ದೀಪಾವಳಿ ಹಬ್ಬದಂದೇ ಲಕ್ಷ್ಮಿ ದೇವಿ ಭಾವಚಿತ್ರ ಇರುವ ನಾಣ್ಯವನ್ನು ಬಿಡುಗಡೆ ಮಾಡಿದ ಬ್ರಿಟನ್! ಇದೆಕ್ಕೆಲ್ಲ ಮುಖ್ಯ ಕಾರಣ ಸುಧಾಮೂರ್ತಿ ಅವರ ಅಳಿಯ

ಬ್ರಿಟನ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದೇ ಲಕ್ಷ್ಮಿ ದೇವಿ ಭಾವಚಿತ್ರ ಇರುವ ನಾಣ್ಯವನ್ನು ಪರಿಚಯಿಸಿದ್ದಾರೆ. ಭಾರತೀಯ ಹಿಂದೂ ಹಬ್ಬಗಳಿಗೆ ಹೊರ ರಾಷ್ಟ್ರಗಳಲ್ಲಿಯೂ ಕೂಡ ವಿಶೇಷ ಗೌರವ ಸ್ಥಾನ-ಮಾನಗಳಿವೆ ಎಂಬುದಕ್ಕೆ ಇದೀಗ ಇಸ್ರೇಲ್ ಸರ್ಕಾರದ ಈ ನಡೆ ಸಾಕ್ಷಿಯಾಗಿದೆ ಎನ್ನಬಹುದು.ಭಾರತದ ಲ್ಲಿ ಹಿಂದೂ ಸಂಪ್ರದಾಯದ ಅನೇಕ ವೈವಿಧ್ಯಮ ಹಬ್ಬ-ಹರಿದಿನಗಳಿವೆ.ಭಾರತೀಯರು ಅಮೆರಿಕಾ,ಇಂಗ್ಲೆಂಡ್,ಬ್ರಿಟನ್ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಅಲ್ಲೇ ಇದ್ದರು ಸಹ ನಮ್ಮ ಭಾರತೀಯ ಹಿಂದೂ ಸಂಪ್ರದಾಯಗಳನ್ನು ಮರೆಯದೆ ಅವುಗಳನ್ನು ತಾವಿರುವ ದೇಶಗಳಲ್ಲಿ ಆಚರಣೆ ಮಾಡುತ್ತಾ ಬರುತ್ತಾರೆ.ಈ ದೀಪಾವಳಿ ಹಬ್ಬವನ್ನು ಜಗತ್ತಿನಾದ್ಯಂತ ಆಚರಣೆ ಮಾಡುತ್ತಾರೆ.ಅಂತೆಯೇ ಅಮೇರಿಕಾದ ಅಧ್ಯಕ್ಷರಾದ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್ ಹಾಗೂ ಭಾರತೀಯ ಮೂಲದ ವೈಸ್ ಪ್ರೆಸಿಡೆಂಟ್ ಕಮಲಾ ಹ್ಯಾರಿಸ್ ಅವರು ಈ ದೀಪಾವಳಿ ಹಬ್ಬವನ್ನು ಶ್ವೇತಭವನದಲ್ಲಿ ದೀಪವನ್ನುಖ ಬೆಳಗಿಸುವುದರ ಮೂಲಕ ಆಚರಣೆ ಮಾಡಿದ್ದಾರೆ.ಜೊತೆಗೆ ದೀಪಾವಳಿ ಹಬ್ಬವನ್ನು ಅಮೇರಿಕಾದ ರಾಷ್ಟ್ರೀಯ ಹಬ್ಬವನ್ನಾಗಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಸೂದೆಯಲ್ಲಿ ಮುಂದಿನ ವರ್ಷದಿಂದ ಜಾರಿ ಮಾಡುವ ಬಗ್ಗೆಯೂ ಕೂಡ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.ಇನ್ನು ಜೋ ಬೈಡನ್ ಅವರು ಅಮೇರಿಕಾದಲ್ಲಿ ವಾಸಿಸುತ್ತಿರುವ ಮತ್ತು ಜಗತ್ತಿನಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳು,ಜೈನರು,ಸಿಖ್ಖರು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಭಾರತೀಯ ಮೂಲದವರಾದ ಅಮೇರಿಕಾದ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಬಡವರ ಶ್ರೇಯೋಭಿವೃದ್ದಿಗಾಗಿ ನಾವು ನೆರವಾಗುತ್ತೇವೆ.ಕತ್ತಲಲ್ಲಿ ಬೆಳಕನ್ನು ಹುಡುಕುವ ಶಕ್ತಿ ನಮ್ಮದಾಗಿದೆ. ನಮ್ಮ ಫ್ಯಾಮಿಲಿ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.ಇದೇ ದೀಪಾವಳಿ ಹಬ್ಬದ ವಿಶೇಷ ದಿನದಂದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಚೇತನ್ ಮಹಾತ್ಮಗಾಂಧಿ ಅವರ ಬದುಕಿನ ಚಿತ್ರಣ ಮತ್ತು ಭಾರತೀಯ ಪರಂಪರೆಯನ್ನು ಗರುತಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಳೆದ ವಾರ ಗಾಂಧಿ ಸ್ಮರಣಾರ್ಥ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಅನಾವರಣ ಮಾಡಲಾಗಿದೆ.ಈ ನಾಣ್ಯದಲ್ಲಿ ಕಮಲದ ಹೂ ನಲ್ಲಿ ಲಕ್ಷ್ಮಿ ಕುಳಿತಿರುವ ಮತ್ತು ಬಾಪು ಅವರ ಚಿತ್ರವಿರುವಂತೆ ವಿನ್ಯಾಸ ಮಾಡಲಾಗಿದೆ.

ಇದರ ಕೆಳ ಭಾಗದಲ್ಲಿ ನನ್ನ ಜೀವನ ನನ್ನ ಸಂದೇಶ ಎಂಬ ಅಡಿಬರಹವನ್ನು ನೀಡಲಾಗಿದೆ.ಈ ನಾಣ್ಯ ಅನಾವರಣ ಕಾರ್ಯಕ್ರಮದಲ್ಲಿ ಭಾರತೀಯ ಮೂಲದವರಾದ ಬ್ರಿಟನ್ ದೇಶದ ಹಣಕಾಸು ಸಚಿವರಾದ ರಿಷಿ ಸುನಕ್ ಅವರು ಜಗತ್ತಿನಾದ್ಯಂತ ಕೋಟ್ಯಾಂತರ ಜನರಿಗೆ ಪ್ರೇರಣೆಯಾದ ಮಹಾನ್ ಪ್ರಭಾವಿ ವ್ಯಕ್ತಿ ಗಾಂಧಿ ಅವರಿಗೆ ಇದು ಸಲ್ಲಲೇಬೇಕಾದ ಗೌರವವಾಗಿದೆ.ಈ ದೀಪಾವಳಿ ಹಬ್ಬದ ಶುಭ ದಿನದಂದು ಒಬ್ಬ ಹಿಂದೂವಾಗಿ ಈ ನಾಣ್ಯವನ್ನು ಅನಾವರಣಗೊಳಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ರಿಷಿ ಸುನುಕ್ ಹೇಳಿಕೊಂಡಿದ್ದಾರೆ.ರಿಷಿ ಸುನಕ್ ಬೇರಾರು ಅಲ್ಲ. ಐಟಿ ದಿಗ್ಗಜ ಸಂಸ್ಥೆಯಾಗಿರುವ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಮತ್ತು ಮುಖ್ಯಸ್ಥರಾಗಿರುವ ನಾರಾಯಣ್ ಮೂರ್ತಿ ಮತ್ತು ಸುಧಾಮೂರ್ತಿ ಅವರ ಅಳಿಯ.ರಿಷಿ ಸುನಕ್ ಅವರು ಬ್ರಿಟನ್ ದೇಶದ ಭವಿಷ್ಯದ ಪ್ರೆಸಿಡೆಂಟ್ ಆಗಲಿದ್ದಾರೆ ಎಂಬ ಸುದ್ದಿ ಕೂಡ ಇದೆ.ಇತ್ತ ಇಸ್ರೇಲ್ ದೇಶದಲ್ಲಿಯೂ ಸಹ ದೀಪಾವಳಿ ಹಬ್ಬವನ್ನು ಜೋರಾಗಿಯೇ ಆಚರಿಸಲಾಗಿದೆ‌. ಇಸ್ರೇಲ್ ದೇಶದ ಅಧ್ಯಕ್ಷರಾದ ನಫ್ತಾಲಿ ಬೆನೆಟ್ ಅವರು ಕೂಡ ಭಾರತೀಯ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

Leave a Reply

%d bloggers like this: