ಧಾರಾವಾಹಿಯ ಖ್ಯಾತ ನಟಿ ರಚಿತಾ ಅವರ ಗಂಡ ಇವರೇ ನೋಡಿ! ಈತ ಒಬ್ಬ ದೊಡ್ಡ ನಟ

ದಶಕಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿ ಮನೆ ಮಾತಾಗಿದ್ದ ನಟಿ ರಚಿತಾ ಇದೀಗ ಮದುವೆಯಾಗಿ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ.ಹಿಂದೆ ಬೆಳ್ಳಿತೆರೆಗಿಂತಾಗಿ ಹೆಚ್ಚು ಕನ್ನಡ ಕಿರುತೆರೆ ಕಲಾವಿದರೇ ಅಪಾರ ಜನಪ್ರಿಯತೆಯನ್ನೊಂದಿದ್ದರು.ಸಂಜೆ ಆಗುತ್ತಲೇ ಟಿವಿ ಮುಂದೆ ಕೂರುತ್ತಿದ್ದ ಮಹಿಳೆಯರಿಗೆ ಅಂದಿನ ದಿನಮಾನಗಳಲ್ಲಿನ ಧಾರಾವಾಹಿಗಳೆಂದರೆ ಅಚ್ಚು ಮೆಚ್ಚಾಗಿದ್ದವು.ಅಂತಹ ಧಾರಾವಾಹಿಗಳಲ್ಲಿ ಸೂರ್ಯಕಾಂತಿ ಕೂಡ ಒಂದು.ದಶಕಗಳ ಹಿಂದೆ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೂರ್ಯಕಾಂತಿ ಧಾರಾವಾಹಿ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿತ್ತು.ಈ ಸೂರ್ಯಕಾಂತಿ ಧಾರಾವಾಹಿಯಲ್ಲಿ ಕಾಂತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಚಿತಾ ನಾಡಿನಾದ್ಯಂತ ಮನೆ ಮಾತಾಗಿದ್ದರು.ನಟಿ ರಚಿತಾ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು,ತೆಲುಗು ಭಾಷೆಯ ಧಾರಾವಾಹಿಯಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟಿ ರಚಿತಾ ಮೇಘ ಮಂದಾರ ಎಂಬ ಸೀರಿಯಲ್ ಮೂಲಕ ಈ ಕಿರುತೆರೆ ಲೋಕಕ್ಕೆ ಎಂಟ್ರಿ ಪಡೆದುಕೊಂಡರು. ತದ ನಂತರ ಸುಪ್ರಭಾತ,ಸವಿಗನಸು,ಮನೆಯೊಂದು ಮೂರು ಬಾಗಿಲು ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಗಮನ ಸೆಳೆಯುವಂತಹ ಪಾತ್ರಗಳಲ್ಲಿ ನಟಿಸಿರುವ ನಟಿ ರಂಜಿತಾ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದು ಸೂರ್ಯಕಾಂತಿ ಧಾರಾವಾಹಿಯ ಕಾಂತಿಯ ಪಾತ್ರದ ಮೂಲಕ ಮನೆ ಮಾತಾದರು. ನಟಿ ರಚಿತಾ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಾರಣ ಅಲ್ಲಿಯೂ ಕೂಡ ಅಪಾರ ಸ್ನೇಹ ಬಳಗ ಹೊಂದಿದ್ದರು.ಹೀಗೆ ತಮಿಳಿನ ಧಾರಾವಾಹಿಯೊಂದರಲ್ಲಿ ನಟಿಸುತ್ತಿರುವಾಗ ಸಹ ನಟರಾಗಿ ಪರಿಚಯರಾದ ನಟ ದಿನೇಶ್ ಗೋಪಾಲ್ ಸ್ವಾಮಿ ಅವರನ್ನು ಪ್ರೀತಿಸಿ ಮದುವೆ ಆಗುತ್ತಾರೆ.ನಟ ದಿನೇಶ್ ಗೋಪಾಲ ಸ್ವಾಮಿ ಅವರು ತಮಿಳಿನ ಅನೇಕ ಧಾರಾವಾಹಿ ಮತ್ತು ರಿಯಾಲಿಟಿ ಶೋ ಗಳಲ್ಲಿ ನಟಿಸಿದ್ದಾರೆ.

ನಟಿ ರಚಿತಾ ಮತ್ತು ಪತಿ ನಟ ದಿನೇಶ್ ಗೋಪಾಲ ಸ್ವಾಮಿ ಅವರು ನಚಿಯಾರಪುರಂ ಎಂಬ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ.ಇನ್ನು ನಟಿ ರಚಿತಾ ಅವರು ಧಾರಾವಾಹಿಯ ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಸ್ಟಾರ್ ದಂಪತಿಗಳಾದ ದಿಗಂತ್ ಮತ್ತು ಐಂದ್ರಿತಾ ರೈ ಜೋಡಿಯಾಗಿ ನಟಿಸಿದ್ದ ಪಾರಿಜಾತ ಸಿನಿಮಾದಲ್ಲಿ ದಿಗಂತ್ ಅವರ ಅತ್ತಿಗೆ ಪಾತ್ರದಲ್ಲಿ ನಟಿ ರಚಿತಾ ನಟಿಸಿದ್ದಾರೆ.ಸದ್ಯಕ್ಕೆ ಪತಿ ದಿನೇಶ್ ಗೋಪಾಲ್ ಸ್ವಾಮಿ ಅವರೊಟ್ಟಿಗೆ ಚೆನ್ನೈನಲ್ಲಿ ಬದುಕು ಕಟ್ಟಿಕೊಂಡಿರುವ ನಟಿ ರಚಿತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವಿವ್ ಆಗಿದ್ದು,ಇನ್ಸ್ಟಾದಲ್ಲಿ ಆಗಾಗ ಒಂದಷ್ಟು ತಮ್ಮ ಕುಟುಂಬದ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.