ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರ ನಡುವೆ ಇರುವ ನಿಜವಾದ ವಯಸ್ಸಿನ ಅಂತರ ಎಷ್ಟು ಗೊತ್ತಾ

ಚಂದನವನದಲ್ಲಿ ಪ್ರೀತಿಸಿ ಮದುವೆಯಾಗಿ,ಸುಂದರವಾಗಿ ಬದುಕು ಕಟ್ಟಿಕೊಂಡಿರುವ ಹಲವಾರು ಜೋಡಿಗಳಿವೆ.ಆದರೆ ಹಲವು ಸಲ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ವೈಯಕ್ತಿಕ ಬದುಕಿನ ಕುರಿತು ಒಂದಷ್ಟು ಕುತೂಹಲ ಭರಿತ ಪ್ರಶ್ನೆಗಳಿರುತ್ತವೆ.ಅದರಲ್ಲಿಯೂ ಸ್ಟಾರ್ ದಂಪತಿಗಳ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ.ಈ ರೀತಿಯಾಗಿ ವಯಸ್ಸಿನಲ್ಲಿ ಅಂತರ ಇರುವ ಜೋಡಿಗಳನ್ನ ನಾವು ಬಾಲಿವುಡ್ ಹೆಚ್ಚು ಕಾಣಬಹುದು.ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ವಯಸ್ಸಿನ ಅಂತರ ಇರುವ ಜೋಡಿಗಳಿಲ್ಲವೇ ಅನ್ನುವಂತದ್ದಲ್ಲ.ನಮ್ಮಲ್ಲಿಯೂ ಕೂಡ ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ನಟರನ್ನ ಮದುವೆ ಆಗಿರುವ ನಟಿಯರ ಉದಾಹರಣೆಗಳಿವೆ.

ಆ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿ.ವರ್ಷಗಳ ಕಾಲ ಪ್ರೀತಿಸಿ ನಂತರ ಮದುವೆ ಮಾಡಿಕೊಂಡ ಈ ಜೋಡಿ ಸುಂದರ ಆದರ್ಶ ದಂಪತಿಗಳಾಗಿ ಬದುಕು ನಡೆಸುತ್ತಿದ್ದಾರೆ.ನಟ ಯಶ್ ರಾಧಿಕಾ ಪಂಡಿತ್ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರು ಎಂಬುದು ಗಮನಾರ್ಹ.ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ದಂಪತಿ,ಉಪೇಂದ್ರ ಮತ್ತು ಪ್ರಿಯಾಂಕಾ,ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ.

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದಾಕ್ಷಣ ಡಿ-ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್,ಒಡೆಯ,ಯಜಮಾನ,ಪ್ರೀತಿಯ ದಾಸ ಹೀಗೆ ತಮ್ಮ ಅಭಿಮಾನಿಗಳಿಂದ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ದರ್ಶನ್ ಅವರಿಗೆ ನಾಡಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಮಾಸ್ ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ಏಕೈಕ ನಟ ಅಂದರೆ ಅದು ದರ್ಶನ್.ದರ್ಶನ್ ನಿರ್ಮಾಪಕರ ಚಿನ್ನದ ಗಣಿ.ದರ್ಶನ್ ಸಿನಿಮಾಗೆ ಹಾಕಿದ ಬಂಡವಾಳವನ್ನು ಮೊದಲ ವಾರದಲ್ಲಿ ವಾಪಸ್ ತರಬಲ್ಲಂತಹ ಸಾಮರ್ಥ್ಯವುಳ್ಳ ನಟ ಅಂದರೆ ಅದು ದರ್ಶನ್.ಅಷ್ಟರ ಮಟ್ಟಿಗೆ ರಾಜ್ಯಾದಾದ್ಯಂತ ಅವರ ಜನಪ್ರಿಯತೆ.ಅವರೊಟ್ಟಿಗೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಕಾದು ಕುಳಿತಿರುತ್ತಾರೆ.

ದರ್ಶನ್ ಸಿನಿಮಾ ನೋಡಲು ಅವರ ಲಕ್ಷಾಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.ವಿಶೇಷ ಅಂದರೆ ಇವರ ಸಿನಿಮಾ ನೋಡಲು ಮಧ್ಯರಾತ್ರಿ ಟಿಕೆಟ್ ಪಡೆದು ಬೆಳಿಗ್ಗೆವರೆಗೂ ಸಾಲಿನಲ್ಲಿ ನಿಂತು ಚಿತ್ರ ನೋಡ ಬಯಸುವ ಫ್ಯಾನ್ಸ್ ಹೊಂದಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ತಮ್ಮ ಸಿನಿಮಾಗಳಿಂದ ಮಾತ್ರ ಜನರ ಪ್ರೀತಿ,ವಿಶ್ವಾಸಗಳಿಸಲ್ಲ.ಅವರ ಮಾನವೀಯ ಗುಣ,ಸೇವಾ ಮನೋಭಾವದಿಂದ ಇಡೀ ನಾಡಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಇನ್ನು ಇವರ ದಾಂಪತ್ಯ ಜೀವನದಲ್ಲಿ ಕೆಲವು ಭಾರಿ ವಿರಸ,ಭಿನ್ನಾಭಿಪ್ರಾಯಗಳು ಎದರಾಗಿದ್ದರು ಕೂಡ,ಇಂದಿಗೂ ಕೂಡ ಎಲ್ಲವನ್ನು ಸರಿದೂಗಿಸಿಕೊಂಡು ಜೊತೆಯಾಗಿ ಬದುಕು ಸಾಗಿಸುತ್ತಿದ್ದಾರೆ.ಈ ದಂಪತಿಗಳಿಗೆ ವಿನೀಶ್ ಎಂಬ ಮಗನಿದ್ದಾನೆ.ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರದ್ದು ಲವ್ ಮ್ಯಾರೇಜ್.ಹೌದು 2000 ಇಸವಿಯಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟದ್ದಾರೆ.ವಿಜಯಲಕ್ಷ್ಮಿ ದರ್ಶನ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.ಇನ್ನು ಈ ದಂಪತಿಗಳ ನಡುವೆ ಇರುವ ವಯಸ್ಸಿನ ಅಂತರ 11 ವರ್ಷಗಳು.ವಿಜಯಲಕ್ಷ್ಮಿ ದರ್ಶನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ.ಇನ್ನು ಕಳೆದ ವರ್ಷ ಲಾಕ್ಡೌನ್ ಸಂಧರ್ಭದಲ್ಲಿ ವಿಜಯಲಕ್ಷ್ಮಿಯವರು ಹೊಸದೊಂದು ಆನ್ಲೈನ್ ವೆಜಿಟೇಬಲ್ ಸ್ಟಾರ್ಟ್ ಅಪ್ ಉದ್ಯಮವನ್ನು ಆರಂಭಿಸಿದ್ದಾರೆ.

Leave a Reply

%d bloggers like this: