ದೀಪಾವಳಿಗೆ 32 ಕೋಟಿ ಬೆಲೆಯ ಎರಡು ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ ಅವರು

ದೀಪಾವಳಿಗೆ ಎರಡು ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿ ಮಾಡಿದ ಪ್ರಸಿದ್ದ ಉದ್ಯಮಿ. ಈ ಕಾರ್ ಗಳ ಬೆಲೆ ಕೇಳಿ ಅನೇಕರು ಇದೀಗ ಉಬ್ಬೇರಿಸುತ್ತಿದ್ದಾರೆ. ಸಾಮಾನ್ಯವಾಗಿ ಹಬ್ಬ ಹರಿದಿನ ಅಂದಾಗ ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳು ಮತ್ತು ಗಣ್ಯ ವ್ಯಕ್ತಿಗಳು ಅದು ರಾಜಕೀಯ ಅಥವಾ ಇನ್ನಿತರ ಕ್ಷೇತ್ರದ ಖ್ಯಾತ ಉದ್ಯಮಿಗಳು ಹೊಸ ಹೊಸ ವಾಹನಗಳನ್ನ ಖರೀದಿ ಮಾಡುತ್ತಾರೆ. ಇದು ದೊಡ್ಡ ವಿಷಯ ಏನಲ್ಲ. ಆದರೆ ಈ ಖ್ಯಾತ ಉದ್ಯಮಿ ದೀಪಾವಳಿ ಹಬ್ಬದ ಪ್ರಯುಕ್ತ ಬರೋಬ್ಬರಿ ಎರಡು ರೋಲ್ಸ್ ರಾಯ್ಸ್ ಕಾರನ್ನ ಖರೀದಿಸಿದ್ದಾರೆ. ಅದು ಬೇರಾರು ಅಲ್ಲ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾಗಿರುವ ಮುಕೇಶ್ ಧೀರೂಬಾಯಿ ಅಂಬಾನಿ. ಈಗಾಗಲೇ ಅನೇಕ ಐಷಾರಾಮಿ ಕಾರುಗಳನ್ನ ಹೊಂದಿರುವ ಅಂಬಾನಿ ಅವರ ಮನೆಗೆ ಹೊಸ ಅತಿಥಿಗಳಾಗಿ ಈ ರೋಲ್ಸ್ ರಾಯ್ಸ್ ಕಾರು ಬಂದಿವೆ.

ಧೀರೂಬಾಯಿ ಅಂಬಾನಿ ಅವರು ಖರೀದಿ ಮಾಡಿರುವ ಈ ಎರಡು ಕಾರುಗಳಲ್ಲಿ ಒಂದನ್ನ ಗುಜರಾತ್ ನಲ್ಲಿರೋ ಅಹಮದಾಬಾದ್ ನಲ್ಲಿ ಇರಿಸಿದ್ರೆ, ಇನ್ನೊಂದು ಕಾರನ್ನ ಮುಂಬೈನಲ್ಲಿ ಇರಿಸಿದ್ದಾರೆ. ಅಂಬಾನಿ ಅವರ ಕುಟುಂಬದ ಯಾರೇ ಸದ್ಯಸ್ಯರು ಊರಿಂದ ಹೊರ ಹೋಗುವವರು ಇದೇ ರೋಲ್ಸ್ ರಾಯ್ಸ್ ಕಾರಿನಲ್ಲಿಯೇ ಹೋಗೋದಂತೆ. ಅಂಬಾನಿ ಅವರು ಖರೀದಿ ಮಾಡಿರೋ ಎರಡು ಕಾರುಗಳಲ್ಲಿ ಒಂದು ಫ್ಯಾಂಟಮ್ ಜುಬಿಲಿ ಸಿಲ್ವರ್ ಅಂಡ್ ಬೋಹಿಮಿಯನ್ ರೆಡ್ ಸಂಯೋಜನೆಯೊಂದಿಗೆ ಅಟ್ರಾಕ್ಟೀವ್ ಆಗಿ ಡ್ಯುಯಲ್ ಟೋನ್ ಪೇಂಟ್ ಅನ್ನ ಹೊಂದಿದೆ. ಅಂಬಾನಿ ಅವರು ಇದೀಗ ಖರೀದಿ ಮಾಡಿರುವ ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಸರಣಿ8 ಎಕ್ಸ್ಟೆಂಡೆಡ್ ವೀಲ್ ಬೇಸ್ ಕಾರಿನ ಬೆಲೆ ಬರೋಬ್ಬರಿ 16 ಕೋಟಿ ಎಂದು ತಿಳಿದು ಬಂದಿದೆ. ಈ ಬೆಲೆ ಕೇಳಿ ಅನೇಕರು ಬಾಯ್ಮೇಲ್ ಬೆರಳಿಟ್ಟುಕೊಂಡಿದ್ದಾರೆ. ದುಬಾರಿ ಬೆಲೆಯ ಈ ರೋಲ್ಸ್ ರಾಯ್ಸ್ ಕಾರನ್ನ ಆರ್ಕಿಟೆಕ್ಚರ್ ಆಫ್ ಐಷಾರಾಮಿ ಅಂತ ಹೇಳಲಾಗ್ತಿದೆ.

ಈ ರೋಲ್ಸ್ ರಾಯ್ ಕಾರಿನ ವಿಶೇಷತೆಗಳನ್ನ ನೋಡೋದಾದ್ರೆ ಇದರಲ್ಲಿ 24 ಸ್ಲಾಟ್ ಕ್ರೋಮ್ ಗ್ರಿಲ್ ಅಂಡ್ ನ್ಯೂ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನ ಒಳಗೊಂಡಿದೆ. ಈ ರೋಲ್ಸ್ ರಾಯ್ಸ್ 8ಸೀರಿಸ್ ಕಾರು 130 ಕೆಜಿ ಧ್ವನಿ ನಿರೋಧನವನ್ನ ಪಡೆಯುತ್ತದೆಯಂತೆ. ಈ ಕಾರು ವಿಶ್ವದ ಅತ್ಯಂತ ಸೌಂಡ್ ಲೆಸ್ ವಾಹನಗಳಲ್ಲಿ ಒಂದಾಗಿದೆ. ಇದರಲ್ಲಿ 6.75 ಲೀಟರ್ ಟ್ವಿನ್ ಟರ್ಬೋಚಾರ್ಚ್ಡ್ ವಿ12 ಎಂಜಿನ್ ಇದ್ದು, ಇದು 563 ಬಿಎಚ್ಪಿ ಪವರ್ ಅಂಡ್ 900 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುವ ಸಾಮರ್ಥ್ಯವನ್ನೊಂದಿದೆ. ಈ ರೋಲ್ಸ್ ರಾಯ್ 8ಸೀರಿಸ್ ಕಾರು ಜಸ್ಟ್ 5.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನ ಪಡೆದುಕೊಳ್ಳಲಿದೆಯಂತೆ. ಒಟ್ಟಾರೆಯಾಗಿ ಈ ಅಡ್ವಾನ್ಸ್ಡ್ ವಿಶೇಷ ಫೀಚರ್ ಗಳನ್ನ ಹೊಂದಿರುವಂತಹ ರೋಲ್ಸ್ ರಾಯ್ಸ್ ಕಾರನ್ನ ಅಂಬಾನಿ ಅವರು ಖರೀದಿ ಮಾಡಿ ಸದ್ಯಕ್ಕೆ ಸುದ್ದಿಯಾಗಿದ್ದಾರೆ.

Leave a Reply

%d bloggers like this: