ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಕಾರಿಗೆ ಅಡ್ಡಲಾದ ಪೊಲೀಸರು..! ಮತ್ತೆ ಏನಾಯ್ತು ಗೊತ್ತಾ?

ಸ್ಯಾಂಡಲ್ ವುಡ್ ಬಾಕ್ಸ್ ಅಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಕಾರಿಗೆ ಅಡ್ಡಲಾದ ಪೊಲೀಸರು..! ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಂದರೆ ಅದು ದರ್ಶನ್.ತಮ್ಮ ಸಿನಿಮಾ ಮತ್ತು ಮಾನವೀಯ ಗುಣಗಳಿಂದ ನಾಡಿನಾದ್ಯಂತ ಅಪಾರ ಅಭಿಮಾನಿ ವಲಯ ಸಂಪಾದಿಸಿರುವ ದರ್ಶನ್ ಅವರಿಗೆ ಸಿನಿಮಾ ಹೊರತು ಪಡಿಸಿ ಒಂದಷ್ಟು ಹವ್ಯಾಸಗಳಿವೆ.ಸ್ನೇಹಿತರೊಟ್ಟಿಗೆ ಟ್ರಕ್ಕಿಂಗ್,ಕಾರ್ ಕ್ರೇಜ಼್,ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ,ಸಫಾರಿ,ಫೋಟೋಗ್ರಫಿ ಹೀಗೆ ನಟನೆಯ ಜೊತೆಗೆ ಅನೇಕ ಇನ್ನಿತರ ಹವ್ಯಾಸಗಳನ್ನ ನಟ ದರ್ಶನ್ ರೂಢಿಸಿಕೊಂಡಿದ್ದಾರೆ.ಅಂತೆಯೇ ಅವರು ಎಷ್ಟರ ಮಟ್ಟಿಗೆ ಪ್ರಾಣಿ ಪ್ರಿಯರೋ ಅಷ್ಟೇ ಕಾರು ಪ್ರಿಯರು.ದೇಶ ‌ವಿದೇಶಗಳ ಅತ್ಯಾಧುನಿಕ ಐಷಾರಾಮಿ ಕಾರ್ ಗಳೆಂದರೆ ನಟ ದರ್ಶನ್ ಅವರಿಗೆ ಬಹಳ ಅಚ್ಚು ಮೆಚ್ಚು. ದರ್ಶನ್ ಅವರು ಆಗಾಗ ಲಾಂಗ್ ಡ್ರೈವ್ ಕೂಡ ಹೋಗುತ್ತಾರೆ.ಇವರ ಕಾರ್ ಕ್ರೇಜ಼್ ಯಾವ ಮಟ್ಟಿಗೆಯಿದೆ ಎಂಬುದಕ್ಕೆ ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ವೀಡಿಯೋ ತುಣುಕುಗಳು ಸಾಕ್ಷಿಯಾಗಲಿವೆ.

ದರ್ಶನ್ ಅವರ ಹತ್ತಿರ ಐದು ಕೋಟಿ ಬೆಲೆಯ ಎರಡು ದುಬಾರಿ ಐಷಾರಾಮಿ ಕಾರ್ ಆದಂತಹ ಲಂಬೋರ್ಗಿನಿ ಅವೆಂಟೆಡರ್ ಕಾರ್ ಇದೆ.ಇದರ ಜೊತೆಗೆ ಲ್ಯಾಂಬೋರ್ಗಿನಿ ಉರುಸ್ ಕಾರ್ ಕೂಡ ಇದೆ.ಇದರ ಬೆಲೆ ಬರೋಬ್ಬರಿ ಮೂರು ಕೋಟಿಯಷ್ಟಿದೆ.ನಟ ದರ್ಶನ್ ಇಂದು ಕನ್ನಡದ ಬಹು ಬೇಡಿಕೆಯ ನಟನಾಗಿ ಬೆಳೆದು ಕರ್ನಾಟಕ ಮಾತ್ರ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾದ ರಾಬರ್ಟ್ ಚಿತ್ರ ಉತ್ತಮ ಉದಾಹರಣೆ.ಏಕೆಂದರೆ ರಾಬರ್ಟ್ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು ಅವತರಣಿಕೆಯಲ್ಲಿಯೂ ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.ದರ್ಶನ್ ಅವರು ತಾವು ಎಷ್ಟೇ ದೊಡ್ಡ ಸ್ಟಾರ್ ನಟರಾಗಿದ್ದರು ಕೂಡ ತಮ್ಮ ಅಭಿಮಾನಿಗಳನ್ನು ವಿಐಪಿ ಸ್ಥಾನದಲ್ಲಿಟ್ಟು ಎಂತಹ ವ್ಯಕ್ತಿಯನ್ನಾದರು ಕೂಡ ತಮ್ಮ ಆಪ್ತರಂತೆ ಕಂಡು ಗೌರವಿಸುತ್ತಾರೆ.ಅನೇಕ ಮಂದಿಗೆ ಆರ್ಥಿಕವಾಗಿ ಸಹಾಯವನ್ನು ಕೂಡ ಮಾಡಿದ್ದಾರೆ.

ಅದನ್ನ ಎಲ್ಲಿಯೂ ಕೂಡ ಹೇಳಿಕೊಳ್ಳದೆ ತಮ್ಮ ನಂಬಿ ಬಂದವರಿಗೆ ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದ್ದಾರೆ.ನಟ ದರ್ಶನ್ ಅವರು ಮಾರುಕಟ್ಟೆಗೆ ಯಾವುದೇ ಅಡ್ವಾನ್ಸ್ಡ್ ಕಾರ್ ಗಳು ಪರಿಚಯವಾಗಿದೆ ಎಂದ ಕೂಡಲೇ ಅವುಗಳ ಬಗ್ಗೆ ತಿಳಿದುಕೊಂಡು ಖರೀದಿ ಮಾಡುತ್ತಾರೆ.ದರ್ಶನ್ ಅವರ ಬಳಿ ಜಾಗ್ವಾರ್,ಪೋರ್ಶೇ ಆಡಿ ಕ್ಯೂ 7,ಐ 20 ರೇಂಜ್ ರೋವರ್ ಫಾರ್ಚೂನರ್ ಬೆಂಝ್,ಮಿನಿ ಕೂಪರ್ ಹಮ್ಮರ್,ಲಂಬೋರ್ಗಾನಿ ಕಾರ್ ಇವೆ.ಇತ್ತೀಚೆಗೆ ನಟ ದರ್ಶನ್ ತಮ್ಮ ನೆಚ್ಚಿನ ಕಾರಿನಲ್ಲಿ ಮೈಸೂರಿಗೆ ಹೋಗಬೇಕಾದಾಗ ಪೊಲೀಸರು ಅಡ್ಡ ಹಾಕಿದ್ದಾರೆ.ದರ್ಶನ್ ಅವರು ಕಾರ್ ನಿಲ್ಲಿಸಿ ಗ್ಲಾಸ್ ಇಳಿಸುತ್ತಿದ್ದಂತೆ ಅವರ ಬಳಿ ಬಂದ ಪೊಲೀಸರು ಕಾರ್ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮತ್ತು ನಿಮ್ಮ ಈ ಕಾರ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂದು ಕೇಳಿದ್ದಾರೆ.ಇದಕ್ಕೆ ನಟ ದರ್ಶನ್ ಕೂಡ ಸಂತೋಷದಿಂದ ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಎಲ್ಲಿ ತನ್ನ ಹೊಸ ಕಾರಿಗೆ ದಂಡ ಹಾಕುತ್ತಾರೋ ಎಂದುಕೊಂಡಿದ್ದ ದರ್ಶನ್ ಅವರಿಗೆ ಪೊಲೀಸರ ಅಭಿಮಾನ ಕಂಡು ಸಂತೋಷವಾಯಿತ್ತಂತೆ.

Leave a Reply

%d bloggers like this: