ಡಿಬಾಸ್ ದರ್ಶನ್ ಅವರು ನಿನ್ನೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಕಿದ್ದ ವಾಚ್ ಬೆಲೆ ಎಷ್ಟು ಗೊತ್ತೇ

ಇದೇ ಸೆಪ್ಟೆಂಬರ್ 10 ಮತ್ತು 11ರಂದು ಉದ್ಯಾನ ನಗರಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ಸೈಮಾ ಚಿತ್ರೋತ್ಸವ ಕಾರ್ಯಕ್ರಮಕ್ಕೆ ಕನ್ನಡ,ತೆಲುಗು, ತಮಿಳು ಸೇರಿದಂತೆ ಹಿಂದಿ ಚಿತ್ರರಂಗದ ದಿಗ್ಗಜ ನಟ ನಟಿಯರು ಮತ್ತು ತಂತ್ರಜ್ಞರು ಆಗಮಿಸಿ ಪ್ರಶಸ್ತಿಗಳನ್ನ ಸ್ವೀಕರಿಸಿದ್ದಾರೆ. ಅಪ್ಪು ಅವರ ಸ್ಮರಣಾರ್ಥ ಹತ್ತನೇ ವರ್ಷದ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಜರುಗಿತು. ಈ ಸೈಮಾ ಅವಾರ್ಡ್ ನಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ತಾರೆಯರು ವಿವಿಧ ರೀತಿಯ ಉಡುಗೆ ತೊಡುಗೆಗಳಿಂದ ಮಿಂಚಿ ಮಿನುಗಿದರು.

ಅದರಂತೆ ಇದೇ ಮೊದಲ ಬಾರಿಗೆ ಸೈಮಾ ಅವಾರ್ಡ್ ಫಂಕ್ಷನ್ ಗೆ ಹೋಗಿದ್ದ ದರ್ಶನ್ ಕೂಡ ಬ್ಲಾಕ್ ಅಂಡ್ ಬ್ಲಾಕ್ ಶರ್ಟ್ ಧರಿಸಿ ಫುಲ್ ಕಲರ್ ಫುಲ್ ಆಗಿ ಮಿಂಚಿದ್ದರು. ಅಭಿಷೇಕ್ ಅಂಬರೀಶ್ ಜೊತೆಯಾಗಿ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಆಗಮಿಸಿದ ಡಿ ಬಾಸ್ ದರ್ಶನ್ ಐಷಾರಾಮಿ ವಾಚ್ ವೊಂದನ್ನ ಧರಿಸಿದ್ದರು. ಇದು ಬಹುತೇಕರ ಗಮನಕ್ಕೆ ಬಂದಿರಲಿಲ್ಲ. ಆದರೆ ದರ್ಶನ್ ಕಟ್ಟಿದ್ದ ದುಬಾರಿ ವಾಚ್ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇದರ ಬೆಲೆಯನ್ನ ತಿಳಿದುಕೊಳ್ಳಲು ಹೊರಟವರಿಗೆ ಅಚ್ಚರಿಯೊಂದು ಕಾದಿತ್ತು. ಯಾಕಪ್ಪ ಅಂದ್ರೆ ದರ್ಶನ್ ಕಟ್ಟಿದ್ದ ವಾಚ್ ಬೆಲೆ ಬರೋಬ್ಬರಿ 50,62,000 ಮೌಲ್ಯದ್ದು ಎಂದು ತಿಳಿದು ಬಂದಿದೆ.

ಈ ವಾಚಿನ ಹೆಸರು ಹಬ್ ಲೋಟ್ ಬಿಗ್ ಬ್ಯಾಂಗ್ ಕಿಂಗ್ ಪವರ್ ಡೈಮಂಡ್ಸ್. ದರ್ಶನ್ ಕಟ್ಟಿದ್ದ ಈ ದುಬಾರಿ ಬೆಲೆಯ ವಾಚ್ ಮಾಹಿತಿಯನ್ನ ದಿ ಇಂಡಿಯನ್ ಹೋರಾಲಜಿ ಎಂಬ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಬಿತ್ತರಿಸಲಾಗಿದೆ. ದರ್ಶನ್ ಕಟ್ಟದ್ದ ಈ ವಾಚ್ ವಿಚಾರ ಇದೀಗ ತಡವಾಗಿ ಸಾರ್ವಜನಿಕವಾಗಿ ತಿಳಿಯುತ್ತಿದ್ದು, ದರ್ಶನ್ ಇಷ್ಟು ದುಬಾರಿ ಬೆಲೆಯ ವಾಚ್ ಅನ್ನ ಕಟ್ಟಿದ್ರಾ ಎಂದು ಅವರ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಅದರ ಜೊತೆಗೆ ಸಹಜವಾಗಿ ತಮ್ಮ ಮೆಚ್ಚಿನ ನಟ ಕಷ್ಟ ಪಟ್ಟು ಇಂದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

%d bloggers like this: