ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರ ಮಗಳು ಹೇಗಿದ್ದಾಳೆ ನೋಡಿ.. ಎಷ್ಟೊಂದು ಸುಂದರವಾಗಿದ್ದಾಳೆ ನೋಡಿ ಒಮ್ಮೆ..

90-20 ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗ ಆಳಿದಂತಹ ಸುಪ್ರಸಿದ್ದ ನಟಿ ಮೀನಾ ಇದೀಗ ಗೃಹ ಲಕ್ಷ್ಮಿಯಾಗಿ ತಮ್ಮ ಸುಂದರ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಮಿಂಚಿದಂತಹ ಅನೇಕ ಸ್ಟಾರ್ ನಟಿಯರು ವಿವಾಹವಾದ ಬಳಿಕ ಗಂಡ ಮಕ್ಕಳು ಎಂಬ ಹೊಸ ಜವಾಬ್ದಾರಿಯೊತ್ತು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅಂತೆಯೇ ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಕೂಡ ತನ್ನ ಜಮಾನದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿ ಇದೀಗ ತುಂಬು ಕುಟುಂಬದೊಂದಿಗೆ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ. ನಟಿ ಮೀನಾ ಅವರು ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದು ಬಾಲ ನಟಿಯಾಗಿ. ಹೌದು ಮೀನಾ ಅವರು ಜನಿಸಿದ್ದು ಚೆನ್ನೈನಲ್ಲಿ. 1976 ರಲ್ಲಿ ದೊರೈರಾಜ್ ಮತ್ತು ರಾಜು ಮಲ್ಲಿಕಾ ಎಂಬ ದಂಪತಿಗಳಿಗೆ ಮೀನಾ ಜನಿಸುತ್ತಾರೆ‌. ಇವರ ತಂದೆ ತಾಯಿಗಳು ಮೀನಾ ಅವರ ಬಾಲ್ಯದಲ್ಲಿಯೇ ಭರತನಾಟ್ಯ ತರಗತಿಗೆ ಸೇರಿಸುತ್ತಾರೆ‌.

ಹೀಗೆ ಬಾಲ್ಯದಲ್ಲಿ ಮುದ್ದಾಗಿದ್ದ ಮೀನಾ ಅವರನ್ನ ನಿರ್ದೇಶಕರೊಬ್ಬರು ತಮ್ಮ ಚಿತ್ರದಲ್ಲಿ ಮಗುವಿನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಸಿನಿಮಾನೇ ಶಿವಾಜಿ ಗಣೇಶನ್ ಅವರ ನೆಂಜನ್ಗಲ್. ಈ ಸಿನಿಮಾ 1982 ರಲ್ಲಿ ತೆರೆ ಕಾಣುತ್ತದೆ‌.ಈ ಚಿತ್ರದ ಬಳಿಕ ಮೀನಾ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟು ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸುತ್ತಾರೆ‌. ತದ ನಂತರ 1990 ರಲ್ಲಿ ರಾಜೇಂದ್ರ ಪ್ರಸಾದ್ ಅವರ ನವಯುಗ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ. ಈ ಚಿತ್ರದ ಯಶಸ್ಸಿನ ನಂತರ ನಟಿ ಮೀನಾ ಅವರಿಗೆ ತೆಲುಗು, ತಮಿಳು ಮಾತ್ರ ಅಲ್ಲದೆ ಕನ್ನಡದಲ್ಲಿಯೂ ಕೂಡ ಅಪಾರ ಅವಕಾಶ ಸಿಗುತ್ತವೆ‌. ಅದರಲ್ಲಿಯೂ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಟಿ ಮೀನಾ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಪುಟ್ನಂಜ, ಚೆಲುವ, ಮೊಮ್ಮಗ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಾರೆ.

ಕಿಚ್ಚ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಕನ್ನಡದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸುತ್ತಾರೆ. ಅದರಲ್ಲಿಯೂ ಸ್ಪೂರ್ತಿದಾಯಕ ಹಾಡಾದ ಅರಳುವ ಹೂವುಗಳೇ ಹಾಡಿನ ಮೂಲಕ ನಟಿ ಮೀನಾ ಕರುನಾಡಿನ ಮನೆ ಮಾತಾಗುತ್ತಾರೆ‌. ಇನ್ನು ಇವರ ವೈಯಕ್ತಿಕ ಜೀವನ ನೋಡುವುದಾದರೆ ಮೀನಾ ಅವರು 2009 ರಲ್ಲಿ ವಿದ್ಯಾಸಾಗರ್ ಎಂಬುವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ವಿದ್ಯಾಸಾಗರ್ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಈ ದಂಪತಿಗಳಿಗೆ ನೈನಿಕಾ ಎಂಬ ಹೆಣ್ಣು ಮಗಳಿದ್ದಾಳೆ. ಈಗ ನಟಿ ಮೀನಾ ಅವರ ಸಾಂಸಾರಿಕ ಬದುಕು ಆದರ್ಶಮಯವಾಗಿ ಸಾಗುತ್ತಿದೆ.

Leave a Reply

%d bloggers like this: