ದರ್ಶನ್ ರನ್ನು ಬ್ಯಾನ್ ಮಾಡಿದ ಚಾನಲ್ ಗಳಿಗೆ ಬೆಂಡೆತ್ತಲು ಹೊಸ ಚಾನಲ್ ಖರೀದಿಸಿದ ದರ್ಶನ್! ಯಾವ ಚಾನೆಲ್ ಗೊತ್ತಾ

ಕನ್ನಡ ಮಾಧ್ಯಮಗಳಿಂದ ನಟ ದರ್ಶನ್ ಬ್ಯಾನ್…!ಸ್ವತ: ಚಾನೇಲ್ ಆರಂಭಿಸಿದ ದಚ್ಚು. ಕೆಲವು ಕಾರಣಾಂತರಗಳಿಂದ ಕನ್ನಡ ಮಾಧ್ಯಮಗಳಲ್ಲಿ ದರ್ಶನ್ ಅವರಿಗೆ ಸಂಬಂಧಿಸಿದಂತಹ ಯಾವುದೇ ಕಾರ್ಯಕ್ರಮಗಳನ್ನು ಸುದ್ದಿ ಮಾಡುತ್ತಿಲ್ಲ. ಹಾಗಾಗಿ ತಮ್ಮನ್ನ ಕಡೆಗಣಿಸಿದ ಕನ್ನಡದ ಮಾಧ್ಯಮಗಳನ್ನು ಸೈಡ್ ಹೊಡೆದು ತಮ್ಮದೇ ಒಂದು ಚಾನೇಲ್ ಆರಂಭ ಮಾಡಿದ್ದಾರೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್.ನಟ ದರ್ಶನ್ ಅವರು ಕನ್ನಡ ಚಿತ್ರ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವಂತಹ ಜನಪ್ರಿಯ ನಟ.ಕೇವಲ ತಮ್ಮ ನಟನೆಯಿಂದ ಮಾತ್ರ ಅಲ್ಲದೆ ತಮ್ಮ ಸಾಮಾಜಿಕ ಸೇವೆ,ಮಾನವೀಯ ಗುಣಗಳಿಂದ ಡಿ ಬಾಸ್ ಅಂತಾನೇ ಬ್ರ್ಯಾಂಡ್ ಹುಟ್ಟುಹಾಕಿಕೊಂಡು ನಾಡಿನಾದ್ಯಂತ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ನಟ ದರ್ಶನ್.ಆಗಾಗ ಒಂದಷ್ಟು ಅರಣ್ಯ ಪ್ರವಾಸ ಹೋಗುವ ನಟ ದರ್ಶನ್ ಅಪ್ಪಟ ಪ್ರಾಣಿಪ್ರಿಯ ಕೂಡ ಹೌದು.ನಟ ದರ್ಶನ್ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿಯೂ ಕೂಡ ಆಗಿದ್ದಾರೆ.

ಇತ್ತೀಚೆಗೆ ರಾಬರ್ಟ್ ಚಿತ್ರದ ಯಶಸ್ಸಿನ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಮೂಡಿತ್ತು. ಇದೀಗ ಈ ಪ್ರಶ್ನೆಗೆ ಉತ್ತರವಾಗಿ ಕ್ರಾಂತಿ ಸಿನಿಮಾ ಸೆಟ್ಟೇರಿದೆ.ಇನ್ನು ರಾಬರ್ಟ್ ಚಿತ್ರ ಬಿಡುಗಡೆಗೂ ಮುಂಚೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ವೀರ ಮದಕರಿನಾಯಕ ಎಂಬ ಐತಿಹಾಸಿಕ ಚಿತ್ರದ ಮುಹೂರ್ತ ನಡೆದಿತ್ತು.ಇದು ಭಾರಿ ಪ್ರಚಾರ ಕೂಡ ಸುದ್ದಿಯಾಗಿ ಪಡೆದುಕೊಂಡಿತ್ತು.ಆದರೆ ಇದಾದ ಬಳಿಕ ನಟ ದರ್ಶನ್ ಅವರ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿ ಸಾಲ ಪಡೆಯಲು ಯತ್ನಿಸಿದ್ದಾರೆ ಎಂ‌ಬ ವಿಚಾರವಾಗಿ ದರ್ಶನ್ ಆಪ್ತರು ಮತ್ತು ರಾಬರ್ಟ್ ಚಿತ್ರದ ಮೂಲಕ ದರ್ಶನ್ ಆಪ್ತರಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ನಡುವೆ ಮನಸ್ತಾಪ ಮೂಡಿತ್ತು.ಇದಾದ ಬಳಿಕ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಮತ್ತೊಂದು ತಿರುವು ಪಡೆದುಕೊಂಡಿತ್ತು.

ಈ ಘಟನೆ ಮುಗಿಯುವಷ್ಟರೊಳಗೆ ಬಳಿಕ ನಟ ದರ್ಶನ್ ಅವರು ತಮ್ಮ ಗೆಳೆಯರಾದ ಸಂದೇಶ್ ನಾಗರಾಜ್ ಅವರ ಹೋಟೆಲ್ ವೊಂದರಲ್ಲಿ ಸಪ್ಲೈರ್ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ.ಈ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟ ದರ್ಶನ್ ಅವರ ನಡುವೆ ಮಾತುಕತೆ ಜೋರಾಗಿ ನಡೆಯುತ್ತದೆ. ಈ ವಿಚಾರದಲ್ಲಿ ನಟ ದರ್ಶನ್ ಅವರು ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ಜರಿದಿದ್ದಾರೆ ಎಂಬ ಆಡಿಯೋ ಒಂದು ಬಿಡುಗಡೆ ಆಗುತ್ತದೆ.ಈ ಆಡಿಯೋದಲ್ಲಿ ನಟ ದರ್ಶನ್ ಅವರೇ ಮಾಧ್ಯಮಗಳಿಗೆ ಬಗ್ಗೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಇದುವರೆಗೆ ಸ್ಪಷ್ಟನೆ ತಿಳಿದುಬಂದಿಲ್ಲ.ಇದೇ ಕಾರಣವಾಗಿ ಮಾಧ್ಯಮಗಳು ನಟ ದರ್ಶನ್ ಅವರ ಯಾವುದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿರುತ್ತವೆ.

ಇತ್ತೀಚೆಗಷ್ಟೇ ವಿ.ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿ ಬರಲಿರುವ ಕ್ರಾಂತಿ ಸಿನಿಮಾ ಸೆಟ್ಟೇರಿತು.ಇದು ದರ್ಶನ್ ಅಭಿನಯದ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮದ ಬಗ್ಗೆ ಅಷ್ಟಾಗಿ ಒಂದೆರಡು ಮಾಧ್ಯಮಗಳನ್ನು ಹೊರತುಪಡಿಸಿ ಯಾವುದೇ ಮಾಧ್ಯಮಗಳು ಪ್ರಚಾರ ಮಾಡಲಿಲ್ಲ.ಜೊತೆಗೆ ಯಜಮಾನ ಚಿತ್ರ ಸೈಮಾ ಅವಾರ್ಡ್ ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡರು ಸಹ ಅದರ ಬಗ್ಗೆ ಸುದ್ದಿ ಮಾಡಲಿಲ್ಲ.ಇನ್ನು ನಟ ದರ್ಶನ್ ಚಿತ್ರರಂಗಕ್ಕೆ ಬಂದು 24 ವರ್ಷಗಳು ಪೂರೈಸಿದ ಹಿನ್ನೆಲೆ ಯಾವುದೇ ಕಾರ್ಯಕ್ರಮ ಮಾಡಲಿಲ್ಲ.ಇದನ್ನೆಲ್ಲ ಗಮನಿಸಿದ ನಟ ದರ್ಶನ್ ತಮ್ಮ ಸಿನಿಮಾಗಳ ಪ್ರಮೋಶನ್ ಗಳನ್ನು ಸೋಷಿಯಲ್ ಮೀಡಿಯಾ ಮುಖಾಂತರ ಮಾಡಿಕೊಳ್ಳಲು ಆರಂಭಿಸುತ್ತಾರೆ.

ತನಗೆ ತಮ್ಮದೇ ಆದಂತಹ ವೇದಿಕೆ ಸೃಷ್ಟಿಸಿ ಕೊಳ್ಳಬಲ್ಲೆ ಎಂಬುದನ್ನು ಅರಿತ ನಟ ದರ್ಶನ್ ಅವರು ಡಿ ಕಂಪನಿ ಎಂಬ ಯೂಟ್ಯೂಬ್ ನಲ್ಲಿ ಒಂದಷ್ಟು ತಮ್ಮ ದಿನಚರಿ ಹೇಗಿರುತ್ತದೆ ಎಂಬುದನ್ನ ವೀಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಈಗಾಗಲೇ ಅಸ್ತಿತ್ವದಲ್ಲಿದ್ದ ಡಿ ಕಂಪನಿ ಯುಟ್ಯೂಬ್ ಚಾನೆಲ್ ಇದೀಗ ಬರೋಬ್ಬರಿ ಐವತ್ತು ಸಾವಿರಕ್ಕೂ ಹೆಚ್ಚು ಸಬ್ಸ್ಕ್ರೈಬ್ ಪಡೆದುಕೊಂಡಿದೆ.ಈ ಮೂಲಕ ದರ್ಶನ್ ತಮ್ಮ ಬಗ್ಗೆ ತಮ್ಮ ಸಿನಿಮಾಗಳ ಪ್ರಮೋಶನ್ ಗಳ ಬಗ್ಗೆ ಮಾಧ್ಯಮಗಳ ಮೇಲೆ ಅವಲಂಬನೆ ಆಗದೇ ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ಪ್ರಚಾರ ಮಾಡಿಕೊಳ್ಳಲಿದ್ದಾರೆ.ಈ ಮೂಲಕ ತಮ್ಮನ್ನ ಕಡೆಗಣಿಸಿದ ಮಾಧ್ಯಮಗಳಿಗೆ ಸಖತ್ ಆಗಿಯೇ ಸೈಡ್ ಲೈನ್ ಹೊಡೆದಿದ್ದಾರೆ.

Leave a Reply

%d bloggers like this: