ಅಂದು ಡಿಬಾಸ್ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಸುಸಂಧರ್ಭದಲ್ಲಿ ಅಣ್ಣಾವ್ರ ದಂಪತಿಗಳು ಆಗಮಿಸಿದ್ದು ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ

ದಾಸ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಸುಸಂಧರ್ಭದಲ್ಲಿ ಮುತ್ತುರಾಜ್ ದಂಪತಿಗಳ ಎಂಟ್ರಿ ಹೇಗಿತ್ತು ಗೊತ್ತಾ..! ಕನ್ನಡ ಚಿತ್ರರಂಗದ ಮೇರು ನಟ ನಟ ಸಾರ್ವಭೌಮ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಹೀಗೆ ಅಭಿಮಾನಿ ದೇವರುಗಳಿಂದ ನಾನಾ ರೀತಿಯ ಬಿರುದುಗಳಿಂದ ಕರೆಸಿಕೊಳ್ಳುವ ವರ ನಟ ಡಾ‌.ರಾಜ್ ಕುಮಾರ್ ಅವರು ಚಿತ್ರರಂಗದ ಅಜಾತ ಶತ್ರು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಯಾರೇ ತಮ್ಮ ಎದುರು ಬಂದಾಗ ಶಿರಬಾಗಿ ಹಸನ್ಮುಖಿಯಿಂದ ಕೆನ್ನೆ ಸವರಿ ಮಾತಾನಾಡಿಸುತ್ತಿದ್ದರು ರಾಜ್. ರಾಜ್ ಕುಮಾರ್ ಅವರು ತಮ್ಮ ಸಿನಿಮಾದಲ್ಲಿ ಯಾವ ರೀತಿಯಾಗಿ ಸಾಮಾಜಿಕ ಕಳಕಳಿ ಸಂದೇಶ ನೀಡುತ್ತಿದ್ದರೋ ಅದೇ ರೀತಿಯಾಗಿ ತಮ್ಮ ನಿಜ ಜೀವನದಲ್ಲಿಯೂ ಸಹ ಉತ್ತಮ ಸಜ್ಜನ ಬದುಕನ್ನ ನಡೆಸಿದರು. ಅಂತೆಯೇ ಇಡೀ ಚಿತ್ರರಂಗವನ್ನು ತಮ್ಮ ಕುಟುಂಬದಂತೆ ನೋಡುತ್ತಿದ್ದರು.

ಜೊತೆಗೆ ಬಿಡುವಿನ ಸಂಧರ್ಭದಲ್ಲಿ ಸಾದ್ಯವಾದಷ್ಟು ಚಿತ್ರರಂಗದ ಅನೇಕ ಕಲಾವಿದರನ್ನ ಒಟ್ಟುಗೂಡಿಸಿ ತಮ್ಮ ಮನೆಯಲ್ಲಿಯೇ ಅವರ ಕಷ್ಟ-ಸುಖಗಳನ್ನ ವಿಚಾರಿಸುತ್ತಿದ್ದರು. ಅಂತೆಯೇ ಸಿನಿ ಕಲಾವಿದರ ಕುಟುಂಬದಲ್ಲಿ ನಡೆಯುವ ಎಲ್ಲಾ ಶುಭ ಕಾರ್ಯಗಳಲ್ಲಿ ರಾಜ್ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರೊಟ್ಟಿಗೆ ಹೋಗಿ ನವ ವಧು-ವರರಿಗೆ ಆಶೀರ್ವಾದ ಮಾಡಿ ಬರುತ್ತಿದ್ದರು. ಅಂತೆಯೇ ರಾಜ್ ಅವರು ತಮ್ಮ ಸಹ ನಟ ತೂಗುದೀಪ್ ಶ್ರೀ ನಿವಾಸ್ ಅವರ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮದುವೆಗೂ ಕೂಡ ದಂಪತಿ ಸಮೇತವಾಗಿ ನವ ಜೋಡಿಗಳಿಡೆ ಶುಭ ಹಾರೈಸಿದ್ದರು. ಇವರ ಆಗಮನಕ್ಕೆ ದರ್ಶನ್ ಕುಟುಂಬ ಮನದುಂಬಿ ಹರ್ಷ ವ್ಯಕ್ತಪಡಿಸಿತ್ತು. ದರ್ಶನ್ ಅವರ ತಂದೆ ತೂಗುದೀಪ್ ಶ್ರೀ ನಿವಾಸ್ ಅವರು ರಾಜ್ ಅವರೊಟ್ಟಿಗೆ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಅವರಿಬ್ಬರ ನಡುವೆ ಅಂತಹ ಸ್ನೇಹ ಸಂಬಂಧ ಕೂಡ ಅಷ್ಟೇ ಗಾಢವಾಗಿತ್ತು. ಹಾಗಾಗಿಯೇ ರಾಜ್ ಅವರು ತೂಗುದೀಪ್ ಅವರು ಮನೆ ಕಟ್ಟುವಾಗ ಅವರಿಗೆ ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದರು‌. ಇಂದೂ ಕೂಡ ಮೈಸೂರಿನಲ್ಲಿರುವ ತೂಗುದೀಪ್ ಶ್ರೀನಿವಾಸ್ ಅವರ ಮನೆಗೆ ಮುತ್ತುರಾಜ್ ಅಂತಾನೇ ಶೀರ್ಷಿಕೆ ನೀಡಿದ್ದಾರೆ. ಇನ್ನು ನಟ ದರ್ಶನ್ ಅವರು ತಮ್ಮ ಸ್ನೇಹಿತರ ಹುಟ್ಟು ಹಬ್ಬದ ಸಮಾರಂಭದಲ್ಲಿ ವಿಜಯಲಕ್ಷ್ಮಿ ಅವರನ್ನ ನೋಡುತ್ತಾರೆ. ಅಲ್ಲಿ ದರ್ಶನ್ ಅವರಿಗೆ ವಿಜಯಲಕ್ಷ್ಮಿ ಅವರನ್ನು ಇಷ್ಟ ಪಡುತ್ತಾರೆ. ಈ ವಿಚಾರವನ್ನು ತಮ್ಮ ತಾಯಿ ಬಳಿ ತಿಳಿಸಿ 2003.ರಲ್ಲಿ ವಿಜಯಲಕ್ಷ್ಮಿ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುತ್ತಾರೆ.

Leave a Reply

%d bloggers like this: