ಡಾರ್ಲಿಂಗ್ ಕೃಷ್ಣ ಅವರ ಹೊಸ ಚಿತ್ರದಲ್ಲಿ ‘ದೇವರ’ ಪಾತ್ರದಲ್ಲಿ ಕಾಣಿಸಿಕೊಂಡ್ರು ಪುನೀತ್ ರಾಜ್‍ಕುಮಾರ್ ಅವರು

ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ನಿನ್ನೆ ಅಂದರೆ ಜುಲೈ 25ರಂದು ರಿಲೀಸ್ ಆಗಿದೆ. ಈ ಸಿನಿಮಾ ಟೀಸರ್ ರಿಲೀಸ್ ಆಗಿರೋದಕ್ಕೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಖತ್ ಖುಷಿಯ ಜೊತೆಗೆ ಭಾವುಕರಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಲಕ್ಕಿಮ್ಯಾನ್ ಚಿತ್ರಕ್ಕೂ ಅಪ್ಪು ಅವ್ರಿಗೂ ಏನ್ ಸಂಬಂಧ ಅಂತ ನಿಮಗೆ ಕಾಡಬಹುದು. ಆದ್ರೇ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ವಿಶೇಷ ಅಂದರೆ ಅಪ್ಪು ಅವರು ಈ ಸಿನಿಮಾದಲ್ಲಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೈಕೆಲ್ ಜಾಕ್ಸನ್ ಅಂತಾನೇ ಕರೆಸಿಕೊಳ್ಳುವ ನಟ, ನಿರ್ದೇಶಕ, ಡ್ಯಾನ್ಸರ್ ಆಗಿರುವ ಪ್ರಭುದೇವರೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.

ಈಗಾಗಲೇ ಈ ರಿಲೀಸ್ ಆಗಿರುವ ಲಕ್ಕಿಮ್ಯಾನ್ ಚಿತ್ರದ ಟೀಸರ್ ನಲ್ಲಿ ಪ್ರಭುದೇವ ಅವರೊಟ್ಟಿಗೆ ಅಪ್ಪು ಅವರು ಡ್ಯಾನ್ಸ್ ಮಾಡಿರುವ ದೃಶ್ಯದ ಝಲಕ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಈ ಲಕ್ಕಿ ಮ್ಯಾನ್ ಚಿತ್ರದಲ್ಲಿ ನಾಯಕ ನಟನಾಗಿ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟ ಕೃಷ್ಟ ನಟಿಸಿದ್ದು, ಇವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಟೀಸರ್ ಅಲ್ಲಿ ಅಪ್ಪು ಅವರು ನಿನ್ ಲೈಫ್ ನಲ್ಲಿ ಆಗಿರೋ ತಪ್ಪುಗಳನ್ನ ಸರಿ ಮಾಡ್ಕೋಳೋಕೆ ನಿನ್ಗೊಂದ್ ಅವಕಾಶ ಕೊಡ್ತಿನಿ ಅನ್ನೋ ಡೈಲಾಗ್ ಹೇಳಿದ್ದಾರೆ. ಟೀಸರಲ್ಲಿನ ಈ ಡೈಲಾಗ್ ಗೇ ಅಪ್ಪು ಅಭಿಮಾನಿಗಳು ಆ ದೇವರು ನಿಮಗೂ ಕೂಡ ಒಂದು ಅವಕಾಶ ಕೊಡಬೇಕಿತ್ತು ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.

ಜೇಮ್ಸ್ ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಅವರನ್ನ ಅವರದ್ದೇ ಕನಸಿನ ನೇಚರ್ ಡಾಕ್ಯುಮೆಂಟರಿ ಸಿನಿಮಾ ಆಗಿರುವ ಗಂಧದಗುಡಿ ಮತ್ತು ಈ ಲಕ್ಕಿ ಮ್ಯಾನ್ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿರುತ್ತದೆ. ಇನ್ನು ಈ ಲಕ್ಕಿ ಮ್ಯಾನ್ ಸಿನಿಮಾ ಚಿತ್ರದ ಪೋಸ್ಟರ್ ಗಳಲ್ಲಿ ಅಪ್ಪು ಅವರು ಕೂಡ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸವಾಗಿದೆ. ಲಕ್ಕಿ ಮ್ಯಾನ್ ಚಿತ್ರ ಇದೇ ಆಗಸ್ಟ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಚಿತ್ರಕ್ಕೆ ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದು, ಮೀನಾಕ್ಷಿ ಸುಂದರಂ ಮತ್ತು ಸುಂದರ ಕಾಮರಾಜ್ ಬಂಡವಾಳ ಹೂಡಿದ್ದಾರೆ. ಜೀವ ಶಂಕರ್ ಛಾಯಾಗ್ರಹಣ, ವಿಜಯ್ ಮತ್ತು ವಿಕ್ಕಿ ಅವರ ರಾಗ ಸಂಯೋಜನೆ, ಮಂಜು ಮಾಂಡವ್ಯ ಅವರ ಸಂಭಾಷಣೆಯ ಜೊತೆಗೆ ಸಾಧು ಕೋಕಿಲ ಅವರ ಹಿನ್ನೆಲೆ ಸಂಗೀತ ಈ ಲಕ್ಕಿ ಮ್ಯಾನ್ ಸಿನಿಮಾಗಿದೆ.

Leave a Reply

%d bloggers like this: