ಡಿಸೆಂಬರ್ ಅಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ ಡಾರ್ಲಿಂಗ್ ಕೃಷ್ಣ ಅವರ ಹೊಸ ಚಿತ್ರ

ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಇದೇ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇತ್ತೀಚೆಗೆ ಬರುತ್ತಿರುವ ಎಲ್ಲಾ ಸಿನಿಮಾಗಳು ಲಾಕ್ ಡೌನ್ ಸಂಧರ್ಭದಲ್ಲಿ ಲಾಕ್ ಆಗಿದ್ದ ಸಿನಿಮಾಗಳು ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಕಳೆದ ಎರಡು ತಿಂಗಳಿಂದ ಕನ್ನಡದಲ್ಲಿ ವಾರಕ್ಕೆ ಮೂರ್ನಾಲ್ಕೂ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಂತೆಯೇ ಡಾರ್ಲಿಂಗ್ ಕೃಷ್ಣ ಅವರ ಈ ಶುಗರ್ ಫ್ಯಾಕ್ಟರಿ ಸಿನಿಮಾ ಕೂಡ ಲಾಕ್ ಡೌನ್ ಸಂಧರ್ಭ ಹಿನ್ನೆಲೆಯಲ್ಲಿ ಶೂಟಿಂಗ್ ಮುಂದೂಡಲಾಗಿದ್ದ ಸಿನಿಮಾಗಳಲ್ಲಿ ಒಂದಾಗಿದೆ.

ಕೋವಿಡ್ ಲಾಕ್ ಡೌನ್ ಆಗಿಲ್ಲವಾದರೆ ಈ ಶುಗರ್ ಫ್ಯಾಕ್ಟರಿ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆ ಆಗಬೇಕಿತ್ತು. ಇದೀಗ ಈ ಶುಗರ್ ಫ್ಯಾಕ್ಟರಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ರಿಲೀಸ್ ಗೆ ರೆಡಿ ಆಗಿದೆ. ಈ ವಿಚಾರವಾಗಿ ಶುಗರ್ ಫ್ಯಾಕ್ಟರಿ ಸಿನಿಮಾ ತಂಡ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದೇ ಡಿಸೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ತಿಳಿಸಿದೆ. ಇನ್ನು ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟರಾಗಿದ್ದು, ಇವರಿಗೆ ಜೋಡಿಯಾಗಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಖ್ಯಾತಿಯ ನಟಿ ಅದ್ವಿತಿ ಶೆಟ್ಟಿ, ಸೋನಾಲ್ ಮೊಂತೆರೋ ಮತ್ತು ಶಿಲ್ಪ ಶೆಟ್ಟಿ ಈ ಮೂವರು ನಾಯಕಿಯರು ನಟಿಸಿದ್ದಾರೆ.

ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮೂವರು ನಾಯಕಿಯರೊಟ್ಟಿಗೆ ರೊಮ್ಯಾನ್ಸ್ ಮಾಡಿದ್ದು, ಈ ಸಿನಿಮಾದ ಪೋಸ್ಟರ್ ಕಳೆದ ಫೆಬ್ರವರಿ 14 ಪ್ರೇಮಿಗಳ ದಿನದಂದು ರಿಲೀಸ್ ಆಗಿತ್ತು. ಇದೊಂದು ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾವಾಗಿದೆಯಂತೆ. ಶುಗರ್ ಫ್ಯಾಕ್ಟರಿ ಸಿನಿಮಾವನ್ನು ಬಾಲಮಣಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಗಿರೀಶ್ ಅವರು ಬಂಡವಾಳ ಹೂಡಿಕೆ ಮಾಡುವ ಮೂಲಕ ನಿರ್ಮಾಣದ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಶುಗರ್ ಫ್ಯಾಕ್ಟರಿ ಸಿನಿಮಾಗೆ ದೀಪಕ್ ಅರಸ್ ಅವರು ನಿರ್ದೇಶನ ಮಾಡಿದ್ದು, ಕಬೀರ್ ರಫಿ ರಾಗ ಸಂಯೋಜನೆ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಚೇತನ್ ಕುಮಾರ್, ಚಂದನ್ ಶೆಟ್ಟಿ ಮತ್ತು ಅರಸು ಅಂತಾರೆ ಈ ಚಿತ್ರದಲ್ಲಿನ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಯೋಗಾನಂದ್ ಮತ್ತು ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ತಾರಾಗಣದಲ್ಲಿ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

%d bloggers like this: