ದೀಪಾವಳಿಗೆ 73 ಲಕ್ಷ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ

ಭಾರತೀಯ ಮಹಿಳಾ ಕ್ರಿಕೆಟರ್ ಇದೀಗ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದಾರೆ. ಹೌದು ಈ ಸಿನಿಮಾ ಸೆಲೆಬ್ರಿಟಿಗಳು , ಕ್ರಿಕೆಟ್ ಕ್ಷೇತ್ರದ ಸಾಧಕರು ಸೇರಿದಂತೆ ರಾಜಕೀಯ ರಂಗದ ಗಣ್ಯ ವ್ಯಕ್ತಿಗಳು, ಅವರ ಮಕ್ಕಳು ಹಾಗೂ ಉದ್ಯಮಿಗಳು ತಮ್ಮ ಅಂತಸ್ತಿಗೆ ತಕ್ಕಂತೆ ಲೈಫ್ ಸ್ಟೈಲ್ ಹೊಂದಿರುತ್ತಾರೆ. ಅದರಂತೆ ಕಾರ್ ಕ್ರೇಜ಼್ ಕೂಡ ಹೊಂದಿರುತ್ತಾರೆ. ಅದರಂತೆ ಈ ಸಿನಿಮಾ ಕ್ಷೇತ್ರ ಹಾಗೂ ಕ್ರಿಕೆಟ್ ಕ್ಷೇತ್ರದ ಯುವ ಪ್ರತಿಭೆಗಳು ಕಾರ್ ಕ್ರೇಜ಼್ ಇದ್ದೇ ಇರುತ್ತೆ. ಅದರಂತೆ ಇದೀಗ ನೂತನ ಐಷಾರಾಮಿ ಕಾರ್ ಖರೀದಿ ಮಾಡುವ ಮೂಲಕ ಸುದ್ದಿ ಆಗಿರೋದು ಅಂದರೆ ಅದು ಸ್ಮೃತಿ ಮಂದಾನ. ಸ್ಮೃತಿ ಮಂದಾನ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ.

ಸ್ಮೃತಿ ಮಂದಾನ ಕೇವಲ ತಮ್ಮ ಕ್ರಿಕೆಟ್ ಆಟದ ಮೂಲಕ ಮಾತ್ರ ಅಲ್ಲದೆ ತಮ್ಮ ಬ್ಯೂಟಿ ಮುಖಾಂತರ ಸಹ ಭಾರಿ ಸದ್ದು ಮಾಡಿದ್ದಾರೆ. ಸ್ಮೃತಿ ಮಂದಾನ ಅವರು ಟಿಟ್ವೆಂಟಿ ಕ್ರಿಕೆಟ್ ನಲ್ಲಿ ಬರೋಬ್ಬರಿ ನೂರು ಪಂದ್ಯಗಳನ್ನ ಆಡಿದ್ದಾರೆ. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ನೂರು ಪಂದ್ಯ ಪೂರೈಸಿದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು ಸ್ಮೃತಿ ಮಂದಾನ ಇದುವರೆಗೆ ಅವರು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಐವತ್ತಕ್ಕೂ ಅಧಿಕ ಅರ್ಧ ಶತಕ ಬಾರಿಸಿ ಗಮನ ಸೆಳೆದಿದ್ದು, ಇಂದಿಗೂ ಕೂಡ ಅವರು ಪಂದ್ಯದಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾರೆ.

2013 ರಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಸ್ಮೃತಿ ಮಂದಾನ ಅವರು 2018 ರಲ್ಲಿ ನಡೆದ ಐಸಿ ಮಹಿಳಾ ಟಿ ಟ್ವೆಂಟಿ ಪಂದ್ಯಾವಳಿಯಲ್ಲಿ ಕೇವಲ ಐದು ಮ್ಯಾಚ್ ನಲ್ಲಿ ಬರೋಬ್ಬರಿ 178 ರನ್ ಕಲೆ ಹಾಕುವ ಮೂಲಕ ಆ ಪಂದ್ಯಾವಳಿಯ ಅತ್ಯುತ್ತಮ ಬ್ಯಾಟ್ಸ್ ಮನ್ ಎಂದು ಹೆಸರು ಮಾಡಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಇವರ ಸಾಧನೆಗೆ 2019 ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿದೆ. ಇನ್ನು ಹೀಗೆ ಕ್ರಿಕೆಟ್ ಕ್ಷೇತ್ರದಲ್ಲಿ ಹತ್ತು ಹಲವು ಸಾಧನೆಗೈದಿರುವ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಇದೀಗ ನೂತನ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಎಸ್ಯೂವಿಯನ್ನ ಖರೀದಿ ಮಾಡಿದ್ದಾರೆ. ಈ ಎಸ್.ಯು.ವಿ ಕಾರು ಸಿಲ್ವರ್ ಶೇಡ್ ಬಣ್ಣದಾಗಿದ್ದು, ಇದರ ಬೆಲೆ ಬರೋಬ್ಬರಿ 72.09 ಲಕ್ಷ ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ. ಈ ನೂತನ ಕಾರಿನ ಫೋಟೋಗಳನ್ನ ಸ್ಮೃತಿ ಮಂದಾನ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Leave a Reply

%d bloggers like this: