ಡಾನ್ಸ್ ನಲ್ಲಿ ಚಿನ್ನ ಪದಕ ಗೆದ್ದ ಕನ್ನಡದ ಏಕೈಕ ನಟಿ ಇವರೇ.. ಖ್ಯಾತ ನಟಿ ನೋಡಿ ಒಮ್ಮೆ

ಜಾಕಿ ಚಿತ್ರದಲ್ಲಿ ಪುಟ್ಟವ್ವ ಎಂಬ ಅಂಧಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ಗೋಲ್ಡ್ ಮೆಡಲ್ ಪಡೆದು ಸುದ್ದಿ ಆಗಿದ್ದಾರೆ..! ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದಕ್ಕೆ ಕಾಯುವ ತಾಳ್ಮೆ,ಸಹನೆ ಇರಬೇಕು ಅಷ್ಟೇ. ಅಂದಹಾಗೆ ಈ ನಟಿ ಗೋಲ್ಡ್ ಮೆಡಲ್ ಪಡೆದಿರುವುದು ಯಾವುದೋ ಪರೀಕ್ಷೆಗಾಗಿ ಅಲ್ಲ‌. ತನ್ನಲ್ಲಿರುವ ವಿಶೇಷವಾದ ಪ್ರತಿಭೆಗೆ. ಹೌದು ಸ್ಯಾಂಡಲ್ ವುಡ್ ನ ಖ್ಯಾತ ನಿ ರ್ದೇಶಕ ದುನಿಯಾ ಸೂರಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಜಾಕಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಪುಟ್ಟವ್ವ ಎಂಬ ಅಂಧಳ ಪಾತ್ರದಲ್ಲಿ ನಟಿ ನಿಶಾ ತುಂಬಾ ಅಚ್ಚುಕಟ್ಟಾಗಿ ಅಭಿನಯಿಸಿ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ಜಾಕಿ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಹೊಸದೊಂದು ತಿರುವು ಸಿಗುವುದೇ ಈ ಪುಟ್ಟವ್ವಳ ಕೊಲೆಯ ನಂತರ. ಹಾಗಾಗಿ ಈ ಪುಟ್ಟವ್ವಳ ಪಾತ್ರ ನಿರ್ವಹಿಸಿದ ನಟಿ ನಿಶಾ ಅವರನ್ನ ಕನ್ನಡಿಗರು ಮರೆಯಲು ಸಾದ್ಯವಿಲ್ಲ.

ಜಾಕಿ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿ ಬರೋಬ್ಬರಿ ಹತ್ತು ವರ್ಷಗಳು ಕಳೆದಿವೆ. ಹೀಗ್ಯಾಕೆ ಈ ಜಾಕಿ ಚಿತ್ರದ ನಟಿಯ ಬಗ್ಗೆ ಸುದ್ದಿ ಆಗಿದೆ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೂ ಇದೆ. ಇತ್ತೀಚೆಗಷ್ಟೇ ಪೋರ್ಚುಗಲ್ ಬಾಗ್ರಾದಲ್ಲಿ ಫುಟ್ ಬಾಲ್ ವರ್ಲ್ಡ್ ಕಪ್, ಕ್ರಿಕೆಟ್ ವರ್ಲ್ಡ್ ಕಪ್, ಅಂತಹ ಒಂದಷ್ಟು ವರ್ಲ್ಡ್ ಕಪ್ ಟೂರ್ನಿ ನಡೆದವು. ಅದೇ ರೀತಿಯಾಗಿ ಡ್ಯಾನ್ಸ್ ವರ್ಲ್ಡ್ ಕಪ್ ಕೂಡ ನಡೆಯಿತು. ಈ ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ನಟಿ ನಿಶಾ ಅವರು ‌ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಈ ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ನಟಿ ನಿಶಾ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ನಿಶಾ ಭಾರತಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.

ಹೌದು ಕನ್ನಡದ ಶ್ರೀ ವಿಷ್ಣು ದಶಾವಾತಾರ ಪೌರಾಣಿಕ ಧಾರಾವಾಹಿಯಲ್ಲಿ ನಟಿ ನಿಶಾ ಅಭಿನಯಿಸಿದ್ದಾರೆ. ಕೇವಲ ನಟನೆ ಮಾತ್ರ ಅಲ್ಲದೆ ನಿಶಾ ಅವರು ನಾಟ್ಯ ಪ್ರವೀಣೆ. ಡ್ಯಾನ್ಸ್ ವರ್ಲ್ಡ್ ಕಪ್ ಕಾಂಪಿಟೇಶನ್ ಅಲ್ಲಿ ನಿಶಾ ಅವರು ತಮ್ಮ ಜೊತೆಗಾರ ಅನಿರುದ್ದ್ ಅವರೊಟ್ಟಿಗೆ ಉತ್ತಮ ಪ್ರದರ್ಶನ ತೋರಿ ಚಿನ್ನದ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಬರೋಬ್ಬರಿ ಐವತ್ತೊಂದು ದೇಶಕ್ಕಿಂತಲೂ ಹೆಚ್ಚು ನೃತ್ಯಪಟುಗಳು ಸ್ಪರ್ಧಿಸಿದ್ದರು. ಒಟ್ಟಾರೆಯಾಗಿ ಕನ್ನಡದ ನಟಿಯೊಬ್ಬರು ಈ ಅಂತರಾಷ್ಟ್ರಿಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ಸಂಗತಿ ಎನ್ನಬಹುದು.

Leave a Reply

%d bloggers like this: