ರೀಮಂತ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿರುವುದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ. ಸರಿ ಸುಮಾರು 826 ಕೋಟಿ.ರೂ.ಗಳ ಆಸ್ತಿಯನ್ನು ಹೊಂದಿರುವ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಶ್ರೇಷ್ಠ ಕ್ಯಾಪ್ಟನ್ ಎಂದು ಹೆಸರು ಗಳಿಸಿದ್ದಾರೆ.ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ಮುನ್ನೂರು ರನ್ ಬಾರಿಸಿದ ಏಕೈಕ ಬ್ಯಾಟ್ಸಮನ್ ಎಂದು ಹೆಸರು ಗಳಿಸಿರುವ ವಿರೇಂದ್ರ ಸೆಹ್ವಾಗ್ ಅವರು 351 ಕೋಟಿ.ಆಸ್ತಿ ಮೌಲ್ಯಯನ್ನು ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದರೇ,ಐದನೇ ಶ್ರೀಮಂತ ಕ್ರಿಕೆಟ್ ಆಟಗಾರರಾಗಿ ಸಿಕ್ಸರ್ ಕಿಂಗ್ ಎಂಬ ಬಿರುದು ಪಡೆದಿರುವ ಯುವರಾಜ್ ಸಿಂಗ್ ಅವರು 261ಕೋಟಿ.ರೂ.ಗಳನ್ನು ಹೊಂದಿದ್ದಾರೆ.ಇವರು ಕ್ಯಾನ್ಸರ್ ನಿಂದ ಗೆದ್ದು ಬಂದು ಸದ್ಯಕ್ಕೆ ಆರೋಗ್ಯವಾಗಿದ್ದಾರೆ.

Leave a Reply

%d bloggers like this: