ದೇವಸ್ಥಾನಕ್ಕೆ ಭೇಟಿ ಕೊಟ್ಟರೂ ಸಹ ಜನರ ಸಿಟ್ಟಿಗೆ ಗುರಿಯಾದ ರಶ್ಮಿಕಾ ಅವರು, ಕಾರಣ ಏನ್ ಗೊತ್ತಾ

ನಟಿ ರಶ್ಮಿಕಾ ಮಂದಣ್ಣ ಅವರ ಡ್ರೆಸ್ ಕಂಡು ನೆಟ್ಟಿಗರು ಗರಂ ಆಗಿರೋದ್ ಯಾಕ್ ಗೊತ್ತಾ. ರಶ್ಮಿಕಾ ಮಂದಣ್ಣ ಅವರ ಯಾವ ತಪ್ಪಿಗಾಗಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಂತ ಗೊತ್ತಾದ್ರೇ ನೀವು ಕೂಡ ಒಮ್ಮೆ ರಶ್ಮಿಕಾ ಮಂದಣ್ಣ ಅವರು ನಿಜಕ್ಕೂ ತಪ್ಪು ಮಾಡಿದ್ರಾ, ಇಲ್ವಾ ಅನ್ನೋ ಸ್ಪಷ್ಟ ಅಭಿಪ್ರಾಯಕ್ಕೆ ಬರುತ್ತೀರಿ. ಹಾಗಿದ್ರೇ ನಟಿ ರಶ್ಮಿಕಾ ಮಂದಣ್ಣ ಅವರ ಈ ಹೊಸ ವಿವಾದ ಏನು ಅನ್ನೋದನ್ನ ತಿಳಿಯೋಣ. ರಶ್ಮಿಕಾ ಮಂದಣ್ಣ ಇಂದು ಕನ್ನಡ ಮಾತ್ರ ಅಲ್ಲದೆ, ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡು ಸಖತ್ ಶೈನ್ ಆಗ್ತಿರೋ ನಟಿ. ಪುಷ್ಪಾ ಸಿನಿಮಾದ ಯಶಸ್ಸಿನ ನಂತರ ಅವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸೌತ್ ಸಿನಿ ರಂಗದಲ್ಲಿ ಅಂತೂ ಅವರೇ ನಂಬರ್ ಒನ್ ಹೀರೋಯಿನ್ ಅನ್ನೋಷ್ಟರ ಮಟ್ಟಿಗೆ ಜನಪ್ರಿಯತೆ ಸೃಷ್ಟಿಯಾಗಿದೆ.

ಆದರೆ ಹಾಗೊಮ್ಮೆ ಈಗೊಮ್ಮೆ ಆಗೋ ಕೆಲವು ಸಂಗತಿಗಳು ಅವರ ವ್ಯಕ್ತಿತ್ವಕ್ಕೆ ಕುಂದು ತರುತ್ತಿವೆ. ಅದು ಅವರಿಗೆ ಗೊತ್ತಿದ್ದೂ ಆಗ್ತಾಯಿದಾವೋ ಇಲ್ಲಾ ಗೊತ್ತಿಲ್ಲದೇ ಆಗ್ತಾ ಇದಾವೋ ಗೊತ್ತಿಲ್ಲ. ಆದ್ರೇ ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಕೇಳಿ ಬರುತ್ತಿರುತ್ತೆ. ಈಗ ಹೊಸದಾಗಿ ಆದ ವಿವಾದ ಏನಪ್ಪಾ ಅಂದರೆ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಗುಡ್ ಬೈ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಗುಡ್ ಬೈ ಸಿನಿಮಾ ರಶ್ಮಿಕಾ ಮಂದಣ್ಣ ಅವರ ಚೊಚ್ಚಲ ಹಿಂದಿ ಸಿನಿಮಾ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ರಶ್ಮಿಕಾ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಹಾಗಾಗಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ತಮ್ಮ ಮೊದಲ ಹಿಂದಿ ಗುಡ್ ಬೈ ಸಿನಿಮಾದ ಪ್ರಚಾರದಲ್ಲಿ ತೊಡಗಿರುತ್ತಾರೆ.

ಈ ಕಾರ್ಯಕ್ರಮಕ್ಕೆ ಲುಕ್ ಆಗಿರೋ ಮಲ್ಟಿ ಕಲರ್ ಪ್ರಿಂಟೆಡ್ ಲೆಹಂಗಾ ಶ್ರಗ್ ಟಾಪ್ ನೊಟ್ಟಿಗೆ ಓಪನ್ ಕೋಟ್ ಧರಿಸಿ ಬಂದಿರುತ್ತಾರೆ. ಈ ಡ್ರೆಸ್ ಮೂಲಕ ಇಡೀ ಸುದ್ದಿಗೋಷ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಕಾರ್ಯಕ್ರಮ ಮುಗಿದ ನಂತರ ರಶ್ಮಿಕಾ ಮನೆಗೆ ಹೋಗಿದ್ರೇ ಈ ವಿವಾದಕ್ಕೆ ಸಿಲುಕುತ್ತಿರಲಿಲ್ಲ. ಆದರೇ ಇದೇ ಡ್ರೆಸ್ ನಲ್ಲಿ ರಶ್ಮಿಕಾ ಮಂದಣ್ಣ ಮುಂಬೈ ನಗರದ ಐತಿಹಾಸಿಕ ಲಾಲ್ ಬಗ್ಚಾ ರಾಜಾ ಪಾಂಡಲ್ ನಲ್ಲಿ ಗಣಪತಿ ದರ್ಶನಕ್ಕಾಗಿ ಹೋಗ್ತಾರೆ. ಇದೇ ನೋಡೇ ಅಗಿದ್ದು. ದೇವರ ದರ್ಶನಕ್ಕಾಗಿ ರಶ್ಮಿಕಾ ಬೋಲ್ಡ್ ಡ್ರೆಸ್ ಧರಿಸಿ ಬಂದಿರೋದು ಸರಿ ಇಲ್ಲ. ರಶ್ಮಿಕಾ ಮಂದಣ್ಣಗೆ ಎಲ್ಲಿ, ಹೇಗೆ ಇರಬೇಕು, ಯಾವ ರೀತಿ ಸಂಸ್ಕಾರ ಸಂಪ್ರದಾಯ ಅನುಸರಿಸಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ರಶ್ಮಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಗಣಪತಿ ದರ್ಶನಕ್ಕಾಗಿ ಹೋಗಿದ್ದ ರಶ್ಮಿಕಾರ ಫೋಟೋ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದೆ.