ಧನಂಜಯ ಅವರ ಸಿನಿಮಾ ಜೀವನದಲ್ಲೇ ದೊಡ್ಡ ಓಪನಿಂಗ್ ಪಡೆದ ಹೆಡ್ ಬುಷ್ ಚಿತ್ರ, ಮೊದಲ ದಿನದ ಗಳಿಕೆ ಎಷ್ಟು

ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ವೃತ್ತಿ ಬದುಕಿನಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ ಹೆಡ್-ಬುಷ್ ಸಿನಿಮಾ. ಹೌದು ಅಕ್ಟೋಬರ್ 21ರಂದು ಅದ್ದೂರಿಯಾಗಿ ರಿಲೀಸ್ ಆದ ಡಾಲಿ ಧನಂಜಯ್ ನಿರ್ಮಾಣದ ಹೆಡ್-ಬುಷ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. 70-80ರ ದಶಕದಲ್ಲಿ ಭೂಗತಲೋಕದ ದೊರೆಯಾಗಿ ಮೆರೆದಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದು, ತಮ್ಮ ಖಡಕ್ ನಟನೆಯ ಮೂಲಕ ಧನಂಜಯ್ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ನೀಡಿದ್ದಾರೆ. ಹೆಡ್-ಬುಷ್ ಸಿನಿಮಾದಲ್ಲಿ ಧನಂಜಯ್ ಜೋಡಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ಅದೇ ರೀತಿಯಾಗಿ ಪ್ರಧಾನ ಪಾತ್ರಗಳಲ್ಲಿ ಲೂಸ್ ಮಾದ ಯೋಗಿ, ವಸಿಷ್ಟ ಸಿಂಹ, ಬಾಲು ನಾಗೇಂದ್ರ, ರಘು ಮುಖರ್ಜಿ, ದೇವರಾಜ್, ರವಿಚಂದ್ರನ್, ಶೃತಿ ಹರಿಹರನ್ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಇನ್ನು ಹೆಡ್-ಬುಷ್ ಸಿನಿಮಾ ಪೋಸ್ಟರ್, ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಅದರಂತೆ ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ ಬರೋಬ್ಬರಿ 4.23 ಕೋಟಿಯಷ್ಟು ಕಲೆಕ್ಷನ್ ಮಾಡಿದೆ. ಈ ಗಳಿಕೆ ಧನಂಜಯ್ ಅವರ ವೃತ್ತಿ ಜೀವನದಲ್ಲಿ ದಾಖಲೆ ಅಂತಾನೇ ಹೇಳಲಾಗ್ತಿದೆ. ಹೆಡ್-ಬುಷ್ ಸಿನಿಮಾಗೆ ಧನಂಜಯ್ ಅವರು ಬಂಡವಾಳ ಹೂಡಿಕೆ ಮಾಡಿ ನಟಿಸಿದ್ದು, ಇದು ಅವರಿಗೆ ಒಂದೊಳ್ಳೆ ಲಾಭ ಮಾಡಿಕೊಟ್ಟಿದೆ. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಪುಸ್ತಕವನ್ನಾಧಾರಿಸಿದ ಈ ಹೆಡ್ ಬುಷ್ ಸಿನಿಮಾಗೆ ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶೂನ್ಯ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಚರಣ್ ರಾಜ್ ಅವರ ರಾಗ ಸಂಯೋಜನೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಹೆಡ್ ಬುಷ್ ಸಿನಿ‌ಮಾ ಮಾಸ್ ಆಡಿಯನ್ಸ್ ಗೆ ಮೋಡಿ ಮಾಡಿದೆ.

Leave a Reply

%d bloggers like this: