ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಗ್ನಿಸಾಕ್ಷಿ ನಟಿ ಪ್ರಿಯಾಂಕಾ! ಹುಡುಗ ಇವರೇ ನೋಡಿ

ಕನ್ನಡ ಕಿರುತೆರೆ ಧಾರಾವಾಹಿಯ ಖ್ಯಾತ ಖಳ ನಟಿ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಒಬ್ಬರ ನೋಡಿ ಮತ್ತೊಬ್ಬರು ಶುರು ಮಾಡಿದ್ರು ಅನ್ನುವ ಮಾತಿನಂತೆ ಇತ್ತೀಚೆಗೆ ಅನೇಕ ಕಲಾವಿದರು ಮದುವೆ ಆಗುತ್ತಿರುವುದು ಇನ್ನೊಂದಷ್ಟು ಮಂದಿಗೆ ತಾವು ಕೂಡ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಬೇಕು ಎಂಬ ಆಸೆ ಚಿಗುರೊಡೆಸಿದೆ ಎನ್ನಬಹುದು. ಮದುವೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಒಂದು ಬಹು ಮುಖ್ಯ ಘಟ್ಟ. ಜೊತೆಯಾಗಿ ಸಿಗುವ ಸಂಗಾತಿಯ ಬಗ್ಗೆ ಕೊಂಚ ಜಾಗೃತಿಯಿಂದ ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರತಿಯೊಬ್ಬ ಹೆಣ್ಣು ಮಗಳಿಗೆ ತನ್ನ ಮದುವೆಯ ಬಗ್ಗೆ ಸುಂದರವಾದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಅದಕ್ಕೆ ಕಾಲ ಸಂಧರ್ಭ ಅನ್ನುವುದು ಸೂಕ್ತವಾಗಿ ಕೂಡಿ ಬರಬೇಕು ಅಷ್ಟೆ. ಅಂತೆಯೇ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ಖಳ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಕೂಡ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಮನಸ್ಸು ಮಾಡಿದ್ದಾರೆ.

ಪ್ರಿಯಾಂಕಾ ಅಂದಾಕ್ಷಣ ಯಾರು ಇವರು ಎಂದು ನಿಮಗೆ ಪ್ರಶ್ನೆ ಉಂಟಾಗಬಹುದು. ಆದರೆ ಅಗ್ನಿಸಾಕ್ಷಿ ಧಾರಾವಾಹಿಯ ಖ್ಯಾತಿಯ ಖಳ ನಟಿ ಚಂದ್ರಿಕಾ ಅಂದಾಕ್ಷಣ ತಟ್ಟನೆ ಆ ಉಬ್ಬೇರಿದ ಕಣ್ಣಿನ ನೋಟ, ತನ್ನ ಆ ಖಡಕ್ ವಾಯ್ಸ್ ಮೂಲಕ ಸೆಳೆಯುವ ಪ್ರಿಯಾಂಕಾ ನೆನಪಿಗೆ ಬರುತ್ತಾರೆ. ನಟಿ ಪ್ರಿಯಾಂಕಾ ಅವರ ಬಗ್ಗೆ ತಿಳಿಯುವುದಾದರೆ ಇವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. ಬ್ರಾಹ್ಮಣ ಕುಟುಂಬದ ಪ್ರಿಯಾಂಕಾ ಅವರು ಓದಿದ್ದು ಇಂಜಿನಿಯರಿಂಗ್. ಇಂಜಿನಿಯರ್ ಓದಿದ್ರು ಕೂಡ ತದ ನಂತರ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಮಾಡೆಲಿಂಗ್ ಕ್ಷೇತ್ರ. ಹೀಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಾದ ಬಳಿಕ 2013 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಬದಲಿ ಮುಖವಾಗಿ ಚಂದ್ರಿಕಾ ಪಾತ್ರಕ್ಕೆ ಎಂಟ್ರಿ ಕೊಟ್ಟವರೇ ನಟಿ ಪ್ರಿಯಾಂಕಾ.

ನಟಿ ಪ್ರಿಯಾಂಕಾ ಅವರ ಹಾವಭಾವ, ಕಣ್ಣೋಟ ನಟನೆ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡಿತು. ಚಂದ್ರಿಕಾ ಎಂಬ ವಿಲನ್ ಪಾತ್ರ ಪ್ರಿಯಾಂಕಾ ಅವರಿಗೆ ಉತ್ತಮ ಹೆಸರು ತಂದು ಕೊಟ್ಟಿತು. ಇದಾದ ಬಳಿಕ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 7 ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಸರಿ ಸುಮಾರು ತೊಂಭತ್ತು ದಿನಗಳ ಹೆಚ್ಚು ಕಾಲ ಇದ್ದು ತರ್ಲೆ ತಮಾಷೆಯೊಟ್ಟಿಗೆ ಮನರಂಜನೆ ನೀಡಿದ್ದರು. ಇದೀಗ ಮತ್ತೆ ದೊಡ್ಮನೆಯಿಂದ ಹೊರಬಂದ ಬಳಿಕ ಮತ್ತೆ ವಿವಿಧ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ತಮ್ಮ ನಟನಾವೃತ್ತಿಯಲ್ಲಿ ಯಶಸ್ವಿರಯಾಗಿ ಸಾಗುತ್ತಿದ್ದಾರೆ. ಇದರ ನಡುವೆ ಪ್ರಿಯಾಂಕಾ ಅವರು ಮದುವೆ ಆಗುವುದರ ಬಗ್ಗೆಯೂ ಕೂಡ ಆಲೋಚನೆ ಮಾಡಿದ್ದಾರಂತೆ.