ದಾಂಪತ್ಯ ಜೇವನಕ್ಕೆ ಕಾಲಿಡುತ್ತಿರುವ ಬ್ರಹ್ಮಗಂಟು ಧಾರಾವಾಹಿಯ ಖ್ಯಾತ ನಟಿ ಭಾರತಿ.. ಹುಡುಗ ಯಾರು ಗೊತ್ತಾ? ನೋಡಿ ಒಮ್ಮೆ

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಯ ನಟಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದತೆ ನಡೆಸುತ್ತಿದ್ದಾರಂತೆ…! ಕನ್ನಡ ಕಿರುತೆರೆಯ ಅನೇಕ ಯುವ ನಟ-ನಟಿಯರು ಬ್ಯಾಚ್ಯುಲರ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಒಲವು ತೋರುತ್ತಿದ್ದಾರಂತೆ. ಇತ್ತೀಚೆಗಂತೂ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಅದರಂತೆ ಇದೀಗ ಕನ್ನಡ ಕಿರುತೆರೆ ಲೋಕದಲ್ಲಿ ಅಪಾರ ಜನ ಮೆಚ್ಚುಗೆ ಪಡೆದ ಬ್ರಹ್ಮಗಂಟು ಧಾರಾವಾಹಿಯ ಗೀತಾ ಪಾತ್ರಧಾರಿ ನಟಿ ಗೀತಾ ಭಾರತಿ ಭಟ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಹಾಗಾದರೆ ಏನಿದು ಈ ಮದುವೆಯ ವಿಚಾರ ಅಂತೀರಾ. ನೋಡಣ ಬನ್ನಿ. ಹೌದು ಜೀ಼ ಕನ್ನಡ ವಾಹಿನಿಯ ಬ್ರಹ್ಮ ಗಂಟು ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ನಟಿ ಕಮ್ ಗಾಯಕಿ ಗೀತಾ ಭಾರತಿ ಭಟ್ ಅವರು ತಮ್ಮ ಅತಿಯಾದ ದೇಹದ ತೂಕದ ಮೂಲಕ ಗಮನ ಸೆಳೆಯುವುದರ ಜೊತೆಗೆ ಬ್ರಹ್ಮಗಂಟು ಧಾರಾವಾಹಿಯಲ್ಲಿನ ಗೀತಾ ಪಾತ್ರದ ಮೂಲಕ ನಾಡಿನ ಮನೆ ಮಗಳಂತೆ ಭಾವನೆ ಹುಟ್ಟುವಂತಹ ನಟನೆ ಅವರದ್ದಾಗಿತ್ತು.

ನಟಿ ಗೀತಾ ಭಾರತಿ ಭಟ್ ಅವರು ಮೂಲತಃ ಮೂಡುಬಿದಿರೆ ಕಾರ್ಕಾಳದವರು. ತಾಯಿ ಶ್ರೀಮತಿ ಭಟ್ ತಂದೆ ಶ್ರೀ ಭಟ್. ತಂದೆ ಶ್ರೀ ಭಟ್ ಅವರು ಸಣ್ಣ ಉದ್ಯಮಿಯಾಗಿದ್ದರಂತೆ. ಇನ್ನು ನಟಿ ಗೀತಾ ಭಾರತಿ ಭಟ್ ಅವರಿಗೆ ಶಾಲಾ-ಕಾಲೇಜುಗಳಿಂದಾನೂ ಹಾಡುಗಾರಿಕೆಯ ಬಗ್ಗೆ ವಿಶೇಷವಾದ ಆಸಕ್ತಿ ಇರುತ್ತದೆಯಂತೆ. ಅಂತೆಯೇ ಗೀತಾ ಭಾರತಿ ಭಟ್ ಅವರು ಕಿರುತೆರೆ, ಸಿನಿಮಾ ಮತ್ತು ದೂರ ದರ್ಶನ ಉದ್ಯಮದಲ್ಲಿ ಕೆಲಸ ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ ಗಾಯಕಿಯಾಗಿ, ಕಂಠದಾನ ಕಲಾವಿದೆಯಾಗಿಯೂ ಕೂಡ ಗುರುತಿಸಿಕೊಳ್ಳುತ್ತಾರೆ. ಮಿನುಗುವ ಕಣ್ಣು, ದುಂಡನೆಯ ಮುಖ ಹೊಂದಿರುವ ಗೀತಾ ಭಾರತಿ ಭಟ್ ಅವರಿಗೆ 2017 ರಲ್ಲಿ ಜನಪ್ರಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅವಕಾಶ ಸಿಗುತ್ತದೆ. ಈ ಮೂಲಕ ನಾಡಿನ ಮನೆ ಮಾತಾಗುತ್ತಾರೆ.

2020 ರಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಗೀತಾ ಭಾರತಿ ಭಟ್ ಅವರು ಭಾಗವಹಿಸುತ್ತಾರೆ. ಇದೀಗ ಈ ನಟಿಯ ಹೊಸ ಸುದ್ದಿ ಏನಪ್ಪಾ ಅಂದರೆ ಗೀತಾ ಭಾರತಿ ಭಟ್ ಅವರು ದುಬೈ ಮೂಲದ ಫೇಮಸ್ ಯೂಟ್ಯೂಬರ್ ಮೊಹಮ್ಮದ್ ಬೈರಾಗ್ದರಿ ಎಂಬುವರನ್ನು ಪ್ರೀತಿಸುತ್ತಿದ್ದಾರಂತೆ. ಅಷ್ಟೆ ಅಲ್ಲದೆ ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.