ದೇವಿಯ ಮುಂದಿರುವ ಬಿಂದಿಗೆ 50 ಲಕ್ಷ ನೀರು ಸುರಿದರು ತುಂಬಲ್ಲ! ಮಹಿಮೆ ನೋಡಿ ಬೆಚ್ಚಿ ಬಿದ್ದ ವಿಜ್ಞಾನಿಗಳು

ಭಾರತ ದೇಶ ಹಲವು ವೈವಿಧ್ಯತೆಗಳಿಂದ ಕೂಡಿದ ಪಾರಂಪರಿಕ ದೇಶ.ವೇದ ಉಪನಿಷತ್ತು,ಅನೇಕ ಧಾರ್ಮಿಕ ಆಚರಣೆ ನಂಬಿಕೆಗಳನ್ನು ಹೊಂದಿರುವ ಧಾರ್ಮಿಕ ದೇಶವಾದ ಭಾರತದಲ್ಲಿ ಹಲವಾರು ಅಚ್ಚರಿಯ ಸಂಗತಿಗಳು ನಡೆಯುತ್ತಲೇ ಇರುತ್ತವೆ.ಅವು ವಿಜ್ಞಾನ ಲೋಕಕ್ಕೂ ನಿಲುಕದ್ದಾಗಿರುತ್ತದೆ.ಅಂತೆಯೇ ನಮ್ಮ ಭಾರತ ನೆಲದಲ್ಲಿ ಹೆಣ್ಣು ದೇವತೆಗಳಿಗೆ ವಿಶೇಷ ಪ್ರಾಧಾನ್ಯತೆಯನ್ನ ನೀಡಲಾಗುತ್ತದೆ.ಅಂತೆಯೇ ಶೀತಲ ಮಾತೆ ಎಂಬ ದೇವಸ್ಥಾನದಲ್ಲಿ ವಿಶೇಷವಾದ ಕೊಡವೊಂದಿದೆ. ಈ ಕೊಡಕ್ಕೆ ಭಕ್ತರು ಬಂದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಈ ಕೊಡಕ್ಕೆ ಎಷ್ಟೇ ನೀರು ತುಂಬಿಸಿದರು ಕೂಡ ತುಂಬುವುದೇ ಇಲ್ಲವಂತೆ.ಈ ತಾಯಿಯ ವಿಶೇಷತೆ ಮಹಿಮೆ ಕಂಡು ದೇಶದ ಮೂಲೆ ಮೂಲೆಗಳಿಂದ ಅಪಾರ ಭಕ್ತರು ಈ ದೇವಾಲಯಕ್ಕೆ ಬರುತ್ತಾರಂತೆ.ಈ ಶೀತಲ ಮಾತೆ ದೇವಾಲಯ ಇರುವುದು ರಾಜಸ್ಥಾನದಲ್ಲಿ.

ಹೌದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಈ ಶೀತಲ ಮಾತೆ ದೇವಾಲಯ ಇದೆ. ಎಲ್ಲರನ್ನು ಅಚ್ಚರಿಗೆ ತಳ್ಳುವ ಈ ವಿಶೇಷದ ಅರ್ಧ ಅಡಿ ಆಳ ಮತ್ತು ಅರ್ಧ ಅಡಿ ಅಗಲ ಇರುವ ಈ ಬಿಂದಿಗೆ ನೂರಾರು ವರ್ಷಗಳ ಇತಿಹಾಸ ಪವಾಡವನ್ನು ಹೊಂದಿದೆಯಂತೆ.ಸರಿ ಸುಮಾರು 800 ವರ್ಷ ಗಳ ಕಾಲ ಇತಿಹಾಸ ಇರುವ ಶೀತಲ ಮಾತೆಯ ದೇವಾಲಯದ ಬಿಂದಿಗೆಯನ್ನು ಕೇವಲ ಎರಡು ಭಾರಿ ಮಾತ್ರ ಹೊರ ತೆಗೆಯಲಾಗಿದೆಯಂತೆ.ಈ ಕೌತುಕದ ಬಿಂದಿಗೆಗೆ ಇದುವರೆಗೂ ಬರೋಬ್ಬರಿ ಐವತ್ತು ಲಕ್ಷ ಲೀಟರ್ ಕ್ಕಿಂತ ಹೆಚ್ಚು ನೀರನ್ನು ತುಂಬಿಸಿದ್ದಾರಂತೆ.ಕೇವಲ ಅರ್ಧ ಅಡಿ ಅಗಲ ಉದ್ದ ಇರುವ ಈ ವೈಶಿಷ್ಟ್ಯತೆಯ ಬಿಂದಿಗೆಯಲ್ಲಿ ಅಷ್ಟೊಂದು ನೀರು ಸಂಗ್ರಹವಾಗಲು ಹೇಗೆ ಸಾಧ್ಯವಾಗುತ್ತದೆ.ಇದು ಪವಾಡವೇ ಸರಿ ಆಗಿದೆ. ಇಲ್ಲಿಗೆ ವಿಜ್ಞಾನಿಗಳು ಬಂದು ಪರಿಶೀಲನೆ ಮಾಡಿದರು ಕೂಡ ಈ ಬಿಂದಿಗೆಯ ಮರ್ಮ ಅರಿಯಲು ಅವರಿಗೂ ಕೂಡ ಸಾಧ್ಯವಾಗಿಲ್ಲವಂತೆ.

ಅಲ್ಲಿನ ಜನರ ನಂಬಿಕೆಯ ಪ್ರಕಾರ ಈ ಬಿಂದಿಗೆಗೆ ಸುರಿಯುವ ನೀರನ್ನು ರಾಕ್ಷಸನೊಬ್ಬ ಕುಡಿಯುತ್ತಾನಂತೆ.ಈ ಬಿಂದಿಗೆಯ ಮೇಲೊಂದು ಕಲ್ಲನ್ನು ಇಟ್ಟಿದ್ದಾರಂತೆ.ಆ ಕಲ್ಲನ್ನು ವರ್ಷಕ್ಕೆ ಎರಡು ಬಾರೆ ತೆಗೆಯುತ್ತಾರಂತೆ. ಈ ಗ್ರಾಮದಲ್ಲಿ ಶೀತಲಮಾತೆ ದೇವಿಯ ಪ್ರಭಾವ ಶಕ್ತಿದೇವತೆಯಾಗಿದ್ದಾಳಂತೆ.ಇವರ ಬಿಂದಿಗೆಗೆ ನೀರು ತುಂಬಿಸುವ ಸಂಪ್ರದಾಯ ಆಚರಣೆಯು ಸುಮಾರು ಎಂಟು ನೂರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆಯಂತೆ.ಈ ದೇವಾಲಯದ ಬಿಂದಿಗೆ ಶೀತಲ ಸಪ್ತಮಿ ಮತ್ತು ಜ್ಯೇಷ್ಠ ಮಾಸದ ಮೊದಲನೆಯ ದಿನ ಆ ಹಳ್ಳಿಯ ಮಹಿಳೆಯರು ಕಳಸವನ್ನು ತುಂಬುವ ಮೂಲಕ ಆ ಪುಟ್ಟ ಬಿಂದಿಗೆಗೆ ಸಾವಿರಾರು ಲೀಟರ್ ನೀರನ್ನು ತುಂಬುತ್ತಾರಂತೆ.ಆದರೂ ಕೂಡ ಈ ಬಿಂದಿಗೆ ತುಂಬುವುದಿಲ್ಲ.ಒಟ್ಟಾರೆಯಾಗಿ ಭಾರತದಲ್ಲಿರುವ ಅನೇಕ ದೇವಾಲಯಗಳಲ್ಲಿ ಇಂದಿಗೂ ಅನೇಕ ತಿಳಿಯಲಾಗದ ರಹಸ್ಯಗಳು ಇವೆ.