ದರ್ಶನ್ ಗಾಗಿ ಹುಡುಕಿಕೊಂಡು ಓಡಿಬಂದ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್! ಕಾರಣ ಏನು ಗೊತ್ತಾ

ಸಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಭೇಟಿಯಾದ ಟಾಲಿವುಡ್ ನ ಸ್ಟಾರ್ ನಿರ್ದೇಶಕ..! ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ರವರಿಗೆ ಕೇವಲ ಕನ್ನಡ ಮಾತ್ರವಲ್ಲದೆ ಹೊರ ರಾಜ್ಯ ಗಳಲ್ಲಿಯೂ ಕೂಡ ಅಪಾರ ಫ್ಯಾನ್ ಫಾಲೋಯಿಂಗ್ ಇದೆ. ತಮ್ಮ ಮಾಸ್ ಇಮೇಜ್ ನಿಂದಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರ ಸಿನಿಮಾಗಳು ಅಂದರೆ ಮಿನಿಮಮ್ ಗ್ಯಾರಂಟಿ ಪ್ರಾಫಿಟ್ ಚಿತ್ರಗಳು ಎನ್ನಲಾಗುತ್ತವೆ. ಇಂದಿಗು ಕೂಡ ದರ್ಶನ್ ಅವರ ನಟನೆಯ ಅಭಿನಯದ ಅನೇಕ ಸಿನಿಮಾಗಳು ಪರಭಾಷೆಗೆ ಡಬ್ಬಿಂಗ್ ಆಗಿ ಯೂಟ್ಯೂಬ್ ನಲ್ಲಿ ಬಾರಿ ವೀಕ್ಷಣೆ ಪಡೆಯುತ್ತಿದೆ. ಇತ್ತೀಚೆಗೆ ತೆರೆ ಕಂಡಂತಹ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿಯೂ ಕೂಡ ಬಿಡುಗಡೆಯಾಗಿ ಸೂಪರ್‌ಹಿಟ್ ಆಗಿತ್ತು.

ಈ ಮೂಲಕ ಟಾಲಿವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇದೀಗ ಟಾಲಿವುಡ್ ಖ್ಯಾತ ನಿರ್ದೇಶಕರಾದ ಸುಕುಮಾರ್ ಅವರು ಡಿ ಬಾಸ್ ದರ್ಶನ್ ಅವರ ಒಟ್ಟಿಗೆ ಇರುವ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಈ ಫೋಟೋ ಯಜಮಾನ ಚಿತ್ರದ ಶೂಟಿಂಗ್ ಸಂಧರ್ಭದಲ್ಲಿ ಸುಕುಮಾರ್ ಅವರು ಭೇಟಿಯಾಗಿದ್ದ ಸಂಧರ್ಭದ ಫೋಟೋವಾಗಿದೆ. ಈ ಭೇಟಿಯ ಫೋಟೋ ಇದೀಗ ಸಿನಿ ಪ್ರಿಯರಿಗೆ ಕುತೂಹಲವನ್ನು ಕೂಡ ಮೂಡಿಸಿದೆ. ಏಕೆಂದರೆ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ ೨ ಭಾಗಗಳಲ್ಲಿ ತೆರೆಕಾಣುತ್ತಿದೆ. ಟಾಲಿವುಡ್ ಸ್ಟೈಲಿಷ್ಟ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪ ಚಿತ್ರದ ಭಾಗ ಒಂದು ಈಗಾಗಲೇ ತನ್ನ ಟ್ರೆಲರ್ ಮತ್ತು ಲಿರಿಕಲ್ ಮೇಕಿಂಗ್ ಸಾಂಗ್ ಮೂಲಕ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ.

ಪುಷ್ಪ ಚಿತ್ರದ ಕಥೆ ಧೀರ್ಘ ವಾಗಿರುವುದರಿಂದ ಈ ಚಿತ್ರವನ್ನು ೨ ಭಾಗಗಳಲ್ಲಿ ಸಿದ್ದ ಮಾಡಲಾಗುತ್ತಿದೆ.ಹೀಗಾಗಿ ಇದೀಗ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ ಪುಷ್ಪ ಚಿತ್ರದ ಭಾಗ 2ರಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಎದುರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳಲ್ಲಿದ್ದಾರೆ ಎಂಬುದು ಆದರೆ ಈ ಬಗ್ಗೆ ಚಿತ್ರ ತಂಡದಿಂದ ಯಾವುದೆ ರೀತಿಯ ಖಚಿತ ಮಾಹಿತಿ ಹೊರ ಬಿದ್ದಿಲ್ಲ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ.ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.